ಪಾಕಿಸ್ತಾನ ಜಿಹಾದಿ ಭಯೋತ್ಪಾದಕರ ವಿರುದ್ಧ ಬಲವಾದ ಕ್ರಮ ಕೈಗೊಳ್ಳಲಿದೆ !

ಇಸ್ಲಾಮಾಬಾದ (ಪಾಕಿಸ್ತಾನದ) – ಕಳೆದ ೩ ದಶಕಗಳಿಂದ ಭಾರತದ ವಿರುದ್ಧ ಜಿಹಾದಿ ಭಯೋತ್ಪಾದಕ ಚಟುವಟಿಕೆ ನಡೆಸುವ ಪಾಕಿಸ್ತಾನ ತನ್ನ ದೇಶದಲ್ಲಿ ಭಯೋತ್ಪಾದಕರ ವಿರುದ್ಧ ‘ಆಪರೇಷನ್ ಆಲ್ ಔಟ್’ ಪ್ರಾರಂಭಿಸುವ ಘೋಷಣೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಮೇಲೆ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಸುರಕ್ಷಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯನ್ನು ಪ್ರಧಾನಮಂತ್ರಿ ಶಹಾಬಾಜ ಶರೀಫ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸರಕಾರದಿಂದ ಪ್ರಕಟಿಸಿರುವ ಮನವಿಯಲ್ಲಿ, ಈ ಕಾರ್ಯಾಚರಣೆ ಹೊಸ ಉತ್ಸಾಹದಿಂದ ಮತ್ತು ನಿರ್ಧಾರದಿಂದ ಕೈಗೊಳ್ಳಲಾಗುವುದು. ಇದರಲ್ಲಿ ಜನರನ್ನು ಕೂಡ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದೆ.

ಪಾಕಿಸ್ತಾನದಲ್ಲಿ ಜಿಹಾದಿ ಭಯೋತ್ಪಾದನೆಯ ದಾಳಿಯಲ್ಲಿ ಹೆಚ್ಚಳವಾಗಿದೆ.

ತಹರಿಕ್-ಏ-ತಾಲಿಬಾನ್ (ಟಿಟಿಪಿ) ಸಂಘಟನೆಯಿಂದ ಖೈಬರ್-ಪಖ್ಟುನಾಖ್ವಾದಲ್ಲಿ ದಾಳಿ ಆರಂಭಿಸಿದೆ. ಇಲ್ಲಿ ಕಳೆದ ೩ ತಿಂಗಳಲ್ಲಿ ಭಯೋತ್ಪಾದಕರ ದಾಳಿಯಲ್ಲಿ ೧೨೭ ಪೊಲೀಸರು ಹತರಾಗಿದ್ದಾರೆ.

ಸಂಪಾದಕೀಯ ನಿಲುವು

  • ಜಿಹಾದಿ ಭಯೋತ್ಪಾದಕರನ್ನು ನಿರ್ಮಿಸಿರುವ ಪಾಕಿಸ್ತಾನ ಈ ರೀತಿಯ ಕ್ರಮ ಕೈಗೊಳ್ಳಲು ಪ್ರಾರಂಭ ಮಾಡುವುದು, ಇದೊಂದು ತಮಾಷೆ ಎನ್ನಬಹುದು !
  • ಪಾಕಿಸ್ತಾನವು ನಿಜವಾಗಿಯೂ ಕ್ರಮ ಕೈಗೊಳ್ಳುವುದಿದ್ದರೆ, ಅದು ಮೊದಲು ಭಾರತದಲ್ಲಿ ಕಾರ್ಯಾಚರಣೆ ಮಾಡುವ ಭಯೋತ್ಪಾದಕ ಸಂಘಟನೆಗಳ ಭಯೋತ್ಪಾದನೆಯ ತರಬೇತಿ ಕೇಂದ್ರಗಳನ್ನು ಮುಚ್ಚಬೇಕು, ಆ ಸಂಘಟನೆಗಳ ಮುಖ್ಯಸ್ಥರನ್ನು ಭಾರತಕ್ಕೆ ಒಪ್ಪಿಸಬೇಕು, ಹಾಗೂ ಆ ಭಯೋತ್ಪಾದಕ ಸಂಘಟನೆಯನ್ನು ನಿಷೇಧಿಸಬೇಕು. ಅಂದರೆ ಪಾಕಿಸ್ತಾನ ನಿಜವಾಗಿಯೂ ಗಂಭೀರವಾಗಿದೆ ಎಂದು ಹೇಳಬಹುದು !