ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧದ ಆಂದೋಲನಕ್ಕೆ ಅನುಮತಿ ನಿರಾಕರಿಸಿದರು

ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಭಾರತ ಭೇಟಿ !

ದೆಹಲಿಯಲ್ಲಿನ ಗೋವಿಂದಪುರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹಾಗೂ ಠಾಣೆಯ ಪ್ರಮುಖರ ನಡುವೆ ಹೊಡೆದಾಟ !

ಪರಸ್ಪರರಲ್ಲಿ ಜಗಳವಾಡುವ ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆಯನ್ನು ಹೇಗೆ ಕಾಪಾಡುವರು ?

ಚತುಷ್ಚಕ್ರ ವಾಹನದ ಹಿಂದಿನ ಸೀಟಿನ ಮೇಲೆ ಕುಳಿತಿರುವವರಿಗೂ ಕೂಡ ಸೀಟ್ ಬೆಲ್ಟ್ ಕಡ್ಡಾಯ !

ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸಾಯರಸ ಮಿಸ್ತ್ರಿ ಇವರ ಅಪಘಾತದಲ್ಲಿ ನಿಧನರಾದ ನಂತರ ಚತುಷ್ಚಕ್ರ ವಾಹನದ ಹಿಂದಿನ ಸೀಟಿನ ಮೇಲೆ ಕುಳಿತಿರುವ ಪ್ರಯಾಣಿಕರಿಗೆ ‘ಸೀಟ್ ಬೆಲ್ಟ್’ ಕಡ್ಡಾಯ ಮಾಡಲಾಗಿದೆ. ಅದಕ್ಕಾಗಿ ‘ಸೀಟ್ ಬೆಲ್ಟ್’ ಹಾಕಿಕೊಳ್ಳುವ ವಿಷಯವಾಗಿ ಸತರ್ಕಗೊಳಿಸುವ ಪ್ರಣಾಳಿಕೆ ಆದಷ್ಟು ಬೇಗನೆ ಜಾರಿಗೊಳಿಸಲಾಗುವುದು.

ತೆರಿಗೆ ಇಲಾಖೆಯಿಂದ ಏಕಕಾಲಕ್ಕೆ ೧೦೦ ಸ್ಥಳಗಳಲ್ಲಿ ದಾಳಿ

ತೆರಿಗೆ ಇಲಾಖೆಯು ಸಪ್ಟೆಂಬರ್ ೭ ರಂದು ದೇಶಾದ್ಯಂತ ೧೦೦ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಾರಾಯಿ ಹಗರಣ, ಮಧ್ಯಾಹ್ನದ ಭೋಜನ, ರಾಜಕೀಯ ನಿಧಿ ಮತ್ತು ತೆರಿಗೆ ವಂಚನೆ ಇದಕ್ಕೆ ಸಂಬಂಧ ಪಟ್ಟದ್ದಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಛತ್ತಿಸ್‌ಗಢ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ದಾಳಿ ನಡೆಸಲಾಗಿದೆ.

ಕೇಂದ್ರ ಸರಕಾರದ ನ್ಯಾಯವಾದಿ ಎಂದು ನ್ಯಾಯವಾದಿ ವಿಷ್ಣು ಶಂಕರ ಜೈನ ಇವರ ನೇಮಕ !

ನ್ಯಾಯವಾದಿ ಜೈನ ಇವರು ಪ್ರಸ್ತುತ ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ವಿಷಯ ಮಂಡಿಸುತ್ತಿದ್ದಾರೆ.

೫ ಸಾವಿರ ಚತುಷ್ಚಕ್ರ ವಾಹನಗಳನ್ನು ಕದ್ದ ಅನಿಲ ಚೌಹಾಣ್ ಬಂಧನ !

