ನೂಪುರ ಶರ್ಮಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯಗಳು ಹೊಣೆಗೇಡಿ ಮತ್ತು ಕಾನೂನ ವಿರೋಧಿ !

ದೆಹಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್ ಎನ್ ಧಿಂಗರಾ ಇವರ ಸ್ಪಷ್ಟೋಕ್ತಿ

ನವದೆಹಲಿ – ಉದಯಪುರದ ಘಟನೆ (ಕನ್ಹೈಯ್ಯಾಲಾಲ್ ಇವರ ಹತ್ಯೆ) ನೂಪುರ ಶರ್ಮಾ ಇವರಿಂದ ನಡೆದಿದೆ, ಇದು ಹೇಗೆ ಸಾಬೀತು ಆಗುವುದು? ಯಾವುದೇ ವಿಚಾರಣೆ ನಡೆಸದೆ, ಸಾಕ್ಷಿಗಳು ಇಲ್ಲದೆ ಮತ್ತು ನೂಪುರ ಶರ್ಮಾ ಇವರ ಪರ ವಾದ ಆಲಿಸಿಕೊಳ್ಳದೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದು ಕೇವಲ ಕಾನೂನುಬಾಹಿರ ಅಲ್ಲದೆ ಅಯೋಗ್ಯವು ಆಗಿದೆ. ಇದರ ಜೊತೆಗೆ ಈ ರೀತಿ ಅಭಿಪ್ರಾಯ ಹೊಣೆಗೇಡಿತನವೇ ಆಗಿದೆ ಎಂಬ ಪ್ರತಿಕ್ರಿಯೆ ದೆಹಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್ ಎನ್ ಧಿಂಗರಾ ವ್ಯಕ್ತಪಡಿಸಿದರು. ನೂಪುರ ಶರ್ಮಾ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾಯಮೂರ್ತಿ ಪಾರದಿವಾಲಾ ಇವರು ಉದಯಪುರದ ಘಟನೆಗೆ ನೂಪುರ ಶರ್ಮಾ ಇವರೇ ಹೊಣೆಯಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು, ಅದರ ಬಗ್ಗೆ ಧಿಂಗರಾ ಮಾತನಾಡುತ್ತಿದ್ದರು.

ಮಾಜಿ ನ್ಯಾಯಮೂರ್ತಿ ಧಿಂಗರಾ ಇವರು ಮಂಡಿಸಿರುವ ಸೂತ್ರಗಳು

೧. ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯದಿಂದ ನ್ಯಾಯಾಲಯದಲ್ಲಿ ಶರ್ಮಾ ಇವರ ಬಗ್ಗೆ ಪೂರ್ವಾಗ್ರಹ ನಿರ್ಮಾಣವಾಗಿದೆ !

ಸರ್ವೋಚ್ಚ ನ್ಯಾಯಾಲಯದ ಈ ಅಭಿಪ್ರಾಯದಿಂದ ಪ್ರಸ್ತುತ ಇರುವ ಕನಿಷ್ಠ ನ್ಯಾಯಾಲಯದಲ್ಲಿ ನೂಪುರ ಶರ್ಮಾ ಇವರ ಬಗ್ಗೆ ಪೂರ್ವಾಗ್ರಹ ನಿರ್ಮಾಣವಾಗಿದೆ. ಭಯ ತೋರಿಸಿ ಅಥವಾ ಬೆದರಿಕೆ ನೀಡಿ ಮನವಿ ತಿರಸ್ಕರಿಸಲಾಗಿದೆ. ಈಗ ಕನಿಷ್ಠ ನ್ಯಾಯಾಲಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯದ ವಿರೋಧದಲ್ಲಿ ಏನಾದರೂ ಮಾಡುವಂತಹ ಧೈರ್ಯ ತೋರಿಸುವುದಿಲ್ಲ.

೨. ನ್ಯಾಯಮೂರ್ತಿಯವರು ಅವರ ಅಭಿಪ್ರಾಯ ಆದೇಶದಲ್ಲಿ ಏಕೆ ಬರೆದಿಲ್ಲ?

ಹಾಗಾದರೆ ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯ ವ್ಯಕ್ತಪಡಿಸುವುದಿದ್ದರೆ ಅದು ಬರವಣಿಗೆಯಲ್ಲಿ ಬರೆಯಬೇಕಾಗಿತ್ತು. ಏಕೆಂದರೆ ಅದರ ವಿರುದ್ಧ ಮುಂದಿನ ಪೀಠದ ಹತ್ತಿರ ಹೋಗಬಹುದಾಗಿತ್ತು. ನ್ಯಾಯಮೂರ್ತಿ ವ್ಯಕ್ತಪಡಿಸಿರುವ ಅಭಿಪ್ರಾಯ ಅವರ ನಿರ್ಣಯದಲ್ಲಿ ಏಕೆ ಬರೆಯುತ್ತಿಲ್ಲ ?

೩. ಸರ್ವೋಚ್ಚ ನ್ಯಾಯಾಲಯ ಕಾನೂನಿಗಿಂತ ಮೇಲಾಗಿದೆಯೇ ?

