ಪಾಕಿಸ್ತಾನದಲ್ಲಿ ಧರ್ಮನಿಂದನೆ ಆರೋಪದಲ್ಲಿ ಬಂಧಿಸಲಾಗಿರುವ ಚೀನಾ ನಾಗರಿಕನಿಗೆ ೧೪ ದಿನದ ನ್ಯಾಯಾಂಗ ಬಂಧನ

ಇಸ್ಲಾಮಾಬಾದ – ಪಾಕಿಸ್ತಾನದಲ್ಲಿ ಧರ್ಮನಿಂದನೆ ಮಾಡಿರುವ ಆರೋಪದಲ್ಲಿ ಬಂಧಿಸಲಾಗಿರುವ ಚೀನಾದ ನಾಗರಿಕನಿಗೆ ನ್ಯಾಯಾಲಯವು ೧೪ ದಿನದ ನ್ಯಾಯಾಂಗ ಕಸ್ಟಡಿ ವಿಧಿಸಿದೆ. ಇದರ ಬಗ್ಗೆ ಪ್ರತಿಕ್ರಿಯೆಸಿದ ಚೀನಾ `ಈ ಬಗ್ಗೆ ವರದಿಯ ಪರಿಶೀಲನೆ ಮಾಡುತ್ತಿದೆ’ ಎಂದು ಹೇಳಿದೆ.

ಪಾಕಿಸ್ತಾನದ ಖೈಬರ್ ಪಖ್ಟುನಾಖ್ವಾ ಪ್ರಾಂತ್ಯದಲ್ಲಿ ಏಪ್ರಿಲ್ ೧೬ ರಂದು ತಿಯಾನ್ ಹೆಸರಿನ ಚೀನಾ ನಾಗರೀಕನನ್ನು ಬಂಧಿಸಲಾಗಿದೆ. ಇಲ್ಲಿಯ ಜಲವಿದ್ಯುತ ಪ್ರಕಲ್ಪದ ಕೆಲಸ ಮಾಡುವ ಈ ಚೀನಾ ಇಂಜಿನಿಯರ್ ಧರ್ಮನಿಂದನೆ ಮಾಡಿದ್ದನು. ಅನಂತರ ಅವರ ಚಾಲಕನು ಅವರ ವಿರುದ್ಧ ದೂರು ದಾಖಲಿಸಿದನು. ಅದರ ಜೊತೆಗೆ ಪ್ರಕಲ್ಪದಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು ಆಂದೋಲನ ನಡೆಸಿ ಅವರನ್ನು ಬಂಧಿಸಲು ಆಗ್ರಹಿಸಿದರು. ಪಾಕಿಸ್ತಾನದಲ್ಲಿನ ಧರ್ಮನಿಂದನೆಯ ಕಾನೂನಿನ ಅಂತರ್ಗತದ ಈ ಅಪರಾಧಕ್ಕಾಗಿ ಗಲ್ಲು ಶಿಕ್ಷೆಯ ಏರ್ಪಾಡು ಇದೆ.

ಸಂಪಾದಕೀಯ ನಿಲುವು

ಇತರ ದೇಶದ ನಾಗರೀಕರು ತಮ್ಮ ಧಾರ್ಮಿಕಶ್ರದ್ಧೆಯನ್ನು ಅವಮಾನಿಸಿದರೆ ಪಾಕಿಸ್ತಾನದಲ್ಲಿ ನೇರ ಬಂಧನ ಆಗುತ್ತದೆ ; ಆದರೆ ಭಾರತದಲ್ಲಿ ‘ಅಮೆಜಾನ್ ‘ನಂತಹ ಅನೇಕ ವಿದೇಶಿ ಕಂಪನಿಗಳು ಹಿಂದೂ ದೇವತೆಗಳ ಬಹಿರಂಗವಾಗಿ ವಿಡಂಬನೆ , ಅವಮಾನ ಮಾಡಿದ್ದರು ಕೂಡ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ! ಇಂತಹ ಸ್ಥಿತಿ ಹಿಂದೂಗಳಿಗೆ ನಾಚಿಗೇಡು !