(‘ಸರ್ಜಿಕಲ್ ಸ್ಟ್ರೈಕ’ ಎಂದರೆ ಭಯೋತ್ಪಾದಕರ ಮೇಲೆ ರಹಸ್ಯವಾಗಿ ನಡೆಸುವ ಕಾರ್ಯಾಚರಣೆ)
-
ಪುಂಛನಲ್ಲಾದ ಭಯೋತ್ಪಾದಕ ದಾಳಿ ಪ್ರಕರಣ
-
ಭಾರತದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಾಸಿತ್ ನ ದಾವೆ
ಇಸ್ಲಾಮಾಬಾದ (ಪಾಕಿಸ್ತಾನ) – ಸಧ್ಯ ಭಾರತದಿಂದ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನ ಅಪಾಯದ ಚರ್ಚೆ ಪ್ರಾರಂಭವಾಗಿದೆ. ಇದು ವಾಯುಸೇನೆಯ ಆಕ್ರಮಣವೂ ಇರಬಹುದು. ಭಾರತದಲ್ಲಿ ಶಾಂಘೈ ಸಹಕಾರ ಮಂಡಳಿಯ ನಡೆಯಲಿದ್ದು ಮತ್ತು ಜಿ 20 ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ಭಾರತ ಹೊಂದಿದೆ. ಇದರಿಂದ `ಅದು ಇಂತಹ ಹೆಜ್ಜೆಯನ್ನು ಇಡಲು ಸಾಧ್ಯವಿದೆಯೇ?’, ಎಂದೂ ನನಗೆ ಅನಿಸುತ್ತದೆ. ಹಾಗೆಯೇ ಮುಂದಿನ ವರ್ಷ ಅಲ್ಲಿ ಚುನಾವಣೆಯಿದೆ ಮತ್ತು ಇದರಿಂದ ಯಾವುದೇ ದಾಳಿಯ ಅಪಾಯ ಹೆಚ್ಚಾಗಿದೆ. ಸಾರ್ವತ್ರಿಕ ಚುನಾವಣೆಯ ಮೊದಲು ಪಾಕಿಸ್ತಾನದ ಮೇಲೆ ಒಂದು ದಾಳಿ ಆಗಬಹುದು ಎಂದು ಪಾಕಿಸ್ತಾನದ ಭಾರತದಲ್ಲಿನ ಮಾಜಿ ರಾಯಭಾರಿ ಅಬ್ದುಲ ಬಾಸಿತ ಇವರು ಭಯವನ್ನು ವ್ಯಕ್ತಪಡಿಸಿದ್ದಾರೆ. ಎಪ್ರಿಲ್ 20 ರಂದು ಕಾಶ್ಮೀರದ ಪುಂಛನಲ್ಲಿ ಭಯೋತ್ಪಾದಕರು ಸೈನ್ಯದ ಟ್ರಕ್ ಮೇಲೆ ನಡೆಸಿದ ದಾಳಿಯಲ್ಲಿ 5 ಸೈನಿಕರು ವೀರಮರಣವನ್ನು ಹೊಂದಿರುವ ಹಿನ್ನೆಲೆಯಲ್ಲಿ ಬಾಸಿತ ಈ ಹೇಳಿಕೆ ನೀಡಿದ್ದಾರೆ. ಬಾಸಿತ ತಮ್ಮ ಯು-ಟ್ಯೂಬ ಚಾನಲ್ ಮೇಲೆ ಒಂದು ವಿಡಿಯೋ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ಈ ಭಯವನ್ನು ವ್ಯಕ್ತಪಡಿಸಿದ್ದಾರೆ.
#WATCH via ANI Multimedia | “Pakistan fears another surgical strike by India…” Former Pak diplomat after Poonch terror attackhttps://t.co/agjlCMiAKI
— ANI (@ANI) April 26, 2023
ಪುಂಛನ ದಾಳಿಯ ವಿಷಯದಲ್ಲಿ ಬಾಸಿತ್ ಇವರು, ಯಾರು ಪುಂಛನಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದ್ದಾರೆಯೋ, ಅವರು ಕೇವಲ ಸೈನ್ಯವನ್ನು ಗುರಿ ಮಾಡಿದ್ದಾರೆ, ಯಾವುದೇ ನಾಗರಿಕರನ್ನು ಗುರಿ ಮಾಡಿಲ್ಲ. ಅವರು ಮುಜಾಹಿದೀನ (ಹೋರಾಟಗಾರರು) ಇರಬಹುದು, ಅವರು ತಮ್ಮ ಅಧಿಕಾರಕ್ಕಾಗಿ ಹೋರಾಡುತ್ತಿದ್ದಾರೆ. ಯಾವಾಗ ಯಾವುದಾದರೂ ಆಂದೋಲನ ನಡೆಯುತ್ತದೆಯೋ, ಆಗ ಸೈನ್ಯವನ್ನು ಗುರಿ ಮಾಡಲಾಗುತ್ತದೆ. (ಕಾಶ್ಮೀರದಲ್ಲಿ ಭಯೋತ್ಪಾದಕರು ಆಂದೋಲನಕ್ಕೆ ಕರೆ ನೀಡಿರದೇ ಅವರು ಜಿಹಾದಿಗಳಾಗಿದ್ದರು. ಇಂತಹ ಮರಳುಗೊಳಿಸುವ ಶಬ್ದಗಳಲ್ಲಿ ಬಾಸಿತರು ಭಯೋತ್ಪಾದಕರ ಪರವಹಿಸಿಕೊಂಡು ಮಾತನಾಡುತ್ತಿದ್ದಾರೆ ! – ಸಂಪಾದಕರು) ಸಾಮಾನ್ಯ ನಾಗರಿಕರನ್ನಲ್ಲ, ಭಾರತಕ್ಕೆ ಸಧ್ಯಕ್ಕೆ ಅದು ಎಲ್ಲಿ ನಿಂತಿದೆಯೆಂದು ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತವು ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಂತಹ ಕಾರ್ಯಾಚರಣೆಯನ್ನು ಮಾಡುವುದರ ಬದಲು ಅದನ್ನು ಅಂತ್ಯಗೊಳಿಸುವ ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ ! |