ಮಲಬದ್ಧತೆ
ಸನಾತನದ ‘ಗಂಧರ್ವ ಹರಿತಕಿ ವಟಿ’ ಮತ್ತು ‘ಲಶುನಾದಿ ವಟಿ’ ಈ ಔಷಧಿಗಳು ಈಗ ಲಭ್ಯವಿವೆ. ಈ ಔಷಧಿಗಳ ವಿವರವಾದ ಬಳಕೆಯ ಬಗ್ಗೆ ಔಷಧದ ಡಬ್ಬದ ಜೊತೆಯಲ್ಲಿರುವ ಕರಪತ್ರದಲ್ಲಿ ನೀಡಲಾಗಿದೆ. ಕರಪತ್ರವನ್ನು ಕಾಳಜಿಪೂರ್ವಕ ಇಡಬೇಕು. ಔಷಧಿಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.
ಅನಾವಶ್ಯಕ ಪಥ್ಯಗಳನ್ನು ತಡೆಗಟ್ಟಿರಿ !
‘ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು, ಸಾಕಷ್ಟು ನಿದ್ರೆ ಮಾಡುವುದು, ಮಲ-ಮೂತ್ರಗಳನ್ನು ತಡೆಹಿಡಿಯದಿರುವುದು, ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಊಟ ಮಾಡುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದು’, ಇವುಗಳು ಆರೋಗ್ಯಕ್ಕೆ ಸಂಬಂಧಪಟ್ಟ ಮೂಲಭೂತ ಪಥ್ಯಗಳಿವೆ.
ರಾತ್ರಿಯ ಅನಗತ್ಯ ಜಾಗರಣೆ ತಡೆಗಟ್ಟಿರಿ ! – ವೈದ್ಯ ಮೇಘರಾಜ ಪರಾಡಕರ
‘ಶರೀರವು ಸರಿಯಾಗಿ ಕಾರ್ಯನಿರ್ವಹಿಸಲು ಹೇಗೆ ಯೋಗ್ಯ ಪ್ರಮಾಣದಲ್ಲಿ ತಿನ್ನುವುದು ಆಗತ್ಯವಿದೆಯೋ, ಅದೇ ರೀತಿ ಯೋಗ್ಯ ಪ್ರಮಾಣದಲ್ಲಿ ನಿದ್ರೆಯೂ ಆವಶ್ಯಕವಾಗಿರುತ್ತದೆ. ರಾತ್ರಿ ತುಂಬಾ ಹೊತ್ತು ಜಾಗರಣೆ ಮಾಡಿದರೆ, ಪಿತ್ತ ಹೆಚ್ಚುತ್ತದೆ. ಬುದ್ಧಿಯ ಕ್ಷಮತೆ ಕಡಿಮೆಯಾಗುತ್ತದೆ.
ಮನಮುಕ್ತತೆಯಿಂದ ಮಾತನಾಡುವುದು ಇದೊಂದು ದೊಡ್ಡ ಔಷಧ !
‘ಪೂರ್ವಗ್ರಹ, ಸಿಟ್ಟು, ಭಯ ಇವುಗಳಂತಹ ಮೂಲಭೂತ ಸ್ವಭಾವದೋಷಗಳಿಂದ ಅನೇಕರಿಗೆ ಮನಮುಕ್ತತೆಯಿಂದ ಮಾತನಾಡಲು ಬರುವುದಿಲ್ಲ. ಕೆಲವರ ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಹಿಂದಿನ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಪಟ್ಟ ಭಾವನೆಗಳು ಸಂಗ್ರಹವಾಗಿರುತ್ತವೆ.
ತಮ್ಮ ಚಿಕ್ಕಪುಟ್ಟ ವ್ಯಾಧಿಗಳಿಗೆ ಪ್ರಾಥಮಿಕ ಚಿಕಿತ್ಸೆಯೆಂದು ಆಯುರ್ವೇದದ ಔಷಧಗಳನ್ನು ಉಪಯೋಗಿಸುವ ಅಭ್ಯಾಸ ಮಾಡಿರಿ !
