ಪಾಕಿಸ್ತಾನದ ಗ್ರಾಮದಲ್ಲಿ ಉಚಿತ ದಿನಸಿ ಹಂಚಿಕೆಯಲ್ಲಿ ಜನರಿಗೆ ಮೋಸ ! – ಗ್ರಾಮಸ್ಥರ ಆರೋಪ

ಪಾಕಿಸ್ತಾನದ ಮನಸೇಹರಾ ಗ್ರಾಮದಲ್ಲಿ ಜನರಿಗೆ ಉಚಿತ ದಿನಸಿ ಹಂಚಿಕೆಯ ಬಗ್ಗೆ ಸರಕಾರದ ಮೇಲೆ ಮೋಸದ ಆರೋಪ ಮಾಡಲಾಗಿದೆ. ಗ್ರಾಮಸ್ಥರ ಅಭಿಪ್ರಾಯದ ಪ್ರಕಾರ, ಸರಕಾರ ಅಗತ್ಯ ಇರುವವರಿಗೆ ಉಚಿತ ದಿನಸಿ ಹಂಚುತ್ತದೆ ; ಆದರೆ ಕೆಲವು ಜನರು ತಪ್ಪಾದ ಪದ್ಧತಿಯಲ್ಲಿ ಇದನ್ನು ಹಂಚುತ್ತಿದ್ದಾರೆ.

ಮುಸಲ್ಮಾನನಾಗಿ ಮತಾಂತರವಾಗಲು ಸಹೋದ್ಯೋಗಿಗಳಿಂದ ಒತ್ತಡ !

ಬಲೂಚಿಸ್ತಾನದಲ್ಲಿನ ಹಿಂದೂ ಸಂಸದ ದಾನಿಶ ಕುಮಾರ ಇವರು ಪಾಕಿಸ್ತಾನಿ ಸಂಸತ್ತಿನಲ್ಲಿ ಮಾತನಾಡುವಾಗ, ಅವರ ಮೇಲೆ ಬಲವಂತವಾಗಿ ಮತಾಂತರವಾಗುವುದಕ್ಕೆ ಸಹೋದ್ಯೋಗಿಗಳು ಒತ್ತಡ ತರುತ್ತಿದ್ದಾರೆ, ಎಂದು ಹೇಳಿದರು.

ಭಾರತದ ನೋಟಿಸ್ ನಂತರ, ಪಾಕಿಸ್ತಾನವು ಸಿಂಧೂ ಜಲ ಒಪ್ಪಂದದ ತಿದ್ದುಪಡೆಯ ಬಗ್ಗೆ ಚರ್ಚಿಸಲು ಸಿದ್ಧ !

೧೯೬೦ ರ ಸಿಂಧೂ ಜಲ ಒಪ್ಪಂದದ ತಿದ್ದುಪಡಿಯ ಬೇಡಿಕೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ನೋಟಿಸ್‌ಗೆ ಉತ್ತರವನ್ನು ಕಳುಹಿಸಿದೆ. ಹಾಲೆಂಡ್‌ನ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಆಲಿಕೆಯ ಸಂದರ್ಭದಲ್ಲಿ ಭಾರತವು ಈ ವರ್ಷದ ಜನವರಿ ೨೮ ರಂದು ಪಾಕಿಸ್ತಾನಕ್ಕೆ ನೋಟಿಸ್ ಕಳುಹಿಸಿತ್ತು.

ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ ನಿರ್ಮಾಣ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ನದಿಯ ದಡದಲ್ಲಿರುವ ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ (ಕಾರಿಡಾರ್) ನಿರ್ಮಾಣಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸಂಸತ್ತಿನಲ್ಲಿ ಅನುಮೋದನೆ ದೊರೆಯಿತು. ಇದರಿಂದ ಭಾರತದಲ್ಲಿನ ಭಕ್ತರಿಗೆ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಹೋಗಲು ಸುಲಭವಾಗುವುದು.

ಪಾಕಿಸ್ತಾನ ಸರಕಾರದಿಂದ ನ್ಯಾಯಾಧೀಶರಲ್ಲಿ ಬಿರುಕು ಮೂಡಿಸುವ ಯತ್ನ !

ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ, `ಪಂಜಾಬ ಮತ್ತು ಖೈಬರ ಪಖ್ತೂನಖ್ವಾ ಪ್ರಾಂತ್ಯದ ವಿಧಾನಸಭೆಯ ಚುನಾವಣೆಯ ದಿನಾಂಕಗಳ ವಿಷಯದಲ್ಲಿ ಮುಂದುವರೆದಿರುವ ವಿವಾದದ ಬಗ್ಗೆ ನ್ಯಾಯಾಲಯ ತೀರ್ಪು ನೀಡಲಿದೆ;’ ಎಂದು ಹೇಳಿತ್ತು; ಆದರೆ ಈ ವಿಷಯದ ಕುರಿತು ತೀರ್ಪು ಬರುವ ಮೊದಲೇ ಶಹಬಾಜ ಶರೀಫ ಸರಕಾರ ಸರ್ವೋಚ್ಚ ನ್ಯಾಯ ವ್ಯವಸ್ಥೆಯನ್ನು ಟೀಕಿಸಿದ್ದಾರೆ.

