‘ಈಡಿ’ಯಿಂದ ದೇಶದಾದ್ಯಂತ ೩೦ ಕಡೆಗಳಲ್ಲಿ ದಾಳಿ !

ದೆಹಲಿಯಲ್ಲಿನ ಆಪ ಸರಕಾರದಿಂದ ನಡೆದ ಮದ್ಯ ಧೋರೆಣೆಯ ಹಗರಣದ ಪ್ರಕರಣ

ನವದೆಹಲಿ – ದೆಹಲಿಯಲ್ಲಿನ ಆಪ ಸರಕಾರದ ಮದ್ಯ ಧೋರಣೆಯಲ್ಲಿನ ಭ್ರಷ್ಟಾಚಾರದ ಪ್ರಕರಣದಲ್ಲಿ ‘ಈಡಿ’ಯು (ಜ್ಯಾರಿ ನಿರ್ದೇಶನಾಲಯವು) ‘ಎನ್‌.ಸಿ. ಆರ್‌’ನೊಂದಿಗೆ ‘ರಾಷ್ಟ್ರೀಯ ರಾಜಧಾನಿ ಕ್ಷೇತ್ರದೊಂದಿಗೆ) ದೇಶದಾದ್ಯಂತ ದಾಳಿ ಆರಂಭಿಸಿದೆ. ದೇಶದಲ್ಲಿ ೩೦ ಕಡೆಗಳಲ್ಲಿ ದಾಳಿ ನಡೆಸಲಾಗುತ್ತಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ. ಇದರಲ್ಲಿ ದೆಹಲಿಯೊಂದಿಗೆ ಗುರುಗ್ರಾಮ, ಚಂಡೀಗಡ, ಲಕ್ಷ್ಮಣಪುರಿ, ಮುಂಬೈ, ಭಾಗ್ಯನಗರ, ಹಾಗೆಯೇ ಬೆಂಗಳೂರು ನಗರದಲ್ಲಿ ದಾಳಿ ನಡೆಯುತ್ತಿದೆ. ದೆಹಲಿಯ ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾಯವರ ನಿವಾಸಸ್ಥಳದಲ್ಲಿ ಸದ್ಯ ದಾಳಿ ನಡೆದಿಲ್ಲ.

ಭಾಜಪವು ಪ್ರಸಾರಿಸಿದ ವಿಡಿಯೋ !

ಈ ಮೊದಲು ಆಮ ಆದಮಿ ಪಕ್ಷವನ್ನು ಆರೋಪಿಸುತ್ತ ಭಾಜಪವು ಸಪ್ಟೆಂಬರ್‌ ೫ರಂದು ಒಂದು ‘ಸ್ಟಿಂಗ್‌ ಆಪರೇಶನ’ನ ವಿಡಿಯೋವನ್ನು ಪ್ರಸಾರ ಮಾಡಿತ್ತು. ಇದರಲ್ಲಿ ಮದ್ಯದ ಹಗರಣದಲ್ಲಿನ ಆರೋಪಿಯ ತಂದೆಯು ದೆಹಲಿಯಲ್ಲಿ ಮದ್ಯದ ಪರವಾನಿಗೆಯನ್ನು ಪಡೆದಿರುವುದಾಗಿ ಹೇಳುತ್ತಿರುವುದು ಕಂಡುಬರುತ್ತದೆ. ಹಾಗೆಯೇ ಅವನು ಇದಕ್ಕಾಗಿ ‘ಕಮೀಶನ್‌’ ನೀಡಿರುವ ಬಗ್ಗೆಯೂ ಹೇಳಿದ್ದಾನೆ.