ಪಾಕಿಸ್ತಾನಿ ಚಿತ್ರರಂಗದ ನಿರ್ಮಾಪಕರು ಅಶ್ಲೀಲತೆಯನ್ನು ಪ್ರಸಾರ ಮಾಡುವ ಭಾರತೀಯ ಚಿತ್ರರಂಗದ ಅನುಕರಣೆಯನ್ನು ಮಾಡುವುದನ್ನು ನಿಲ್ಲಿಸಬೇಕು ! – ಪಾಕ್ ಪ್ರಧಾನಿ ಇಮ್ರಾನ್ ಖಾನ್

ಅಶ್ಲೀಲತೆಯ ಪ್ರಸಾರವನ್ನು ಮಾಡುವ ಭಾರತೀಯ ಚಿತ್ರರಂಗದ ಅನುಕರಣೆಯನ್ನು ಪಾಕಿಸ್ತಾನಿ ಚಿತ್ರರಂಗವು ನಿಲ್ಲಿಸಬೇಕು, ಎಂದು ಪಾಕ್‍ನ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ಅವರು ಇಲ್ಲಿ ‘ಶಾರ್ಟ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮಾತಾಡುತ್ತಿದ್ದರು.

ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನ ಸಂಸತ್ತಿನಿಂದ ಮಾನ್ಯತೆ

ಅಂತರರಾಷ್ಟ್ರೀಯ ನ್ಯಾಯಾಲಯದ ಒತ್ತಡಕ್ಕೆ ಮಣಿದ ಪಾಕಿಸ್ತಾನದ ‘ನ್ಯಾಶನಲ್ ಅಸೆಂಬ್ಲಿ’ಯು ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಅನುಮೋದನೆ ನೀಡಿದೆ. ಇದರಿಂದ ಕುಲಭೂಷಣ್ ಜಾಧವ ಅವರಿಗೆ ದೊಡ್ಡ ಸಾಂತ್ವನ (ಸಮಾಧಾನ) ಸಿಕ್ಕಿದೆ.

ಪಾಕಿಸ್ತಾನಿ ಸೈನ್ಯವು ‘ಹಮಾಸ್’ನ ಭಯೋತ್ಪಾದಕರಿಗೆ ತರಬೇತಿಯನ್ನು ನೀಡುತ್ತದೆ ! – ಪಾಕಿಸ್ತಾನದ ಹಿರಿಯ ನಾಯಕನಿಂದ ರಹಸ್ಯಸ್ಪೋಟ

ಗಾಜಾ ಪ್ರದೇಶದಲ್ಲಿ ಪ್ಯಾಲೇಸ್ಟಿನಿಯನ್ `ಹಮಾಸ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಉಗ್ರರಿಗೆ ಪಾಕಿಸ್ತಾನಿ ಸೈನ್ಯವೇ ತರಬೇತಿಯನ್ನು ನೀಡುತ್ತಿದೆ ಎಂದು ಪಾಕಿಸ್ತಾನದ ಹಿರಿಯ ಮುಖಂಡ ರಾಜಾ ಜಫರ್ ಉಲ್ ಹಕ್ ಹೇಳಿದ್ದಾರೆ. ಪಾಕಿಸ್ತಾನಿ ಸೈನ್ಯವು ದೀರ್ಘಕಾಲದಿಂದ ಹಮಾಸ್ ಉಗ್ರರಿಗೆ ತರಬೇತಿಯನ್ನು ನೀಡುತ್ತಿದೆ ಮತ್ತು ಅದಕ್ಕಾಗಿ `ಸ್ಪೆಶಲ್ ಕಮಾಂಡೋ ಯುನಿಟ್’ನ ಒಂದು ಪಡೆಯು ಕೆಲವು ವರ್ಷಗಳಿಂದ ಅಲ್ಲಿ ನಿಯುಕ್ತಿಗೊಂಡಿದೆ ಎಂದು ಅವರು ಹೇಳಿದರು.

‘ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಭಾರತೀಯ ಸಂಸ್ಕೃತಿಯೇ ಕಾರಣ!(ವಂತೆ) – ಪಾಕಿಸ್ತಾನ ಪ್ರಧಾನಿಯ ಭಾರತದ್ವೇಷಿ ಹೇಳಿಕೆ

ಅಶ್ಲೀಲತೆಯಿಂದ ಅತ್ಯಾಚಾರ ಅಥವಾ ಲೈಂಗಿಕ ಶೋಷಣೆ ಆಗುತ್ತದೆ. ಈ ಅಶ್ಲೀಲತೆಯು ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಸ್ಕೃತಿಯಿಂದ ಬರುತ್ತದೆ, ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದರು.

ರಾವಲ್‍ಪಿಂಡಿಯಲ್ಲಿ (ಪಾಕಿಸ್ತಾನ) ಮತಾಂಧರಿಂದ ಹಿಂದೂ ದೇವಾಲಯ ಧ್ವಂಸ !

ಪಾಕಿಸ್ತಾನದ ರಾವಲ್‍ಪಿಂಡಿಯಲ್ಲಿ ೧೦೦ ವರ್ಷಗಳಷ್ಟು ಹಳೆಯದಾದ ದೇವಾಲಯದ ಮೇಲೆ ೧೦ ರಿಂದ ೧೫ ಮತಾಂಧರು ದಾಳಿ ಮಾಡಿದ್ದಾರೆ. ಈ ದೇವಾಲಯ ನವೀಕರಣಗೊಳ್ಳುತ್ತಿರುವಾಗ ದಾಳಿ ನಡೆದಿದೆ.