ದೆಹಲಿ ಪೊಲೀಸರು ಸೆಪ್ಟೆಂಬರ್ ೫ ರಂದು ದೇಶದ ಅತಿದೊಡ್ಡ ಚತುಷ್ಚಕ್ರ ಕದ್ದಿದ್ದ ಅನಿಲ ಚೌಹಾಣ್ ಎಂಬಾತನನ್ನು ಬಂಧಿಸಿದ್ದಾರೆ. ಆತ ೫ ಲಕ್ಷ ಚತುಷ್ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ಆರೋಪ ಮೇಲಿದೆ. ಕಳೆದ ೨೭ ವರ್ಷಗಳಲ್ಲಿ ಆತ ಹಲವು ಟ್ಯಾಕ್ಸಿ ಚಾಲಕರನ್ನೂ ಕೊಂದಿದ್ದಾನೆ.

ರಾಜಕೀಯ ಪಕ್ಷಗಳಿಂದಾಗುವ ಧಾರ್ಮಿಕ ಚಿಹ್ನೆಗಳು ಮತ್ತು ಹೆಸರುಗಳ ಬಳಕೆಯನ್ನು ನಿಷೇಧಿಸಲು ಆಗ್ರಹ

ರಾಜಕೀಯ ಪಕ್ಷಗಳಿಂದ ಧಾರ್ಮಿಕ ಚಿಹ್ನೆಗಳು ಮತ್ತು ಹೆಸರುಗಳನ್ನು ಬಳಸುವುದನ್ನು ನಿಷೇಧಿಸುವಂತೆ ಕೋರಿ ಸೈಯದ್ ವಾಸಿಂ ರಿಜ್ವಿ ಇವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಕಳುಹಿಸಿ ಉತ್ತರ ಕೇಳಿದೆ.

‘ಈಡಿ’ಯಿಂದ ದೇಶದಾದ್ಯಂತ ೩೦ ಕಡೆಗಳಲ್ಲಿ ದಾಳಿ !

ದೆಹಲಿಯಲ್ಲಿನ ಆಪ ಸರಕಾರದ ಮದ್ಯ ಧೋರಣೆಯಲ್ಲಿನ ಭ್ರಷ್ಟಾಚಾರದ ಪ್ರಕರಣದಲ್ಲಿ ‘ಈಡಿ’ಯು (ಜ್ಯಾರಿ ನಿರ್ದೇಶನಾಲಯವು) ‘ಎನ್‌.ಸಿ. ಆರ್‌’ನೊಂದಿಗೆ ‘ರಾಷ್ಟ್ರೀಯ ರಾಜಧಾನಿ ಕ್ಷೇತ್ರದೊಂದಿಗೆ) ದೇಶದಾದ್ಯಂತ ದಾಳಿ ಆರಂಭಿಸಿದೆ. ದೇಶದಲ್ಲಿ ೩೦ ಕಡೆಗಳಲ್ಲಿ ದಾಳಿ ನಡೆಸಲಾಗುತ್ತಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ.

ದೆಹಲಿಯಿಂದ ೧ ಸಾವಿರ ೨೦೦ ಕೋಟಿ ರೂಪಾಯಿಗಳ ಮಾದಕ ಪದಾರ್ಥಗಳ ಜಪ್ತಿ : ಇಬ್ಬರು ಅಫಘಾನಿ ನಾಗರಿಕರ ಬಂಧನ

ದೆಹಲಿ ಪೊಲೀಸರ ವಿಶೇಷ ದಳವು ಇಬ್ಬರು ಅಫಘಾನಿಸ್ತಾನಿ ನಾಗರಿಕರನ್ನು ಬಂಧಿಸಿ ಅವರಿಂದ ೩೧೨.೫ ಕಿಲೋಗ್ರಾಮ್ ಮೆಥಾಮಫೆಟಾಮಾಯಿನ ಮತ್ತು ೧೦ ಕಿಲೋಗ್ರಾಮ ಹೆರಾಯಿನ ಈ ಮಾದಕ ಪದಾರ್ಥವನ್ನು ಜಪ್ತಿ ಮಾಡಿದ್ದಾರೆ.