ಸರ್ವೋಚ್ಚ ನ್ಯಾಯಾಲಯ ಕಾನೂನಿಗಿಂತ ದೊಡ್ಡದಾಗಿಲ್ಲ. ಕಾನೂನು ಹೇಳುತ್ತದೆ, ನೀವು ಯಾರನ್ನು ಅಪರಾಧಿ ಎಂದು ಹೇಳುತ್ತೀರಿ, ಅವರ ಮೇಲೆ ಮೊದಲು ಆರೋಪ ಸಾಬೀತುಪಡಿಸಬೇಕು. ವಾದಿ ಮತ್ತು ಪ್ರತಿವಾದಿ ಇಬ್ಬರಿಗೂ ವಾದ ಮಂಡಿಸಲು ಅನುಮತಿ ನೀಡಬೇಕು. ಹಾಗೂ ಸಾಕ್ಷಿದಾರರಿಗೂ ತಮ್ಮ ಸಾಕ್ಷಿ ಮಂಡಿಸಲು ಅವಕಾಶ ನೀಡಬೇಕು. ಇದರ ನಂತರ ನ್ಯಾಯಾಲಯ ಸಾಕ್ಷಿಗಳ ಆಧಾರದಲ್ಲಿ ಚಿಂತನೆ ಮಾಡಿ ನಿರ್ಣಯ ನೀಡಬಹುದು.

೪. ಮನವಿ ಬೇರೆ ಇರುವಾಗ ನೂಪುರ ಶರ್ಮಾ ಇವರ ಹೇಳಿಕೆಯ ಬಗ್ಗೆ ಸ್ವತಃ ಕಣ್ಣಾಯಿಸಿದ ನ್ಯಾಯಾಲಯ !

ಈ ಪ್ರಕರಣದಲ್ಲಿ ನೂಪುರ ಶರ್ಮಾ ಇವರಿಗೆ ಬಲಾತ್ಕಾರದ ಮತ್ತು ಜೀವ ಬೆದರಿಕೆಗಳು ಸಿಗುತ್ತಿವೆ. ಆದುದರಿಂದಲೇ ಅವರು ಅವರಾ ವಿರುದ್ಧ ವಿವಿಧ ರಾಜ್ಯಗಳಲ್ಲಿರುವ ಪ್ರಥಮ ವರ್ತಮಾನ ವರದಿಗಳನ್ನು ಒಂದೇ ಕಡೆಗೆ ತರಲು ಅನುಮತಿ ಕೋರಿದ್ದರು. ಆದರೆ ನ್ಯಾಯಾಲಯವು ಶರ್ಮಾ ಇವರ ಹೇಳಿಕೆಗಳತ್ತ ಸ್ವತಃ ಕಣ್ಣಾಯಿಸಿ ಶರ್ಮಾ ಇವರ ಹೇಳಿಕೆ ಜನರಿಗೆ ಪ್ರಚೋದನಕಾರಿ ಆಗಿದೆ ಎಂದು ಹೇಳಿ ವಿಷಯದಿಂದ ಕೈ ತೊಳೆದುಕೊಂಡಿದೆ.

೫. ನಾನು ಕನಿಷ್ಠ ನ್ಯಾಯಾಲಯದ ನ್ಯಾಯಾಧೀಶನಾಗಿದ್ದರೆ, ಈ ನ್ಯಾಯಮೂರ್ತಿಗಳನ್ನು ನ್ಯಾಯಾಲಯಕ್ಕೆ ಕರೆಯಿಸುತ್ತಿದೆ.

ಏನಾದರೂ ಸರ್ವೋಚ್ಚ ನ್ಯಾಯಾಲಯದ ಈ ನ್ಯಾಯಮೂರ್ತಿಗಳಿಗೆ ‘ನೂಪುರ ಶರ್ಮಾ ನೀಡಿರುವ ಹೇಳಿಕೆ ಪ್ರಚೋದನಕಾರಿ ಹೇಗೆ ಆಗಿದೆ ಎಂದು ನೀವು ನ್ಯಾಯಾಲಯಕ್ಕೆ ಬಂದು ಸಾಕ್ಷಿ ನೀಡಿ’ ಎಂದು ಹೇಳಿದ್ದರೆ ಆಗ ಅವರಿಗೆ ನ್ಯಾಯಾಲಯಕ್ಕೆ ಬರಬೇಕಾಗುತ್ತದೆ. ನಾನು ಕನಿಷ್ಠ ನ್ಯಾಯಾಲಯದ ನ್ಯಾಯಾಧೀಶನಾಗಿದ್ದರೆ ಆಗ ಈ ನ್ಯಾಯಮೂರ್ತಿಗಳನ್ನು ನ್ಯಾಯಾಲಯಕ್ಕೆ ಕರೆಸುತ್ತಿದ್ದೆ ಮತ್ತು ಸಾಕ್ಷಿ ಹೇಳಿಸುತ್ತಿದ್ದೆ !