೧. ಆರೋಗ್ಯ ಚೆನ್ನಾಗಿರಲು ದಿನದಲ್ಲಿ ಎಷ್ಟು ಸಲ ಆಹಾರವನ್ನು ಸೇವಿಸಬೇಕು ?
ದಿನದಲ್ಲಿ ಕೇವಲ ೨ ಸಲ ಆಹಾರವನ್ನು ಸೇವಿಸುವುದು ಆದರ್ಶವಾಗಿದೆ. ಇದರಿಂದ ಶರೀರ ಆರೋಗ್ಯವಾಗಿರುತ್ತದೆ. ಇದು ಸಾಧ್ಯವಿಲ್ಲದಿದ್ದರೆ ದಿನದಲ್ಲಿ ೩ ಸಲ ಆಹಾರವನ್ನು ಸೇವಿಸಬಹುದು. ಬೆಳಗ್ಗೆ ಶೌಚ ಸ್ವಚ್ಛವಾಗುವುದು, ಶರೀರ ಹಗುರಾಗಿರುವುದು ಮತ್ತು ಚೆನ್ನಾಗಿ ಹಸಿವಾಗುವುದು, ಈ ೩ ಲಕ್ಷಣಗಳು ನಿರ್ಮಾಣವಾದ ಮೇಲೆಯೇ ಬೆಳಗಿನ ಅಲ್ಪಾಹಾರವನ್ನು ಸೇವಿಸಬೇಕು. ಈ ಲಕ್ಷಣಗಳು ನಿರ್ಮಾಣವಾಗದಿದ್ದರೆ ಬೆಳಗ್ಗೆ ೧೦ ಗಂಟೆಯವರೆಗೆ ಏನನ್ನೂ ತಿನ್ನಬಾರದು. ನೀರಡಿಕೆಯಾದರೆ ಕೇವಲ ಬಿಸಿ ನೀರು ಕುಡಿಯಬೇಕು. ಬೆಳಗ್ಗೆ ೧೦ ಗಂಟೆಯ ನಂತರ ಅಲ್ಪಾಹಾರವನ್ನು (‘ಅಲ್ಪ’ ಆಹಾರ) ಸೇವಿಸಬೇಕು. ಇಂತಹ ಸಮಯದಲ್ಲಿ ಮಧ್ಯಾಹ್ನದ ಭೋಜನವನ್ನು ೧ ರಿಂದ ೨ ಗಂಟೆಗೆ ಮಾಡಬೇಕು. ರಾತ್ರಿಯ ಭೋಜನವನ್ನು ಸಾಯಂಕಾಲ ೭ ಗಂಟೆಗೆ ಮಾಡಬೇಕು. ಹೀಗೆ ೩ ಸಲ ಆಹಾರವನ್ನು ತೆಗೆದುಕೊಳ್ಳುವುದೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿದೆ.
೨. ತಿನ್ನುವ ಪದಾರ್ಥಗಳು ಸಹಜವಾಗಿ ಲಭ್ಯವಿದ್ದರೂ, ಹೆಚ್ಚು ಸಲ ತಿನ್ನುವ ಮೋಹವನ್ನು ತಪ್ಪಿಸಬೇಕು !
