ಸಿಗರೇಟ ಸೇದುತ್ತಿರುವ ಭಗವಾನ ಶಿವ ಮತ್ತು ಪಾರ್ವತಿ ಇವರ ವೇಶ ಧರಿಸಿರುವ ಪುರುಷರು !

`ಕಾಳಿ’ ಭಿತ್ತಿಪತ್ರದ ಬಳಿಕ ಈಗ ಧರ್ಮದ್ರೋಹಿ ಲೀನಾ ಮಣಿಮೇಕಲೈ ಇವರಿಂದ ಆಕ್ಷೇಪಾರ್ಹ ಛಾಯಾಚಿತ್ರ ಪ್ರಸಾರ!

ಹೊಸ ದೆಹಲಿ – `ಕಾಳಿ’ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೀನಾ ಮಣಿಮೇಕಲೈ ಇವರು ಅವರ ಆಕ್ಷೇಪಾರ್ಹ ಭಿತ್ತಿಪತ್ರದ ಬಗ್ಗೆ ಕ್ಷಮೆ ಕೋರಲು ನಿರಾಕರಿಸಿರುವಾಗಲೇ ಒಂದು ಹೊಸ ಛಾಯಾಚಿತ್ರ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಈಗ ಭಗವಾನ ಶಿವ ಮತ್ತು ಪಾರ್ವತಿದೇವಿಯವರ ಅಪಮಾನ ಮಾಡಲಾಗಿದೆ. ಈ ಛಾಯಾಚಿತ್ರದಲ್ಲಿ ಭಗವಾನ ಶಿವ ಮತ್ತು ಪಾರ್ವತಿದೇವಿಯವರ ವೇಶ ಧರಿಸಿರುವ ಪುರುಷರು ಧೂಮಪಾನ ಮಾಡುತ್ತಿರುವುದನ್ನು ತೋರಿಸಲಾಗಿದೆ. `ಇತರೆಡೆ’ ಎಂದು ಇದಕ್ಕೆ ಶೀರ್ಷಿಕೆಯನ್ನು ನೀಡಲಾಗಿದೆ. ಈ ಛಾಯಾಚಿತ್ರದಿಂದ ಸಾಮಾಜಿಕ ಮಾಧ್ಯಮದಿಂದ ಲೀನಾ ಮತ್ತೊಮ್ಮೆ ಟೀಕೆಗೆ ಒಳಗಾಗಿದ್ದಾರೆ.

ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ! (ಅಂತೆ) – ಲೀನಾ ಮಣಿಮೇಕಲೈ

ಲೀನಾ ಮಣಿಮೇಕಲೈ ಇವರು ಈ ಛಾಯಾಚಿತ್ರದ ಕುರಿತು ಟ್ವೀಟ ಮಾಡುತ್ತಾ, ಹೇಳಿರುವುದೇನೆಂದರೆ, `ಭಾಜಪ `ಪೇ ರೋಲ ಟ್ರೋಲ್ ಆರ್ಮಿ’ಗೆ (ಹಣ ಪಡೆದು ಸಾಮಾಜಿಕ ಮಾಧ್ಯಮದಿಂದ ವಿರೋಧಿಸುವ ಸೈನ್ಯಕ್ಕೆ) ತಿಳಿದಿಲ್ಲ, ನಾಟಕದಲ್ಲಿ ಕೆಲಸ ಮಾಡುವ ಕಲಾಕಾರ ಅವರ ಕೆಲಸದ ಬಳಿಕ ಎಷ್ಟು ಶಾಂತವಾಗಿ ಇರುತ್ತಾರೆ. ಈ ಚಿತ್ರ ನನ್ನ ಚಲನಚಿತ್ರದ್ದಲ್ಲ. ಇದು ಗ್ರಾಮೀಣ ಭಾರತದ ಛಾಯಾಚಿತ್ರವಾಗಿದೆ. ಇದನ್ನು ಸಂಘ ಪರಿವಾರ ತನ್ನ ಅಪಾರ ದ್ವೇಷದಿಂದ ಮತ್ತು ಧಾರ್ಮಿಕ ಮೂಲಭೂತವಾದದ ಮೂಲಕ ಭಾರತದಿಂದ ನಷ್ಟಪಡಿಸಲು ನೋಡುತ್ತಿದೆ. ಭಾರತ ಎಂದಿಗೂ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ.’

ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ

ಹಿಂದೂ ಧರ್ಮದ ಅವಮಾನ ಮಾಡುವುದೆಂದರೆ ಉದಾರವಾದವೇ?- ಭಾಜಪ

ಈ ಛಾಯಾಚಿತ್ರದ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತ ಪಡಿಸುವಾಗ ಭಾಜಪ ವಕ್ತಾರ ಶಹಜಾದ ಪೂನಾವಾಲ ಹೇಳಿದ್ದಾರೆ, ಇದು ಅಭಿವ್ಯಕ್ತಿಯ ವಿಷಯವಲ್ಲ, ಇದು ಉದ್ದೇಶಪೂರ್ವಕ ಪ್ರಚೋದನೆಯಾಗಿದೆ. ಹಿಂದೂಗಳನ್ನು ಬಯ್ಯುವುದು, ಅಂದರೆ ಜಾತ್ಯಾತೀತವಾದವೇ? ಹಿಂದೂ ಧರ್ಮದ ಅವಮಾನ ಮಾಡುವುದು ಎಂದರೆ ಉದಾರವಾದ ಆಗುವುದೇ? ಸಾಮ್ಯವಾದಿಗಳು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಇವು ಲೀನಾಳನ್ನು ಬೆಂಬಲಿಸುತ್ತಿವೆ; ಆದ್ದರಿಂದ ಅವಳಿಗೆ ಇಂತಹ ಚಿತ್ರಗಳನ್ನು ಪ್ರಸಾರ ಮಾಡಲು ಪ್ರೋತ್ಸಾಹ ಸಿಗುತ್ತಿದೆ.

ಯಾರಿದು ಲೀನಾ ಮಣಿಮೇಕಲೈ ?

ಲೀನಾ ಮಣಿಮೇಕಲೈ ಇವರ ಜನ್ಮ ತಮಿಳುನಾಡಿನ ಮದುರೈನಲ್ಲಿ ಮಹಾರಾಜಪೂರಮ ಗ್ರಾಮದಲ್ಲಿ ಆಯಿತು. ಅವರ ಗ್ರಾಮದಲ್ಲಿ ಯಾವುದೇ ಬಾಲಕಿ ವಯಸ್ಸಿಗೆ ಬಂದಬಳಿಕ ಕೆಲವು ವರ್ಷದಲ್ಲಿಯೇ ಅವಳ ಮದುವೆ ಅವಳ ಮಾವನೊಂದಿಗೆ ಮಾಡುವ ಪದ್ಧತಿಯಿತ್ತು. ಲೀನಾಳ ಮದುವೆಯೂ ಅವಳ ಮಾವನೊಂದಿಗೆ ನಿರ್ಧಾರವಾಗಿತ್ತು. ಆದರೆ ಮದುವೆಯ ಸಿದ್ಧತೆ ಪ್ರಾರಂಭವಾಗಿರುವಾಗಲೇ ಅವಳು ಮನೆ ಬಿಟ್ಟು ಚೆನ್ನೈಗೆ ಓಡಿ ಹೋದಳು. ತದನಂತರ ಅವಳು ಅಭಿಯಂತರರ, ಹಾಗೆಯೇ ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಅನೇಕ ಸ್ಥಳಗಳಲ್ಲಿ ನೌಕರಿ ಮಾಡಿದಳು ಮತ್ತು ಬಳಿಕ ಚಲನಚಿತ್ರ ಕ್ಷೇತ್ರಕ್ಕೆ ಬಂದರು. ದೇವದಾಸಿ ಪದ್ಧತಿಯ ಬಗ್ಗೆ ಲೀನಾ ನಿರ್ಮಿಸಿದ `ಮಾಥಮ್ಮಾ’ ಸಾಕ್ಷ್ಯಚಿತ್ರದ ಬಗ್ಗೆ ಅನೇಕ ಜನರು ಆಕ್ಷೇಪ ದಾಖಲಿಸಿದ್ದರು. ದಲಿತ ಮಹಿಳೆಯರ ಮೇಲೆ ಆಗುವ ಹಿಂಸೆಯ ವಿಷಯದಲ್ಲಿ ತಯಾರಿಸಲಾಗಿರುವ `ಪರಾಯಿ’ ಮತ್ತು ಧನುಷ್ಕೋಡಿಯ ಮೀನುಗಾರರ ಮೇಲೆ ನಿರ್ಮಿಸಲಾಗಿದ್ದ ` ಸೆಂಗದಾಲ’ ಈ ಸಾಕ್ಷ್ಯಚಿತ್ರದಿಂದ ವಿವಾದ ನಿರ್ಮಾಣವಾಗಿತ್ತು.

ಸಂಪಾದಕೀಯ ನಿಲುವು

ಈ ರೀತಿ ಉದ್ದೇಶಪೂರ್ವಕವಾಗಿ ಹಿಂದೂ ದೇವತೆಗಳ ಅಪಮಾನ ಮಾಡಿ ಭಾರತದಲ್ಲಿ ಅಸಂತೋಷ ನಿರ್ಮಾಣ ಮಾಡುವುದರ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದೆಯೇ ಎನ್ನುವುದನ್ನು ಭಾರತ ಸರಕಾರ ಕಂಡು ಹಿಡಿಯಬೇಕು.