ಮನಮುಕ್ತತೆಯಿಂದ ಮಾತನಾಡುವುದು ಇದೊಂದು ದೊಡ್ಡ ಔಷಧ !

ವೈದ್ಯ ಮೇಘರಾಜ ಪರಾಡಕರ

‘ಪೂರ್ವಗ್ರಹ, ಸಿಟ್ಟು, ಭಯ ಇವುಗಳಂತಹ ಮೂಲಭೂತ ಸ್ವಭಾವದೋಷಗಳಿಂದ ಅನೇಕರಿಗೆ ಮನಮುಕ್ತತೆಯಿಂದ ಮಾತನಾಡಲು ಬರುವುದಿಲ್ಲ. ಕೆಲವರ ಮನಸ್ಸಿನಲ್ಲಿ ವರ್ಷಾನುಗಟ್ಟಲೆ ಹಿಂದಿನ ಪ್ರಸಂಗಗಳು ಮತ್ತು ಅದಕ್ಕೆ ಸಂಬಂಧಪಟ್ಟ ಭಾವನೆಗಳು ಸಂಗ್ರಹವಾಗಿರುತ್ತವೆ. ಮನಸ್ಸಿನಲ್ಲಿ ಯಾವುದೇ ರೀತಿಯ ವಿಚಾರಗಳು ಸಂಗ್ರಹಿತವಾದರೆ, ಅದರ ಪರಿಣಾಮವು ಶರೀರದ ಮೇಲಾಗುತ್ತದೆ ಮತ್ತು ವಿವಿಧ ಶಾರೀರಿಕ ತೊಂದರೆಗಳು ಪ್ರಾರಂಭವಾಗುತ್ತವೆ. ಮನಮುಕ್ತತೆಯಿಂದ ಮಾತನಾಡುವುದರಿಂದ ಮನಸ್ಸಿನಲ್ಲಿ ಸಂಗ್ರಹವಾಗಿರುವ ಭಾವನೆಗಳಿಗೆ ಮಾರ್ಗ ಸಿಗುತ್ತದೆ ಮತ್ತು ಮನಸ್ಸು ಹಗುರವಾಗುತ್ತದೆ. ಮನಸ್ಸಿನ ಮೇಲಿನ ಒತ್ತಡವು ಕಡಿಮೆಯಾಗುತ್ತದೆ ಮತ್ತು ಮುಖದ ಮೇಲೆ?? ಆನಂದ ಕಾಣಿಸುತ್ತದೆ. ಆದುದರಿಂದ ಮನಮುಕ್ತತೆಯಿಂದ ಮಾತನಾಡುವುದು, ಇದೊಂದು ದೊಡ್ಡ ಔಷಧಿಯಾಗಿದೆ.’

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೮.೨೦೨೨)