ಮದರಸಾಗಳಿಗೆ ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂಪಾಯಿಯ ನಿಧಿ ದೊರೆಯುತ್ತದೆ

ಶೇಖಡ ೫೦ ರಷ್ಟು ನಿಧಿಯ ಮೂಲ ಗೌಪ್ಯ

ಎನ್.ಸಿ.ಟಿ.ಸಿ.ಆರ್. ನ ಪ್ರಮುಖ ಪ್ರಿಯಾಂಕ ಕಾನೂನ (ಬಲಬದಿಗೆ)

ನವ ದೆಹಲಿ – ಉತ್ತರ ಪ್ರದೇಶ ಸರಕಾರವು ಖಾಸಗಿ ಮದರಸಾಗಳ ಸಮೀಕ್ಷೆ ನಡೆಸುವ ನಿರ್ಣಯ ತೆಗೆದುಕೊಂಡಿರುವಾಗ ಮತ್ತು ಅಸ್ಸಾಂ ಸರಕಾರ ಕೂಡ ಈ ಸಂದರ್ಭದಲ್ಲಿ ನಿರ್ಣಯ ತೆಗೆದುಕೊಳ್ಳಲು ಮುಂದೆ ಬಂದಿದೆ. ಈಗ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದಿಂದ (ಎನ್.ಸಿ.ಪಿ.ಸಿ.ಆರ್.ವು) ಒಂದು ವರದಿ ಪ್ರಕಾಶಿಸಿದ್ದೂ ಅದರಲ್ಲಿ ದೇಶದಲ್ಲಿನ ಮದರಸಾಗಳ ನಿಧಿಯಲ್ಲಿ ಗಮನಾರ್ಹ ಹೆಚ್ಚಳ ಆಗಿರುವುದರ ಬಗ್ಗೆ ಹೇಳಿದೆ. ಮದರಸಾಗಳಿಗೆ ಪ್ರತಿ ವರ್ಷ ೧೦ ಸಾವಿರ ಕೋಟಿ ರೂಪಾಯಿ ನಿಧಿ ದೊರೆಯುತ್ತದೆ. ಅದರಲ್ಲಿ ಶೇಕಡ ೫೦ ಅಷ್ಟು ನಿಧಿ ಗೌಪ್ಯವಾಗಿ ದೊರೆಯುತ್ತದೆ, ಎಂದು ಈ ವರದಿಯಲ್ಲಿ ಹೇಳಲಾಗಿದೆ.

‘ಮದರಸಾಗಳ ಉತ್ಪನ್ನದಲ್ಲಿ ಹೆಚ್ಚಳ ಆಗಿರುವುದು ಕಂಡು ಬಂದಿದೆ; ಆದರೆ ಮಕ್ಕಳ ಆಹಾರದ ಖರ್ಚಿನಲ್ಲಿ ಶೇಕಡ ೫೦ ರಷ್ಟು ಇಳಿಕೆ ಆಗಿದೆ. ವಿದ್ಯಾರ್ಥಿಗಳ ಸ್ಥಿತಿ ದಯನೀಯವಾಗಿರುವುದು ಸ್ಪಷ್ಟವಾಗುತ್ತಿದೆ. ಈ ಮದರಸಾಗಳ ಪಠ್ಯಕ್ರಮ ಔರಂಗಜೇಬನ ಕಾಲದಾಗಿದೆ. ಮದರಸಾಗಳ ಹೆಸರಿನಲ್ಲಿ ಸಾಕಷ್ಟು ನಿಧಿ ಹರಿದು ಬಂದರು ಅದರ ಉಪಯೋಗ ಮಕ್ಕಳಿಗಾಗಿ ಮಾಡಲಾಗುತ್ತಿಲ್ಲ’, ಎಂದು ‘ಎನ್.ಸಿ.ಟಿ.ಸಿ.ಆರ್. ನ ಪ್ರಮುಖ ಪ್ರಿಯಾಂಕ ಕಾನೂನಗೊ ಇವರು ‘ಟೈಮ್ ನೌ’ಗೆ ಹೇಳಿದ್ದಾರೆ.


ಮದರಸಾಗಳ ಸಮೀಕ್ಷೆ ನಡೆಯಬೇಕು ! – ‘ಎನ್.ಸಿ.ಪಿ.ಸಿ.ಆರ್.ನ ಶಿಫಾರಸು

ಮದರಸಾಗಳಿಗೆ ದೊರೆಯುವ ನಿಧಿಯ ಉಪಯೋಗದ ವಿಷಯವಾಗಿ ಸ್ಪಷ್ಟತೆ ಇರಬೇಕು ಎಂದು ಎನ್.ಸಿ.ಪಿ.ಸಿ.ಆರ್.ನ ವರದಿಯಲ್ಲಿ ಹೇಳಲಾಗಿದೆ. ಮದರಸಾಗಳ ಸಮೀಕ್ಷೆ ನಡೆಸುವಂತೆ ಈ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
‘ಎನ್.ಸಿ.ಪಿ.ಸಿ.ಆರ್.’ನ ವರದಿಯ ಬಗ್ಗೆ ಟೀಕಿಸುತ್ತಾ, ‘ಯುನೈಟೆಡ್ ಮುಸ್ಲಿಂ ಫ್ರಂಟ್’ನ ಅಧ್ಯಕ್ಷ ಶಾಹಿದ್ ಅಲಿ ಇವರು, ಈ ವರದಿ ಸುಳ್ಳು ಇರುವ ಸಾಧ್ಯತೆ ಇರಬಹುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದಲ್ಲಿನ ಬಹಳಷ್ಟು ಮದರಸಾಗಳಲ್ಲಿ ಮಕ್ಕಳಿಗೆ ದೇಶ ವಿರೋಧಿ ಚಟುವಟಿಕೆ ಕಲಿಸಲಾಗುತ್ತದೆ, ಇದು ಅನೇಕ ಸಾಕ್ಷಿಗಳಿಂದ ಬಹಿರಂಗವಾಗಿದೆ ಹಾಗೂ ಬಹಳಷ್ಟು ಮದರಸಾಗಳಲ್ಲಿ ಕಲಿಸುವ ಶಿಕ್ಷಕರು ಕೂಡ ರಾಷ್ಟ್ರ ದ್ರೋಹಿ ಕಾರ್ಯಾಚರಣೆಯಲ್ಲಿ ತೊಡಗಿರುತ್ತಾರೆ. ಹೀಗಿರುವಾಗ ‘ಇಷ್ಟು ದೊಡ್ಡ ಪ್ರಮಾಣದಲ್ಲಿ ಅವರಿಗೆ ದೊರಕುವ ನಿಧಿಯ ಏನು ಉಪಯೋಗ ಆಗುತ್ತದೆ ?’, ಇದರ ವಿಚಾರಣೆಯು ನಡೆಯಬೇಕು !