ಪಾಕಿಸ್ತಾನದಲ್ಲಿ ಮೃತಪಟ್ಟ ಹೆಣ್ಣುಮಕ್ಕಳ ಕಬ್ರದ ಮೇಲೆ ಬಲೆ ಹಾಕಿ ಬೀಗ್ ಹಾಕಲಾಗುತ್ತಿದೆ !

ಶವದ ಮೇಲೆ ಅತ್ಯಾಚಾರವಾಗುವ ಭಯ !

ಇಸ್ಲಾಮಾಬಾದ್ (ಪಾಕಿಸ್ತಾನ) – ಇತ್ತೀಚಿನ ದಿನಗಳಲ್ಲಿ, ಮೃತ ಯುವತಿಯರು ಮತ್ತು ಬಾಲಕಿಯರ ಶವಗಳನ್ನು ಕಬ್ರದಿಂದ ಹೊರತೆಗೆದು ಅತ್ಯಾಚಾರ ಮಾಡುವ ಹಲವಾರು ಘಟನೆಗಳು ನಡೆದಿವೆ. ಆದ್ದರಿಂದ ಈಗ ಮೃತ ಯುವತಿಯರು ಮತ್ತು ಮಹಿಳೆಯರ ಕಬ್ರಗೆ ಕಬ್ಬಿಣದ ಸುರಳಿ ಹಾಕಿ ಬೇಲಿ ಹಾಕಿ ಬೀಗ ಜಡಿಯಲಾಗುತ್ತದೆ, ಇನ್ನೂ ಕೆಲವೆಡೆ ಮೃತರ ಸಂಬಂಧಿಕರು ಕಾವಲು ಕಾಯುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಶವಗಳನ್ನು ಬೇಗ ಕೊಳೆಯುವ ಸಲುವಾಗಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇರಿಸಲಾಗುತ್ತಿದೆ.

೧. ಶವಗಳ ಮೇಲೆ ಅತ್ಯಾಚಾರ ಮಾಡುವ ಘಟನೆಗಳು ಕರಾಚಿ ಮತ್ತು ಇತರ ಕೆಲವು ನಗರಗಳಲ್ಲಿ ನಡೆದಿವೆ. ಸಿಂಧ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ೧೪ ವರ್ಷದ ಬಾಲಕಿಯ ಶವವನ್ನು ಕಬ್ರದಿಂದ ಹೊರತೆಗೆದು ಅತ್ಯಾಚಾರ ಮಾಡಲಾಗಿತ್ತು.

೨. ೨೦೧೧ ರಲ್ಲಿ ಪಾಕಿಸ್ತಾನದಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಅದರಲ್ಲಿ, ಉತ್ತರ ನಾಜಿಮಾಬಾದ್ (ಕರಾಚಿ) ನಲ್ಲಿರುವ ಸ್ಮಶಾನದ ಭದ್ರತಾ ಸಿಬ್ಬಂದಿ ಮೊಹಮ್ಮದ್ ರಿಜ್ವಾನ್ ೪೮ ಸತ್ತ ಮಹಿಳೆಯರ ಶವಗಳ ಮೇಲೆ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ಬಂಧಿಸಲಾಯಿತು.

೩. ಪಾಕಿಸ್ತಾನದ “ಡೈಲಿ ಟೈಮ್ಸ್”ನ ವರದಿ ಪ್ರಕಾರ, ಇಂತಹ ಘಟನೆಗಳಲ್ಲಿ ಏರಿಕೆಯಾಗಿವೆ. ಹಾಗಾಗಿ ಮೃತನ ಪೋಷಕರು ಕಬ್ರವನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದೆ.

೪. ಜಮಿಯತ್ ಉಲಮ್-ಎ-ಇಸ್ಲಾಂ ಪಾಕಿಸ್ತಾನದ ಮೌಲಾನಾ (ಇಸ್ಲಾಂನ ವಿದ್ವಾಂಸ) ರಶೀದ್ ಅವರು, ಜೀವಂತವಾಗಿರುವಾಗ ಮಹಿಳೆಯರು ತಮ್ಮ ಮೇಲೆ ಕೆಟ್ಟ ಕಣ್ಣು ಹಾಕುವವರ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿರುತ್ತಾರೆ; ಆದರೆ ಈಗ ಈ ವಿಷಯ ಅವರ ಕಬ್ರದ ವರೆಗೆ ತಲುಪಿದೆ. ಇದು ಭಯಾನಕ ಮತ್ತು ದೇಶಕ್ಕೆ ಅವಮಾನವಾಗಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಯೆಂದು ಹೇಳಿದರು.

ಸಂಪಾದಕರ ನಿಲುವು

ಪಾಕಿಸ್ತಾನದಲ್ಲಿ ಇಂತಹ ರಾಕ್ಷಸೀ ಜನರಿದ್ದಾರೆ, ಇದು ಮನುಕುಲಕ್ಕೆ ಕಪ್ಪುಚುಕ್ಕೆಯೇ ಆಗಿದೆ ! ಇಂತಹ ದೇಶ ಅವನತಿ ಹೊಂದುವುದರಲ್ಲಿ ಸಂಶಯವಿಲ್ಲ !

ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳಿಗೆ ಪಾಕಿಸ್ತಾನದಲ್ಲಿ ಈ ಅಮಾನವೀಯತೆ ಕಾಣಿಸುತ್ತಿಲ್ಲವೇ ? ಭಾರತದಲ್ಲಿ ನಡೆದ ತಥಾಕಥಿತ ಘಟನೆಗಳ ವಿರುದ್ಧ ಈ ಸಂಘಟನೆಗಳು ತಕ್ಷಣವೇ ವರದಿಗಳನ್ನು ಪ್ರಕಟಿಸುತ್ತದೆ, ಹಾಗೆ ಪಾಕಿಸ್ತಾನದ ವಿರುದ್ಧ ಅಂತಹ ವರದಿಗಳನ್ನು ಪ್ರಕಟಿಸುತ್ತವೆಯೇ ?