ನವ ದೆಹಲಿ – ದಕ್ಷಿಣ ಪೂರ್ವ ದೆಹಲಿಯಲ್ಲಿನ ಗೋವಿಂದಪುರಿ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕ ಮತ್ತು ಠಾಣೆಯ ಪ್ರಮುಖರ ನಡುವೆ ಜಗಳ ಆರಂಭವಾಯಿತು. ಇದರಲ್ಲಿ ಠಾಣೆಯ ಪ್ರಮುಖ ಜಗದೀಶ ಹಾಗೂ ಉಪನಿರೀಕ್ಷಕ ಮಹೇಶ ಚಂದ ಇವರು ಗಾಯಗೊಂಡರು. ಇಬ್ಬರಿಗೂ ‘ಎಮ್ಸ್’ನಲ್ಲಿ ಉಪಚಾರ ನಡೆಯುತ್ತಿದೆ. ಈ ಘಟನೆಯ ನಂತರ ಉಪನಿರೀಕ್ಷಕ ಮಹೇಶ ಚಂದ ಇವರನ್ನು ವಜಾಗೊಳಿಸಲಾಗಿದೆ.
दिल्ली का एक थाना देखते ही देखते जंग का मैदान बन गया #Delhi @NeerajGaur_ https://t.co/Uf52dJRYub
— Zee News Crime (@ZeeNewsCrime) September 7, 2022
ಮೂಲಗಳು ನೀಡಿದ ಮಾಹಿತಿಗನುಸಾರ ಒಂದು ಪ್ರಕರಣದಲ್ಲಿ ಉಪನಿರೀಕ್ಷಕ ಮಹೇಶ ಚಂದ ಇವರಿಗೆ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಲಿಕ್ಕಿದ್ದ ‘ಸ್ಟೇಟಸ್ ರಿಪೋರ್ಟ್’ನಲ್ಲಿ (ಯಾವುದೇ ಕಾರ್ಯದ ಬಗ್ಗೆ ಸದ್ಯಸ್ಥಿತಿಯ ವರ್ಣನೆ ಮಾಡುವ ಕಾಗದಪತ್ರದಲ್ಲಿ) ಠಾಣೆಯ ಪ್ರಮುಖರ ಸಹಿ ಬೇಕಾಗಿತ್ತು; ಆದರೆ ಠಾಣೆಯ ಪ್ರಮುಖರಿಗೆ ಈ ‘ಸ್ಟೇಟಸ್ ರಿಪೋರ್ಟ್’ನಲ್ಲಿ ಏನೋ ತಪ್ಪು ಕಾಣಿಸಿತು. ಅವರು ಅದನ್ನು ಸುಧಾರಿಸಲು ಆರಂಭಿಸಿದಾಗ ಮಹೇಶ ಚಂದ ಇವರಿಗೆ ಕೋಪ ಬಂತು. ‘ಈ ಸ್ಟೇಟಸ್ ರಿಪೋರ್ಟ್’ ಸ್ಥಾಯೀ ಸಮಿತಿಯವರು ನೊಡಿದ್ದಾರೆ ಹಾಗೂ ಠಾಣೆಯ ಪ್ರಮುಖರು ಸಮಯ ವ್ಯರ್ಥ ಮಾಡುತ್ತಿದ್ದಾರೆ’, ಎಂದು ಮಹೇಶ ಚಂದ ಹೇಳಿದರು. ಇದರಿಂದ ಇಬ್ಬರ ನಡುವೆ ಜಗಳ ಆರಂಭವಾಗಿ ಅದು ಹೊಡೆದಾಟದಲ್ಲಿ ಮುಕ್ತಾಯವಾಯಿತು. ಇಬ್ಬರೂ ಗುದ್ದಾಟ ನಡೆಸಿದರು. ಇಬ್ಬರೂ ಹೊಡೆದಾಡುವುದನ್ನು ನೊಡಿದ ಇತರ ಪೊಲಿಸರು ಹಸ್ತಕ್ಷೇಪ ಮಾಡಿದರು. ಠಾಣೆಯ ಪ್ರಮುಖರ ಕೈಗೆ ಪೆಟ್ಟಾಗಿದೆ, ಉಪನಿರೀಕ್ಷಕ ಮಹೇಶರೂ ಗಾಯಗೊಂಡಿದ್ದಾರೆ.
ಸಂಪಾದಕೀಯ ನಿಲುವುಪರಸ್ಪರರಲ್ಲಿ ಜಗಳವಾಡುವ ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆಯನ್ನು ಹೇಗೆ ಕಾಪಾಡುವರು ? |