ಯುದ್ಧಕಾಲದಲ್ಲಿ ಅಲೋಪಥಿಯ ಔಷಧಿಗಳನ್ನು ಹೆಚ್ಚು ಪ್ರಮಾಣದಲ್ಲಿ ಸೈನ್ಯಕ್ಕಾಗಿ ಮೀಸಲಿಡಲಾಗುತ್ತದೆ. ಅದರಿಂದಾಗಿ ಔಷಧಿಗಳ ಕೊರತೆಯುಂಟಾಗುತ್ತದೆ. ಆಪತ್ಕಾಲದಲ್ಲಿ ಇಂತಹ ಸ್ಥಿತಿಯಲ್ಲಿ ಅಡಚಣೆಗಳು ಬರಬಾರದೆಂದು ಇಂದಿನಿಂದಲೆ ತಮ್ಮ ಚಿಕ್ಕಪುಟ್ಟ ತೊಂದರೆಗಳಿಗಾಗಿ ಆಯುರ್ವೇದದ ಔಷಧಗಳನ್ನು ಉಪಯೋಗಿಸಿರಿ.
ಮಳೆಗಾಲ ಮತ್ತು ಹಾಲು
‘ಹಾಲು’ ಇದು ಪೃಥ್ವಿ ಮತ್ತು ಆಪ ಈ ತತ್ತ್ವಪ್ರಧಾನ ಒಂದು ಪೌಷ್ಟಿಕ ಆಹಾರವಾಗಿದೆ. ಇವೆರಡೂ ಅಗ್ನಿಯ ವಿರುದ್ಧ ಗುಣಧರ್ಮದಾಗಿದ್ದು ಅಗ್ನಿಯನ್ನು ಮಂದ ಮಾಡುತ್ತವೆ. ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯು (ಪಚನಶಕ್ತಿ) ಮಂದವಾಗಿರುತ್ತದೆ. ಇಂತಹ ಅಗ್ನಿಯು ಕೆಲವೊಮ್ಮೆ ಹಾಲನ್ನು ಅರಗಿಸಲು ಅಸಮರ್ಥವಾಗಿರುತ್ತದೆ.
ಚರ್ಮದ ಬುರುಸಿನ ಸೋಂಕಿಗೆ (‘ಫಂಗಲ್ ಇನ್ಫೆಕ್ಶನ್’ಗೆ) ಆಯುರ್ವೇದ ಚಿಕಿತ್ಸೆ
ಸ್ನಾನ ಮಾಡುವಾಗ ಸಾಬೂನು ಬಳಸಬಾರದು. ಸಾಬೂನಿನಿಂದ ಚರ್ಮದ ಪ್ರತಿಕಾರ ಕ್ಷಮತೆ ಕಡಿಮೆಯಾಗುತ್ತದೆ. ಸಾಬೂನಿನ ಬದಲು ತ್ರಿಫಲಾ ಚೂರ್ಣ, ಕಡಲೆ ಹಿಟ್ಟು, ಉಟಣೆ ಅಥವಾ ಇವುಗಳ ಮಿಶ್ರಣವನ್ನು ಬಳಸಬೇಕು.
ಮಳೆಗಾಲದಲ್ಲಿನ ನೆಗಡಿ, ಕೆಮ್ಮು, ಜ್ವರ, ಹಾಗೆಯೇ ಕೊರೊನಾಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿ ಸತತ ಮಳೆಯಿಂದ ವಾತಾವರಣದಲ್ಲಿ ಹರಡಿದ ಶೀತಲತೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾದಷ್ಟು ಕಾಳಜಿ ವಹಿಸಿದರೆ ಈ ದಿನಗಳಲ್ಲಿ ಆಗುವ ನೆಗಡಿ, ಕೆಮ್ಮು ಮತ್ತು ಜ್ವರ ಬೇಗ ಗುಣವಾಗಲು ಸಹಾಯವಾಗುತ್ತದೆ.