‘ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು, ಸಾಕಷ್ಟು ನಿದ್ರೆ ಮಾಡುವುದು, ಮಲ-ಮೂತ್ರಗಳನ್ನು ತಡೆಹಿಡಿಯದಿರುವುದು, ಯೋಗ್ಯ ಸಮಯದಲ್ಲಿ ಮತ್ತು ಯೋಗ್ಯ ಪ್ರಮಾಣದಲ್ಲಿ ಊಟ ಮಾಡುವುದು ಹಾಗೂ ನಿಯಮಿತವಾಗಿ ವ್ಯಾಯಾಮ ಮಾಡುವುದು’, ಇವುಗಳು ಆರೋಗ್ಯಕ್ಕೆ ಸಂಬಂಧಪಟ್ಟ ಮೂಲಭೂತ ಪಥ್ಯಗಳಿವೆ. ಪ್ರತಿದಿನ ಇವುಗಳನ್ನು ನಿತ್ಯ ಆಚರಣೆಯಲ್ಲಿ ತಂದರೆ, ಆರೋಗ್ಯವು ಇಷ್ಟೊಂದು ಉತ್ತಮವಾಗಿರುತ್ತದೆ, ಅಂದರೆ ಊಟ-ತಿಂಡಿಯ ಪಥ್ಯಗಳ, ಅಂದರೆ ‘ಚಪಾತಿಯ ಬದಲಾಗಿ ರೊಟ್ಟಿ ಬೇಕು, ಅನ್ನದ ಬದಲಾಗಿ ಚಪಾತಿ ಬೇಕು, ಬಟಾಣಿ ಪಲ್ಯ ಬೇಡ, ಬದನೆಕಾಯಿ ಬೇಡ, ಆಲೂಗೆಡ್ಡೆ ಬೇಡ….’, ಇಂತಹ ಪಥ್ಯಗಳ ಆವಶ್ಯಕತೆಯೇ ಇರುವುದಿಲ್ಲ. ಇಲ್ಲಿ ನೀಡಿದ ಮೂಲಭೂತ ಪಥ್ಯಗಳ ಕುರಿತು ಸವಿಸ್ತಾರ ಮಾಹಿತಿಯನ್ನು ಸನಾತನದ ಗ್ರಂಥ ‘ಆಯುರ್ವೇದಕ್ಕನುಸಾರ ಆಚರಣೆಯನ್ನು ಮಾಡಿ ಔಷಧಿಗಳಿಲ್ಲದೇ ಆರೋಗ್ಯವಾಗಿರಿ !’ (ಮರಾಠಿ) ಇದರಲ್ಲಿ ಕೊಡಲಾಗಿದೆ. ಈ ಮೂಲಭೂತ ಪಥ್ಯಗಳನ್ನು ಆಚರಣೆಯಲ್ಲಿ ತಂದು ಆರೋಗ್ಯವಾಗಿರಿ ಮತ್ತು ಅನಾವಶ್ಯಕ ಪಥ್ಯಗಳನ್ನು ತಡೆಗಟ್ಟಿ !’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೮.೨೦೨೨)