ರಾಜಕೀಯ ಪಕ್ಷಗಳಿಂದಾಗುವ ಧಾರ್ಮಿಕ ಚಿಹ್ನೆಗಳು ಮತ್ತು ಹೆಸರುಗಳ ಬಳಕೆಯನ್ನು ನಿಷೇಧಿಸಲು ಆಗ್ರಹ

ನವ ದೆಹಲಿ – ರಾಜಕೀಯ ಪಕ್ಷಗಳಿಂದ ಧಾರ್ಮಿಕ ಚಿಹ್ನೆಗಳು ಮತ್ತು ಹೆಸರುಗಳನ್ನು ಬಳಸುವುದನ್ನು ನಿಷೇಧಿಸುವಂತೆ ಕೋರಿ ಸೈಯದ್ ವಾಸಿಂ ರಿಜ್ವಿ ಇವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಕಳುಹಿಸಿ ಉತ್ತರ ಕೇಳಿದೆ. ಸಂವಿಧಾನವನ್ನು ಉಲ್ಲೇಖಿಸಿದ ರಿಜ್ವಿ, ‘ಮತದಾರರನ್ನು ಧರ್ಮದ ಆಧಾರದ ಮೇಲೆ ಆಕರ್ಷಿಸುವುದು ಕಾನೂನುಬಾಹಿರವಾಗಿದೆ’, ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಅರ್ಜಿದಾರರ ಪರವಾಗಿ ವಕೀಲ ಗೌರವ್ ಭಾಟಿಯಾ ಇವರು ಸುಪ್ರೀಂ ಕೋರ್ಟ್‌ನಲ್ಲಿ ಮಂಡಿಸಿದರು. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ ೧೮ ರಂದು ನಡೆಯಲಿದೆ.

೧. ಅರ್ಜಿಯಲ್ಲಿ ೨ ರಾಜ್ಯ ಮಟ್ಟದ ರಾಜಕೀಯ ಪಕ್ಷಗಳನ್ನು ಉಲ್ಲೇಖಿಸಲಾಗಿದೆ. ಈ ಪಕ್ಷಗಳ ಹೆಸರಿನಲ್ಲಿ ‘ಮುಸ್ಲಿಂ’ ಎಂಬ ಪದವಿದೆ. ಅಲ್ಲದೆ, ಕೆಲವು ರಾಜಕೀಯ ಪಕ್ಷಗಳು ತಮ್ಮ ಬಾವುಟಗಳಲ್ಲಿ ಚಂದ್ರ ಮತ್ತು ನಕ್ಷತ್ರಗಳನ್ನು ಹಾಕಿಕೊಂಡಿವೆ. ಇದರ ಒಂದು ಉದಾಹರಣೆ ಎಂದರೆ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (‘ಐ.ಯು.ಎಮ್.ಎಲ್.’ನ) ನೀಡಲಾಯಿತು. ಈ ಪಕ್ಷವು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸದರನ್ನು ಹೊಂದಿದೆ, ಹಾಗೆಯೇ ಕೇರಳ ವಿಧಾನಸಭೆಯಲ್ಲಿ ಶಾಸಕರನ್ನು ಹೊಂದಿದೆ.

೨. ವಕೀಲ ಗೌರವ್ ಭಾಟಿಯಾ ಅವರು ಸುಪ್ರೀಂ ಕೋರ್ಟ್‌ನ ಒಂದು ತೀರ್ಪನ್ನು ನೆನಪಿಸಿಕೊಟ್ಟರು, ಅದರಲ್ಲಿ ಜಾತ್ಯತೀತತೆಯನ್ನು ಭಾರತದ ರಾಜ್ಯದ ಮೂಲಭೂತ ವಿಶೇಷವಾಗಿದೆ ಎಂದು ವಿವರಿಸಿದೆ.

೩. ‘ಹಲವು ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಆಕರ್ಷಿಸುತ್ತವೆ ಮತ್ತು ಅದಕ್ಕಾಗಿ ಅವರು ತಮ್ಮ ಧ್ವಜವನ್ನು ಹಸಿರು ಮತ್ತು ಅದರ ಮೇಲೆ ಚಂದ್ರ ಮತ್ತು ನಕ್ಷತ್ರಗಳನ್ನು ಬಳಸುತ್ತಾರೆ. ಅದೇ ರೀತಿ ಓವೈಸಿಯಂತಹ ನಾಯಕರು ಪ್ರತಿ ಸಭೆಯಲ್ಲೂ ಮುಸ್ಲಿಮರ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ’, ಎಂದು ಭಾಟಿಯಾ ನ್ಯಾಯಾಲಯದ ಗಮನಕ್ಕೆ ತಂದರು.