ಹಿಂದೂಗಳ ದೇವಸ್ಥಾನಗಳ ಮೇಲಿನ ದಾಳಿ ದುಪ್ಪಟ್ಟು ಹೆಚ್ಚಳ !

ಪಾಕಿಸ್ತಾನದಲ್ಲಿರುವ ಮಾನವ ಹಕ್ಕುಗಳ ಸಂಘಟನೆಗಳ ವರದಿ

ನವ ದೆಹಲಿ – ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಮತ್ತು ಭೇದಭಾವ ಎಷ್ಟು ಹೆಚ್ಚಳವಾಗಿದೆಯೆಂದರೆ, ಜನರು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ, ಎನ್ನುವ ಮಾಹಿತಿಯನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. `ಎ ಬ್ರೀಚ್ ಆಫ್ ಫೇತ್ ; ಫ್ರೀಡಂ ಆಫ್ ರಿಲಿಜಿಯನ್ ಆರ್ ಬಿಲೀಫ್ 2021-22’ ಎಂದು ಈ ವರದಿಗೆ ಶೀರ್ಷಿಕೆಯಾಲಾಗಿದೆ. ಪಾಕಿಸ್ತಾನದಲ್ಲಿ 2021 ರ ತುಲನೆಯಲ್ಲಿ 2022 ರಲ್ಲಿ ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿರುವ ಘಟನೆಗಳು ದ್ವಿಗುಣಗೊಂಡಿರುವುದು ಕಂಡು ಬಂದಿದೆ.

 

1. ಈ ವರದಿಯಲ್ಲಿ, ಅಲ್ಪಸಂಖ್ಯಾತರ ವಿರುದ್ಧ ನಡೆದಿರುವ ಪ್ರಕರಣಗಳಿಂದ ಸರಕಾರದ ಧಾರ್ಮಿಕ ಸ್ವಾತಂತ್ರ್ಯದ ಚರ್ಚೆ ಟೊಳ್ಳು ಆಗಿರುವುದು ಕಂಡು ಬರುತ್ತದೆ. ಸಿಂಧ್ ನಲ್ಲಿ ನಿರಂತರವಾಗಿ ಹಿಂದೂ ಹುಡುಗಿಯರ ಮತಾಂತರವಾಗುತ್ತಿರುವುದು ಚಿಂತಾಜನಕವಾಗಿದೆ. ಅಲ್ಪಸಂಖ್ಯಾತರ ಪ್ರಾರ್ಥನಾಸ್ಥಳಗಳ ವಿಡಂಬನೆ ಮತ್ತು ಧ್ವಂಸ ನಡೆಸುತ್ತಿರುವುದರ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. 2014 ರಲ್ಲಿ ಸರ್ವೋಚ್ಚ ನ್ಯಾಯಾಲಯದ ಜಿಲಾನಿ ತೀರ್ಪಿಗೆ ಅನುಸಾರ, `ಸ್ವಾಯತ್ತ ಅಲ್ಪಸಂಖ್ಯಾತ ಆಯೋಗ’ ಸ್ಥಾಪಿಸುವ ಆವಶ್ಯಕತೆಯಿದೆ. ಬಲವಂತದ ಮತಾಂತರವನ್ನು ಅಪರಾಧವೆಂದು ಪರಿಗಣಿಸುವ ಕಾಯಿದೆ ರಚಿಸಲು ಶಿಫಾರಸ್ಸು ಮಾಡಿದೆ.

2. ಮಾನವ ಹಕ್ಕುಗಳ ಕಾರ್ಯಕರ್ತೆ ಫರಜಾನಾ ಬಾರಿಯವರು ಮಾತನಾಡುತ್ತಾ, ದೇಶದಲ್ಲಿ ಧಾರ್ಮಿಕ ಭೇದಭಾವ ದೊಡ್ಡ ಪ್ರಮಾಣದಲ್ಲಿದೆ. ವಿವಾಹ, ಧಾರ್ಮಿಕ ಶ್ರದ್ಧೆಗಳಲ್ಲದೇ ಪ್ರತಿಯೊಂದು ಕ್ಷೇತ್ರದಲ್ಲಿ ಭೇದಭಾವ ಆಗುತ್ತಿದೆ. ಹಿಂದೂ ಸಮಾಜದ ಸುರಕ್ಷತೆಗಾಗಿ ಕಾನೂನಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗುತ್ತಿದೆ ಎಂದು ಹೇಳಿದರು.

