ಇಸ್ಲಾಂನ ಅವಮಾನ ಮಾಡಿದ ಚೇನಿ ನಾಗರಿಕನಿಗೆ ಪಾಕಿಸ್ತಾನದ ನ್ಯಾಯಾಲಯದಿಂದ ಜಾಮೀನು !

ಪೊಲೀಸರು ಸುಳ್ಳು ಆರೋಪ ದಾಖಲಿಸಿರುವುದು ನ್ಯಾಯಾಲಯದಲ್ಲಿ ಸಾಬೀತು

ಇಸ್ಲಾಮಾಬಾದ (ಪಾಕಿಸ್ತಾನ) – ಇಸ್ಲಾಂನ ಅವಮಾನ ಮಾಡಿದ ಪ್ರಕರಣದಲ್ಲಿ ಬಂಧಿತ ಚೀನಾ ನಾಗರಿಕನಿಗೆ ಭಯೋತ್ಪಾದಕ ವಿರೋಧಿ ದಳದ ನ್ಯಾಯಾಲಯವು ೨ ಲಕ್ಷ ರೂಪಾಯಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಆತನ ಬಿಡುಗಡೆಯ ನಂತರ ಅತನನ್ನು ರಹಸ್ಯ ಸ್ಥಳದಲ್ಲಿ ಇರಿಸಲಾಗಿದೆ. ನ್ಯಾಯಾಲಯವು, ಕೊಹಿಸ್ತಾನ ಪೋಲೀಸರು ಈ ನಾಗರೀಕನ ವಿರುದ್ಧ ಸುಳ್ಳು ಆರೋಪ ದಾಖಲಿಸಿದೆ. ಈ ವ್ಯಕ್ತಿ ನುರಿತ ಅಪರಾಧಿವಲ್ಲ. ಆದ್ದರಿಂದ ಅವನಿಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ವರ್ಷ ಏಪ್ರಿಲ್ ೧೬ ರಂದು ಪಾಕಿಸ್ತಾನ ಕಾರ್ಮಿಕರು ಡಾಸು ಜಲವಿದ್ಯುತ್ ಪ್ರಕಲ್ಪದ ಕೆಲಸ ಮಾಡುವ ಈ ಚೀನಿ ನಾಗರಿಕನ ವಿರುದ್ಧ ಇಸ್ಲಾಂನ ಅವಮಾನ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. (ಪಾಕಿಸ್ತಾನ ಯಾವ ರೀತಿ ಇತರ ಧರ್ಮದವರ ವಿರುದ್ಧ ಸುಳ್ಳು ಆರೋಪ ಮಾಡಿ ಅವರನ್ನು ಮುಗಿಸುತ್ತಾರೆ ಇದನ್ನು ತಿಳಿಯಿರಿ ! – ಸಂಪಾದಕರು)

ಸಂಪಾದಕೀಯ ನಿಲುವು

ಹೀಗೆ ಸುಳ್ಳು ಆರೋಪ ದಾಖಲಿಸಿ ಪಾಕಿಸ್ತಾನದಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳನ್ನು ಉದ್ದೇಶ ಪೂರ್ವಕವಾಗಿ ಜೈಲಿಗೆ ಕಳುಹಿಸಿ ಶಿಕ್ಷೆ ನೀಡಲಾಗುತ್ತದೆ. ಈ ಬಗ್ಗೆ ಪಾಕಿಸ್ತಾನದ ನ್ಯಾಯಾಲಯವು ವಸ್ತುನಿಷ್ಠ ವಿಚಾರಣೆ ಮಾಡಬೇಕು !