ಮಲಬದ್ಧತೆ

ಆಯುರ್ವೇದದಲ್ಲಿನ ಪ್ರಾಥಮಿಕ ಚಿಕಿತ್ಸೆ

‘ಮಲಬದ್ಧತೆಗಾಗಿ ಗಂಧರ್ವ ಹರಿತಕಿ ವಟಿ’ ಈ ಔಷಧದ ೨ ರಿಂದ ೪ ಗುಳಿಗೆಗಳನ್ನು ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು. ಇದರೊಂದಿಗೆ ಹಸಿವಾಗದಿರುವುದು, ಭೋಜನ ಬೇಡವೆನಿಸುವುದು, ಅಪಚನವಾಗುವುದು, ಹೊಟ್ಟೆಯಲ್ಲಿ ವಾಯು (ಗ್ಯಾಸ್) ಆಗುವುದು, ಈ ಲಕ್ಷಣಗಳಿದ್ದರೆ ‘ಲಶುನಾದಿ ವಟಿ’ ಈ ಔಷಧದ ೧-೨ ಗುಳಿಗೆಗಳನ್ನು ಎರಡು ಬಾರಿಯ ಭೋಜನದ ೧೫ ನಿಮಿಷಗಳ ಮೊದಲು ಜಗಿದು ತಿನ್ನಬೇಕು. ಇದರಿಂದ ಪಾಚಕ ಸ್ರಾವವು ಚೆನ್ನಾಗಿ ನಿರ್ಮಾಣವಾಗುತ್ತದೆ. ಮಲಬದ್ಧತೆಯಲ್ಲಿ ಈ ಚಿಕಿತ್ಸೆಯನ್ನು ೧೫ ದಿನ ಮಾಡಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೭.೨೦೨೨)

ಸನಾತನದ ‘ಗಂಧರ್ವ ಹರಿತಕಿ ವಟಿ’ ಮತ್ತು ‘ಲಶುನಾದಿ ವಟಿ’ ಈ ಔಷಧಿಗಳು ಈಗ ಲಭ್ಯವಿವೆ. ಈ ಔಷಧಿಗಳ ವಿವರವಾದ ಬಳಕೆಯ ಬಗ್ಗೆ ಔಷಧದ ಡಬ್ಬದ ಜೊತೆಯಲ್ಲಿರುವ ಕರಪತ್ರದಲ್ಲಿ ನೀಡಲಾಗಿದೆ. ಕರಪತ್ರವನ್ನು ಕಾಳಜಿಪೂರ್ವಕ ಇಡಬೇಕು. ಔಷಧಿಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.