3. `ಪಾಕಿಸ್ತಾನ ದರಾರ ಇತೆಹಾದ(ಪಿಡಿಆಯ್)’ ಈ ಹಿಂದೂಗಳ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಸಂಘಟನೆಯ ಹೇಳಿಕೆಯಂತೆ, ಸಿಂಧ್ ಪ್ರಾಂತ್ಯದಲ್ಲಿ ಉದ್ದೇಶಪೂರ್ವಕವಾಗಿ ಹತ್ಯೆ, ಬಲಾತ್ಕಾರ, ಹಿಂದೂಗಳ ಭೂಮಿಯನ್ನು ಕಬಳಿಕೆ, ಸಾಮೂಹಿಕ ಮತಾಂತರ, ಮನೆ ಮತ್ತು ದೇವಸ್ಥಾನಗಳನ್ನು ಸುಡುವುದು, ಸ್ಮಶಾನ ಭೂಮಿಯ ಮೇಲೆ ಆಕ್ರಮಣ ನಡೆಸುವುದು ಈ ಘಟನೆಗಳು ರಾಜಾರೋಷವಾಗಿ ನಡೆಯುತ್ತಿದೆ. ಇತ್ತೀಚೆಗೆ ಡಾ. ಬಿರಬಲ್ ಗೆನಾನಿ ಇವರ ಹತ್ಯೆ ನಡೆಯಿತು.

ಹಿಂದೂಗಳ ವಿರುದ್ಧದ ಅಪರಾಧಗಳು

ಪ್ರಕಾರ ವರ್ಷ 2022 ವರ್ಷ 2021
ಉದ್ದೇಶಪೂರ್ವಕ ಹತ್ಯೆ 24 17
ಬಲವಂತ ಮತಾಂತರ 34 28
ಹತ್ಯೆ 37 21
ದೇವಸ್ಥಾನಗಳ ಧ್ವಂಸ 89 36

ಸಂಪಾದಕೀಯ ನಿಲುವು

ಪಾಕಿಸ್ತಾನ ಸರಕಾರಕ್ಕೆ ಕಪಾಳಮೋಕ್ಷ ! ಈ ದಾಳಿಯನ್ನು ತಡೆಯಲು ಪಾಕಿಸ್ತಾನ ಸರಕಾರ, ಆಡಳಿತ ಮತ್ತು ಪೊಲೀಸರು ಏನಾದರೂ ಕ್ರಮ ಕೈಕೊಳ್ಳಬಹುದು ಎನ್ನುವ ಖಾತ್ರಿಯಿಲ್ಲ. ಇದರೊಂದಿಗೆ ಭಾರತದಲ್ಲಿ ಕಳೆದ 75 ವರ್ಷಗಳು ಆಡಳಿತ ನಡೆಸಿರುವ ರಾಜ್ಯಕರ್ತರು ಈ ಕುರಿತು ಗಂಭೀರತೆಯಿಂದ ಪ್ರಯತ್ನಿಸಿರುವುದು ಕಂಡು ಬರುತ್ತಿಲ್ಲ. ಆದ್ದರಿಂದ ಪಾಕಿಸ್ತಾನದಲ್ಲಿರುವ ಹಿಂದೂಗಳ ಜೀವನವೆಂದರೆ ನರಕಯಾತನೆಯಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾದರೆ ಬದಲಾವಣೆಯಾಗುವುದು.

ಭಾರತದ ಅಲ್ಪಸಂಖ್ಯಾತರ ಮೇಲಿನ ತಥಾಕಥಿತ ಅತ್ಯಚಾರಗಳ ವಿಷಯದಲ್ಲಿ ಕೂಗಾಡುವ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಈಗ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ದುಃಸ್ಥಿತಿಯ ವಿಷಯದಲ್ಲಿ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದು ಗಮನದಲ್ಲಿಟ್ಟುಕೊಳ್ಳಿ !