ದೆಹಲಿಯಿಂದ ೧ ಸಾವಿರ ೨೦೦ ಕೋಟಿ ರೂಪಾಯಿಗಳ ಮಾದಕ ಪದಾರ್ಥಗಳ ಜಪ್ತಿ : ಇಬ್ಬರು ಅಫಘಾನಿ ನಾಗರಿಕರ ಬಂಧನ

ನವ ದೆಹಲಿ – ದೆಹಲಿ ಪೊಲೀಸರ ವಿಶೇಷ ದಳವು ಇಬ್ಬರು ಅಫಘಾನಿಸ್ತಾನಿ ನಾಗರಿಕರನ್ನು ಬಂಧಿಸಿ ಅವರಿಂದ ೩೧೨.೫ ಕಿಲೋಗ್ರಾಮ್ ಮೆಥಾಮಫೆಟಾಮಾಯಿನ ಮತ್ತು ೧೦ ಕಿಲೋಗ್ರಾಮ ಹೆರಾಯಿನ ಈ ಮಾದಕ ಪದಾರ್ಥವನ್ನು ಜಪ್ತಿ ಮಾಡಿದ್ದಾರೆ. ಈ ಮಾದಕ ಪದಾರ್ಥಗಳ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧ ಸಾವಿರ ೨೦೦ ಕೋಟಿ ರೂಪಾಯಿದೆ. ಈ ಮಾದಕ ಪದಾರ್ಥ ಚೆನ್ನೈಯಿಂದ ಲಕ್ಷ್ಮಣಪುರಿ ಮತ್ತು ಅಲ್ಲಿಂದ ದೆಹಲಿಗೆ ಕಳುಹಿಸಲಾಗಿತ್ತು.