‘ಶರೀರವು ಸರಿಯಾಗಿ ಕಾರ್ಯನಿರ್ವಹಿಸಲು ಹೇಗೆ ಯೋಗ್ಯ ಪ್ರಮಾಣದಲ್ಲಿ ತಿನ್ನುವುದು ಆಗತ್ಯವಿದೆಯೋ, ಅದೇ ರೀತಿ ಯೋಗ್ಯ ಪ್ರಮಾಣದಲ್ಲಿ ನಿದ್ರೆಯೂ ಆವಶ್ಯಕವಾಗಿರುತ್ತದೆ. ರಾತ್ರಿ ತುಂಬಾ ಹೊತ್ತು ಜಾಗರಣೆ ಮಾಡಿದರೆ, ಪಿತ್ತ ಹೆಚ್ಚುತ್ತದೆ. ಬುದ್ಧಿಯ ಕ್ಷಮತೆ ಕಡಿಮೆಯಾಗುತ್ತದೆ. ಪಚನಕ್ಕೆ ಸಂಬಂಧಪಟ್ಟಿರುವ ರೋಗಗಳು ಪ್ರಾರಂಭವಾಗುತ್ತವೆ. ಶರೀರವು ಅಶಕ್ತ ಮತ್ತು ಕೃಶುವಾಗುತ್ತಾ ಹೋಗುತ್ತದೆ. ಮಲಗುವ ಸಮಯವನ್ನು ಪಾಲಿಸದೇ ಈ ರೋಗಗಳಿಗಾಗಿ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ‘ರಾತ್ರಿಯ ಜಾಗರಣೆ’ ಇದು ಮೂಲ ಕಾರಣವು ಎಲ್ಲಿಯವರೆಗೆ ದೂರವಾಗುವುದಿಲ್ಲವೋ, ಅಲ್ಲಿಯವರೆಗೆ ಔಷಧಿಗಳ ಲಾಭವು ಅಷ್ಟೊಂದು ಕಂಡುಬರುವುದಿಲ್ಲ. ಆದುದರಿಂದ ರಾತ್ರಿ ಹೆಚ್ಚೆಂದರೆ ೧೧ ರಿಂದ ೧೧.೩೦ ರ ವರೆಗೆ ಮಲಗಬೇಕು. ರಾತ್ರಿ ಜಾಗರಣೆ ಮಾಡಿ ಮಾಡುವ ಕೆಲಸಗಳನ್ನು ಮುಂಜಾನೆ ೪ ಅಥವಾ ೫ ಗಂಟೆಗೆ ಎದ್ದು ಮಾಡಬೇಕು. ಎಂದಾದರೊಮ್ಮೆ ಜಾಗರಣೆಯಾದರೆ ನಡೆಯುತ್ತದೆ; ಆದರೆ ಪ್ರತಿದಿನ ರಾತ್ರಿಯ ಜಾಗರಣೆ ಮಾಡುವುದು ತಡೆಯಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೭.೨೦೨೨)