ಚಿಕಿತ್ಸೆಗೆಂದು ಲಂಡನ್ ಗೆ ಪರಾರಿಯಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಪಾಕಿಸ್ತಾನಕ್ಕೆ ಹಿಂತಿರುಗುವರು !

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ‘ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್’ (ಪಿ.ಎಂ.ಎಲ್.ಎನ್.) ಪಕ್ಷದ ಮುಖಂಡ ನವಾಜ್ ಶರೀಫ್ ಪಾಕಿಸ್ತಾನದಲ್ಲಿ ನಡೆಯುವ ಸಾರ್ವಜನಿಕ ಚುನಾವಣೆಯಲ್ಲಿ ನೇತೃತ್ವ ವಹಿಸುವುದಕ್ಕಾಗಿ ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದಾರೆ, ಎಂದು ಪಾಕಿಸ್ತಾನದ ಗೃಹಸಚಿವ ರಾಣ ಸನಉಲ್ಲಹ ಇವರು ಈ ಮಾಹಿತಿ ನೀಡಿದರು. ನವಾಜ್ ಶರೀಫ್ ಲಂಡನಗೆ ಪರಾರಿಯಾಗಿದ್ದರು. ಭ್ರಷ್ಟಾಚಾರದ ಪ್ರಕರಣದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ. ಚಿಕಿತ್ಸೆಗಾಗಿ ಅವರು ಲಂಡನ್ ಗೆ ಹೋಗಿದ್ದರು; ಆದರೆ ಅಲ್ಲಿಂದ ಅವರು ಹಿಂತಿರುಗಿರಲಿಲ್ಲ. ಈಗ ಪಾಕಿಸ್ತಾನದಲ್ಲಿ ಅವರ ಪಕ್ಷದ ಸಮ್ಮಿಶ್ರ ಸರಕಾರ ಇರುವಾಗ ಅವರು ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗುತ್ತಿದ್ದಾರೆ.