ನನ್ನ ಪೂರ್ವಜರು ಭಾರತದಿಂದ ಪಾಕಿಸ್ತಾನಕ್ಕೆ ಬಂದು ದೊಡ್ಡ ತಪ್ಪು ಮಾಡಿದರು ! – ಪಾಕಿಸ್ತಾನಿ ಪತ್ರಕರ್ತೆ ಆರ್ಜು ಕಾಝ್ಮಿ

ಭಾರತದಲ್ಲಿ ವಾಸಿಸುವ ಪಾಕಿಸ್ತಾನ ಪ್ರೇಮಿ ಮುಸಲ್ಮಾನರು ಇದರ ಬಗ್ಗೆ ಏನು ಹೇಳುವರು ? ಭಾರತದಲ್ಲಿನ ಪಾಕಿಸ್ತಾನ ಪ್ರೇಮಿ ಅವರ ಪಾಕಿಸ್ತಾನದಲ್ಲಿನ ಧರ್ಮ ಬಾಂಧವರ ಸಹಾಯಕ್ಕಾಗಿ ಪಾಕಿಸ್ತಾನಕ್ಕೆ ಹೋದರೆ ಪಾಕಿಸ್ತಾನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತದ ಸಮಸ್ಯೆ ಕೂಡ ಪರಿಹಾರವಾಗುವುದು !

ಪಾಕಿಸ್ತಾನದಲ್ಲಿ ಹಿಂದೂ ಅಂಗಡಿಕಾರನನ್ನು ಥಳಿಸಿದ ಪೊಲೀಸ ಅಧಿಕಾರಿ ಅಮಾನತು

ಈ ವಿಡಿಯೋ  ಆಧಾರದಲ್ಲಿ ಸಿಂಧ್ ಮಾನವಾಧಿಕಾರ  ಆಯೋಗವು ಹಿರಿಯ ಪೊಲೀಸ ಅಧಿಕಾರಿಗಳಿಗೆ ಪತ್ರ ಬರೆದು ಸಂಬಂಧಿಸಿದ ಪೊಲೀಸರ ಮೇಲೆ ಕ್ರಮ ಕೈಕೊಳ್ಳುವಂತೆ  ಮನವಿ ಮಾಡಿದೆ.

 ಪಾಕಿಸ್ತಾನದಲ್ಲಿ  ಶ್ರೀ ಹನುಮಂತನನ್ನು ಅಪಮಾನಿಸಿದ ಮುಸಲ್ಮಾನ ಪತ್ರಕರ್ತನ ಬಂಧನ

ಭಾರತದಲ್ಲಿ ವಿವಿಧ ಮಾಧ್ಯಮಗಳಿಂದ ಹಿಂದೂಗಳ  ಧಾರ್ಮಿಕ ಭಾವನೆಗೆ ಧಕ್ಕೆತರಲಾಗುತ್ತದೆ; ಆದರೆ ಹೆಚ್ಚಿನ ಸಲ ಸಂಬಂಧಿತರ ಮೇಲೆ ಕ್ರಮ  ಕೈಕೊಳ್ಳಲಾಗುವುದಿಲ್ಲ. ಪಾಕಿಸ್ತಾನದಲ್ಲಿ ಕೈಕೊಳ್ಳಲಾಗಿರುವ ಕ್ರಮದಿಂದ ಭಾರತವು ಪಾಠ ಕಲಿಯಬೇಕು.

ಪಾಕಿಸ್ತಾನದಲ್ಲಿ ಉಚಿತ ಧಾನ್ಯ ಪಡೆಯಲು ನಡೆದ ಕಾಲ್ತುಳಿತದಲ್ಲಿ ೪ ವೃದ್ಧರ ಸಾವು !

ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದಲ್ಲಿ ಆಹಾರದ ಕೊರತೆ ಎದುರಾಗಿದೆ. ಇದರಿಂದಾಗಿ ಸರಕಾರದಿಂದ ಉಚಿತ ಧಾನ್ಯ ನೀಡಲಾಗುತ್ತಿದೆ.

ಪಾಕಿಸ್ತಾನದಲ್ಲಿ ಸೇನೆಯ ಅಧಿಕಾರ ಹಿಡಿಯುವ ಸಾಧ್ಯತೆ !

ಪಾಕಿಸ್ತಾನ ಸೇನೆಯು ಹಿರಿಯ ಸೇನಾ ಅಧಿಕಾರಿಗಳ ಪರಿಷತ್ತನ್ನು ಆಯೋಜಿಸಿದೆ. ಇದರಲ್ಲಿ ದೇಶದ ಕುಸಿಯುತ್ತಿರುವ ಆರ್ಥಿಕತೆ ಮತ್ತು ಅಸ್ಥಿರ ರಾಜಕೀಯ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯಲಿದೆ.