ಪಾಕಿಸ್ತಾನದಲ್ಲಿನ ವಾರ್ತಾವಾಹಿನಿಯ ಹಿಂದೂ ಅಧಿಕಾರಿಯ ಅಪಹರಣ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಪ್ರಸಿದ್ಧ ವಾರ್ತಾ ವಾಹಿನಿ ‘ಬೋಲ್ ನ್ಯೂಸ್’ ನ ಅಧಿಕಾರಿ ಆಕಾಶ ರಾಮ ಇವರನ್ನು ಏಪ್ರಿಲ್ ೧೧ ರಂದು ಮನೆಯ ಎದುರಿನಿಂದ ಅಪಹರಿಸಲಾಗಿದೆ. ಒಂದು ಕಾರಿನಲ್ಲಿ ಅವರನ್ನು ಮತ್ತು ಅವರ ಸುರಕ್ಷಾ ರಕ್ಷಕರನ್ನು ಅಪಹರಿಸಲಾಗಿದೆ. ಅಪಹರಣಕಾರರು ಇಲ್ಲಿಯ ಸಿಸಿಟಿವಿ ಕ್ಯಾಮೆರಾ ಒಡೆದು ಹಾಕಿದ್ದಾರೆ . ಆಕಾಶ ರಾಮ ಇವರ ತಾಯಿಯ ಪ್ರಕಾರ, ‘ನನ್ನ ಮಗ ಹಿಂದೂ ಆಗಿದ್ದಾನೆ; ಆದರೆ ಅವರು ಪಾಕಿಸ್ತಾನಿ ಕೂಡ ಆಗಿದ್ದಾನೆ, ಹಾಗಾದರೆ ಅವರ ಅಪಹರಣ ಏಕೆ ಮಾಡಲಾಗಿದೆ ? ನಾನು ಅವನನ್ನು ನೋಡಲು ಬಯಸುತ್ತೇನೆ.’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಹಿಂದೂ ಅಸುರಕ್ಷಿತವಾಗಿದ್ದಾರೆ, ಇದು ಜಗ್ಗಾಜಾಹಿರವಾಗಿರುವಾಗ ಅವರ ರಕ್ಷಣೆಗಾಗಿ ಪಾಕಿಸ್ತಾನ ಸರಕಾರ, ಆಡಳಿತ, ಪೊಲೀಸರು ಏನು ಮಾಡಲಾರರು, ಇದು ಸತ್ಯವಾಗಿದೆ; ಆದರೆ ಅಂತರಾಷ್ಟ್ರೀಯ ದೇಶಗಳು, ಸಂಘಟನೆಗಳು ಮತ್ತು ಭಾರತ ಕೂಡ ನಿಷ್ಕ್ರಿಯವಾಗಿದೆ, ಇದು ನಾಚಿಕೆಗೇಡು !