ಮನೆಯಲ್ಲಿ ಡಬ್ಬಗಳಲ್ಲಿ ತಿಂಡಿಗಳನ್ನು ಇಟ್ಟಿರುತ್ತಾರೆ. ಹೆಚ್ಚಿನ ನೌಕರಿಯ ಸ್ಥಳಗಳಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಚಹಾದ ವ್ಯವಸ್ಥೆ ಇರುತ್ತದೆ. ಹೊಟೆಲುಗಳಲ್ಲಿ ಯಾವಾಗಲೂ ತಿನ್ನುವ ಪದಾರ್ಥಗಳು ಸಿಗುತ್ತವೆ. ಒಂದೇ ಸ್ಥಳದಲ್ಲಿ ಬಹಳಷ್ಟು ಜನರಿರುವ ಸ್ಥಳಗಳಲ್ಲಿ ೪-೪ ಸಲ ಆಹಾರ ಲಭ್ಯವಿರುತ್ತದೆ. ಹೀಗಿದ್ದರೂ ಅದು ಕೇವಲ ಅನುಕೂಲಕ್ಕಾಗಿ ಇರುತ್ತದೆ. ೩ ಕ್ಕಿಂತ ಹೆಚ್ಚು ಸಲ ಆಹಾರ ತೆಗೆದುಕೊಳ್ಳುವುದು ಅಥವಾ ದಿನವಿಡಿ ತಿನ್ನುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಯೋಗ್ಯವಾಗಿಲ್ಲ. ಯಾವಾಗಲಾದರೂ ಒಂದು ದಿನ ಹಸಿವಾಗಿದೆಯೆಂದು ಅಥವಾ ಸಂಗಡಿಗರೊಂದಿಗೆ ಎಂದು ಒಂದು ಸಲ ಹೆಚ್ಚಿಗೆ ತಿಂದರೆ ನಡೆಯುತ್ತದೆ; ಆದರೆ ಪ್ರತಿದಿನ ನಿಯಮಿತವಾಗಿ ಹೆಚ್ಚು ಸಲ ತಿನ್ನುವುದನ್ನು ತಪ್ಪಿಸಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೮.೨೦೨೨)
ಅನಾವಶ್ಯಕ ಪಥ್ಯಗಳನ್ನು ತಡೆಗಟ್ಟಿರಿ !‘ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು, ಸಾಕಷ್ಟು ನಿದ್ರೆ ಮಾಡುವುದು, ಮಲ-ಮೂತ್ರಗಳನ್ನು ತಡೆಹಿಡಿಯದಿರುವುದು, ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಊಟ ಮಾಡುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದು’, ಇವುಗಳು ಆರೋಗ್ಯಕ್ಕೆ ಸಂಬಂಧಪಟ್ಟ ಮೂಲಭೂತ ಪಥ್ಯಗಳಿವೆ. ಪ್ರತಿದಿನ ಇವುಗಳನ್ನು ನಿತ್ಯ ಆಚರಣೆಯಲ್ಲಿ ತಂದರೆ, ಆರೋಗ್ಯವು ಇಷ್ಟೊಂದು ಉತ್ತಮವಾಗಿರುತ್ತದೆ, ಅಂದರೆ ಊಟ-ತಿಂಡಿಯ ಪಥ್ಯಗಳ, ಅಂದರೆ ‘ಚಪಾತಿಯ ಬದಲಾಗಿ ರೊಟ್ಟಿ ಬೇಕು, ಅನ್ನದ ಬದಲಾಗಿ ಚಪಾತಿ ಬೇಕು, ಬಟಾಣಿ ಪಲ್ಯ ಬೇಡ, ಬದನೆಕಾಯಿ ಬೇಡ, ಆಲೂಗೆಡ್ಡೆ ಬೇಡ….’, ಇಂತಹ ಪಥ್ಯಗಳ ಆವಶ್ಯಕತೆಯೇ ಇರುವುದಿಲ್ಲ. ಇಲ್ಲಿ ನೀಡಿದ ಮೂಲಭೂತ ಪಥ್ಯಗಳ ಕುರಿತು ಸವಿಸ್ತಾರ ಮಾಹಿತಿಯನ್ನು ಸನಾತನದ ಗ್ರಂಥ ‘ಆಯುರ್ವೇದಕ್ಕನುಸಾರ ಆಚರಣೆಯನ್ನು ಮಾಡಿ ಔಷಧಿಗಳಿಲ್ಲದೇ ಆರೋಗ್ಯವಾಗಿರಿ !’ (ಮರಾಠಿ) ಇದರಲ್ಲಿ ಕೊಡಲಾಗಿದೆ. ಈ ಮೂಲಭೂತ ಪಥ್ಯಗಳನ್ನು ಆಚರಣೆಯಲ್ಲಿ ತಂದು ಆರೋಗ್ಯವಾಗಿರಿ ಮತ್ತು ಅನಾವಶ್ಯಕ ಪಥ್ಯಗಳನ್ನು ತಡೆಗಟ್ಟಿ !’ – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೮.೨೦೨೨) |