ತೆರಿಗೆ ಇಲಾಖೆಯಿಂದ ಏಕಕಾಲಕ್ಕೆ ೧೦೦ ಸ್ಥಳಗಳಲ್ಲಿ ದಾಳಿ

ನವ ದೆಹಲಿ – ತೆರಿಗೆ ಇಲಾಖೆಯು ಸಪ್ಟೆಂಬರ್ ೭ ರಂದು ದೇಶಾದ್ಯಂತ ೧೦೦ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಾರಾಯಿ ಹಗರಣ, ಮಧ್ಯಾಹ್ನದ ಭೋಜನ, ರಾಜಕೀಯ ನಿಧಿ ಮತ್ತು ತೆರಿಗೆ ವಂಚನೆ ಇದಕ್ಕೆ ಸಂಬಂಧ ಪಟ್ಟದ್ದಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಛತ್ತಿಸ್‌ಗಢ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ದಾಳಿ ನಡೆಸಲಾಗಿದೆ. ರಾಜಸ್ಥಾನದ ಕಾಂಗ್ರೆಸ್ ಸರಕಾರದ ರಾಜ್ಯ ಸಚಿವ ರಾಜೇಂದ್ರ ಯಾದವ ಮತ್ತು ಅವರ ಸಂಬಂಧಿಕರ ೫೩ ಕ್ಕಿಂತ ಹೆಚ್ಚಿನ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ಇನ್ನೊಂದು ಕಡೆ ಬಂಗಾಲದ ತೃಣ ಮೂಲ ಕಾಂಗ್ರೆಸ್ ಸರಕಾರದ ಕಾನೂನು ಸಚಿವ ಮಲಯ ಘಟಕ ಇವರ ೬ ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐಯಿಂದ) ಬೆಳಗಿನ ಜಾವಾ ದಾಳಿ ನಡೆಸಲಾಗಿದೆ. ಘಟಕ ಇವರ ಮೇಲೆ ಕಲ್ಲಿದ್ದಲು ಕಳ್ಳ ಸಾಗಾಣಿಕೆಯ ಆರೋಪವಿದೆ.