ಸ್ಯಾಮ್ಸಂಗ್ ಮಾಡಿರುವ ವಿಡಂಬನೆಯಿಂದ ಪಾಕಿಸ್ತಾನದ ಮುಸಲ್ಮಾನರು ಹುಚ್ಚರಾಗಿದ್ದಾರೆ ! – ತಸ್ಲಿಮಾ ನಸರಿನ್

ಸ್ಯಾಮ್ಸಂಗ್ ನ. ೨೭ ಸಿಬ್ಬಂದಿಗಳ ಬಂಧನ

ನವದೆಹಲಿ – ‘ಪಾಕಿಸ್ತಾನದ ಮುಸಲ್ಮಾನರು ಸ್ಯಾಮ್ಸಂಗ್ ಕಂಪನಿ ತಯಾರಿಸಿರುವ ವಿಡಂಬನಾತ್ಮಕ ಕ್ಯೂಆರ್ ಕೋಡ್ ನಿಂದ ಹುಚ್ಚಾಗಿದ್ದಾರೆ. ಸ್ಯಾಮ್ಸಂಗ್ ನ ಕರ್ಮಚಾರಿಗಳನ್ನು ಬಂಧಿಸಲಾಗಿದೆ. ಮನುಷ್ಯನ ಮೂರ್ಖತನ ಅಮರ್ಯಾದಿತವಾಗಿದೆ’ ಎಂದು ಬಾಂಗ್ಲಾದೇಶದ ಮತ್ತು ಪ್ರಸ್ತುತ ಭಾರತದಲ್ಲಿ ವಾಸಿಸುವ ಪ್ರಸಿದ್ಧ ಲೇಖಕಿ ತಸ್ಲಿಮಾ ನಸ್ರೀನ್ ಇವರು ಟ್ವೀಟ್ ಮೂಲಕ ಹೇಳಿದರು.

ಮೂರು ದಿನಗಳ ಹಿಂದೆ ಸ್ಯಾಮ್ಸಂಗ್ ಕಂಪನಿಯಿಂದ ನಡೆದಿರುವ ಪೈಗಂಬರರ ತಥಾಕಥಿತ ಅವಮಾನದ ಪ್ರಕಾರದಲ್ಲಿ ಕರಾಚಿಯ ಸ್ಟಾರ್ ಸಿಟಿ ಮಾಲಿನಲ್ಲಿ ಮುಸಲ್ಮಾನರು ದೊಡ್ಡ ಪ್ರಮಾಣದಲ್ಲಿ ಧ್ವಂಸ ನಡೆಸಿದರು.

ಪೊಲೀಸರು ಅವಮಾನದ ಪ್ರಕರಣದಲ್ಲಿ ಸ್ಯಾಮ್ಸಂಗ್ ನ ೨೭ ಕರ್ಮಚಾರಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಕಂಪನಿ ಕ್ಷಮೆ ಕೂಡ ಕೇಳಿದೆ.