ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ೬ ವರ್ಷದ ಹಿಂದೂ ಹುಡುಗಿಗೆ ಲೈಂಗಿಕ ಕಿರುಕುಳ !

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

ಕರಾಚಿ (ಪಾಕಿಸ್ತಾನ) – ಸಿಂಧ ಪ್ರಾಂತದಲ್ಲಿನ ಟಾಂಡೊ ಅಲ್ಲಾಯಾರ ಜಿಲ್ಲೆಯಲ್ಲಿರುವ ಶೇಕ್ ಬೀರಕಿಯೋ ಗ್ರಾಮದಲ್ಲಿನ ಓರ್ವ ಹಿಂದೂ ಹುಡುಗಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಓರ್ವ ೬ ವರ್ಷದ ಹಿಂದೂ ಹುಡುಗಿಯ ಅಪಹರಣ ಮಾಡಲಾಗಿತ್ತು. ನಂತರ ಮನೆಯಿಂದ ಆರು ಕಿಲೋಮೀಟರ್ ದೂರದಲ್ಲಿ ಆಕೆ ಪ್ರಜ್ಞ ಹೀನ ಸ್ಥಿತಿಯಲ್ಲಿ ಕಂಡು ಬಂದಳು. ಆಕೆಯನ್ನು ಗಾಯಗೊಂಡಿರುವ ಸ್ಥಿತಿಯಲ್ಲೇ ಆಸ್ಪತ್ರೆ ಸೇರಿಸಲಾಯಿತು. ಆಕೆಯ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದು ಬೆಳಕಿಗೆ ಬಂದ ನಂತರ ಓರ್ವ ೨೩ ವರ್ಷದ ಕಾಮುಕ ಮುಸಲ್ಮಾನ ಯುವಕನನ್ನು ಬಂಧಿಸಲಾಗಿದೆ. ಟಾಂಡೋ ಅಲ್ಲಾಯಾರ್ ಜಿಲ್ಲೆಯಲ್ಲಿ ವಾಸಿಸುವ ಹಿಂದೂಗಳ ವಿರುದ್ಧ ಮತಾಂಧ ಮುಸಲ್ಮಾನರಿಂದ ಈ ಹಿಂದೆ ಕೂಡ ದಾಳಿ ನಡೆದಿರುವ ಘಟನೆ ಆಗಾಗ ಬೆಳಕಿಗೆ ಬಂದಿವೆ.