ಚತುಷ್ಚಕ್ರ ವಾಹನದ ಹಿಂದಿನ ಸೀಟಿನ ಮೇಲೆ ಕುಳಿತಿರುವವರಿಗೂ ಕೂಡ ಸೀಟ್ ಬೆಲ್ಟ್ ಕಡ್ಡಾಯ !

ನವದೆಹಲಿ – ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸಾಯರಸ ಮಿಸ್ತ್ರಿ ಇವರ ಅಪಘಾತದಲ್ಲಿ ನಿಧನರಾದ ನಂತರ ಚತುಷ್ಚಕ್ರ ವಾಹನದ ಹಿಂದಿನ ಸೀಟಿನ ಮೇಲೆ ಕುಳಿತಿರುವ ಪ್ರಯಾಣಿಕರಿಗೆ ‘ಸೀಟ್ ಬೆಲ್ಟ್’ ಕಡ್ಡಾಯ ಮಾಡಲಾಗಿದೆ. ಅದಕ್ಕಾಗಿ ‘ಸೀಟ್ ಬೆಲ್ಟ್’ ಹಾಕಿಕೊಳ್ಳುವ ವಿಷಯವಾಗಿ ಸತರ್ಕಗೊಳಿಸುವ ಪ್ರಣಾಳಿಕೆ ಆದಷ್ಟು ಬೇಗನೆ ಜಾರಿಗೊಳಿಸಲಾಗುವುದು. ಈ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು. ಈ ಆದೇಶದಲ್ಲಿ ಬರುವ ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ ಗಡಕರಿ ಇವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಸಯರಸ ಮೇಸ್ತ್ರಿ ಅವರ ನಿಧನದ ನಂತರ ತಜ್ಞರು ಮತ್ತು ಟೀಕಾಕಾರರು ಇವರು ವಾಹನ ಸುರಕ್ಷಾ ಸಂಬಂಧದ ನಿಯಮಗಳ ಕಡೆಗೆ ಗಮನ ಸೆಳೆದಿದ್ದರು. ಹಿಂದಿನ ಸೀಟಿನ ಮೇಲೆ ಕುಳಿತಿದ್ದ ಮಿಸ್ತ್ರೀ ಇವರು ಸೀಟ್ ಬೆಲ್ಟ್ ಹಾಕಿಕೊಳ್ಳದೆ ಇರುವುದರಿಂದ ಈ ಅಪಘಾತದಲ್ಲಿ ಅವರ ತಲೆಗೆ ಪೆಟ್ಟಾಗಿ ಅವರು ಸಾವನ್ನಪ್ಪಿದರು.