|
ನವದೆಹಲಿ – ದೆಹಲಿ ಪೊಲೀಸರು ಸೆಪ್ಟೆಂಬರ್ ೫ ರಂದು ದೇಶದ ಅತಿದೊಡ್ಡ ಚತುಷ್ಚಕ್ರ ಕದ್ದಿದ್ದ ಅನಿಲ ಚೌಹಾಣ್ ಎಂಬಾತನನ್ನು ಬಂಧಿಸಿದ್ದಾರೆ. ಆತ ೫ ಲಕ್ಷ ಚತುಷ್ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ಆರೋಪ ಮೇಲಿದೆ. ಕಳೆದ ೨೭ ವರ್ಷಗಳಲ್ಲಿ ಆತ ಹಲವು ಟ್ಯಾಕ್ಸಿ ಚಾಲಕರನ್ನೂ ಕೊಂದಿದ್ದಾನೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ೫೨ ವರ್ಷದ ಅನಿಲ ಕದ್ದ ಹಣದಿಂದ ದೆಹಲಿ, ಮುಂಬಯಿ ಮತ್ತು ಈಶಾನ್ಯ ಭಾರತದಲ್ಲಿ ಹಲವಾರು ಆಸ್ತಿಗಳನ್ನು ಖರೀದಿಸಿದ್ದಾನೆ. ಅವನಿಗೆ ೩ ಹೆಂಡತಿಯರು ಮತ್ತು ೭ ಮಕ್ಕಳಿದ್ದಾರೆ.
Delhi Police Special Staff Team arrest Notorious auto lifter, Anil Chauhan.@DelhiPolice was on the hunt for him for the last seven years.@DCPCentralDelhi@Mukesh1481 pic.twitter.com/SBCzgKusk6
— DD News (@DDNewslive) September 6, 2022
೧. ಕೇಂದ್ರ ದೆಹಲಿ ಪೊಲೀಸರ ವಿಶೇಷ ಅಧಿಕಾರಿಗಳು ಮಾಡಿದ ಬಂಧನದ ಕಾರ್ಯಾಚರಣೆಯಲ್ಲಿ ಅನಿಲನಿಂದ ೬ ಪಿಸ್ತೂಲ್‌ಗಳು ಮತ್ತು ೭ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
೨. ದೆಹಲಿಯ ಖಾನಪುರ ಪ್ರದೇಶದಲ್ಲಿ ವಾಸವಾಗಿರುವ ಅನಿಲ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ೧೯೯೫ರ ನಂತರ ಚತುಷ್ಚಕ್ರ ವಾಹನಗಳನ್ನು ಕದಿಯಲು ಆರಂಭಿಸಿದ. ೨೭ ವರ್ಷಗಳಲ್ಲಿ ಆತ ‘ಮಾರುತಿ’ ಸಂಸ್ಥೆಯ ಅತಿ ಹೆಚ್ಚು ಅಂದರೆ ೮೦೦ ಕಾರುಗಳನ್ನು ಕದ್ದಿದ್ದಾನೆ.
೩. ಆತ ದೇಶದ ವಿವಿಧ ಭಾಗಗಳಿಗೆ ಹೋಗಿ ಚತುಷ್ಚಕ್ರ ವಾಹನಗಳನ್ನು ಕದ್ದು ನೇಪಾಳ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ.
೪. ಆತ ಅಸ್ಸಾಂನಲ್ಲಿ ಸರಕಾರಿ ಗುತ್ತಿಗೆದಾರರಾಗಿಯೂ ಕೆಲಸ ಮಾಡಿದ್ದಾನೆ. ಆತ ಅಲ್ಲಿನ ಸ್ಥಳೀಯ ಮುಖಂಡರೊಂದಿಗೂ ಸಂಪರ್ಕದಲ್ಲಿದ್ದನು.
೫. ಪೊಲೀಸರು ಇದುವರೆಗೆ ಹಲವು ಬಾರಿ ಅನಿಲ್ ನನ್ನು ಬಂಧಿಸಿದ್ದಾರೆ. ೨೦೧೫ರಲ್ಲಿ ಆತನನ್ನು ಕಾಂಗ್ರೆಸ್ ಶಾಸಕರೊಬ್ಬರೊಂದಿಗೆ ಬಂಧಿಸಲಾಗಿತ್ತು. ಆ ಸಮಯದಲ್ಲಿ ಅವನಿಗೆ ೫ ವರ್ಷಗಳ ಶಿಕ್ಷೆ ವಿಧಿಸಲಾಯಿತು. ೨೦೨೦ ರಲ್ಲಿ ಆತ ಬಿಡುಗಡೆಯಾದ. ಈತನ ವಿರುದ್ಧ ಒಟ್ಟು ೧೮೦ ಅಪರಾಧ ಪ್ರಕರಣಗಳು ದಾಖಲಾಗಿವೆ.
ನಿಷೇಧಿತ ಸಂಘಟನೆಗಳಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪ !ಪೊಲೀಸರ ಪ್ರಕಾರ ಅನಿಲ ಚೌಹಾಣ್ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿಯೂ ಕೈವಾಡವಿದೆ. ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಈಶಾನ್ಯದಲ್ಲಿ ನಿಷೇಧಿತ ಸಂಘಟನೆಗಳಿಗೆ ಸರಬರಾಜು ಮಾಡಿದ ಆರೋಪವೂ ಅವನ ಮೇಲಿದೆ. ಅವನ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕೂಡ ‘ಅಕ್ರಮ ಹಣ ವರ್ಗಾವಣೆ’ಯ ಪ್ರಕರಣ ದಾಖಲಿಸಿತ್ತು. |
ಸಂಪಾದಕೀಯ ನಿಲುವು
|