ಮುಂಬರುವ ೩ ವರ್ಷಗಳಲ್ಲಿ ಭಾರತದ ರಸ್ತೆಗಳು ಅಮೆರಿಕದ ರಸ್ತೆಗಳಂತೆ ಆಗಲಿವೆ ! – ಕೇಂದ್ರ ಸಚಿವ ನಿತಿನ ಗಡಕರಿ

ಮುಂಬರುವ ೩ ವರ್ಷಗಳಲ್ಲಿ ಭಾರತದಲ್ಲಿ ಅಮೆರಿಕದ ರಸ್ತೆಗಳ ಗುಣಮಟ್ಟವಿರುವ ರಸ್ತೆಗಳು ಕಾಣಲು ಸಿಗಲಿವೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ ಗಡಕರಿ ಅವರು ಹೇಳಿದರು. ಅವರು ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಪುಣೆಯಲ್ಲಿ ರೈಲ್ವೆಯ ಅಕ್ರಮ ಟಿಕೆಟ್ ಮಾರಾಟಕ್ಕಾಗಿ ಉಪಯೋಗಿಸಲಾಗುತ್ತಿರುವ ವ್ಯವಸ್ಥೆಯ ಮೂಲ ಪಾಕಿಸ್ತಾನದಲ್ಲಿ !

ರೈಲ್ವೆಯ ಕಾನೂನುಬಾಹಿರ ಟಿಕೆಟ್ ಮಾರಾಟಕ್ಕಗಿ ಉಪಯೋಗಿಸುವ ವ್ಯವಸ್ಥೆಯ ಮೂಲ ಪಾಕಿಸ್ತಾನದಲ್ಲಿ ಇರುವುದಾಗಿ ರೈಲ್ವೆ ಭದ್ರತಾ ಪಡೆ ತಿಳಿಸಿದೆ. ಈ ರೀತಿ ಕಾನೂನುಬಾಹಿರವಾಗಿ ಟಿಕೆಟ್‌ಗಳ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದೂ ಕೂಡಾ ಅವರು ತಿಳಿಸಿದ್ದಾರೆ.

ಚಲನಚಿತ್ರಗಳಲ್ಲಿ ಕರ್ನಲ್‌ ಆಗಿರುವ ನಾಯಕಿಯ ತಂದೆಯನ್ನು ಯಾವಾಗಲೂ ಕೆಟ್ಟವರಾಗಿಯೇ ಏಕೆ ತೋರಿಸಲಾಗುತ್ತದೆ? – ಸೈನ್ಯದಳ ಪ್ರಮುಖ ನರವಣೆಯವರ ಪ್ರಶ್ನೆ

ಚಲನಚಿತ್ರಗಳಲ್ಲಿ ಭಾರತೀಯ ಸೈನ್ಯಾಧಿಕಾರಿಗಳನ್ನು ತಪ್ಪಾದ ರೀತಿಯಲ್ಲಿ ತೋರಿಸಿರುವುದನ್ನು ನಾನು ಯಾವಾಗಲೂ ನೋಡಿದ್ದೇನೆ. ಆ ಚಲನಚಿತ್ರಗಳಲ್ಲಿ ಸುಂದರವಾಗಿರುವ ನಟಿಯ ಕರ್ನಲ್‌ ತಂದೆಯನ್ನು ಯಾವಾಗಲು ಕೆಟ್ಟವರಾಗಿ ತೋರಿಸಲಾಗುತ್ತದೆ. ಅವರ ಒಂದು ಕೈಯಲ್ಲಿ ಬಂದೂಕು ಹಾಗೂ ಮತ್ತೊಂದು ಕೈಯಲ್ಲಿ ವಿಸ್ಕಿಯ ಬಾಟಲಿಯನ್ನು ಹಿಡಿದುಕೊಂಡಿರುವಂತೆ ತೋರಿಸಲಾಗುತ್ತದೆ.

ಪಾಕಿಸ್ತಾನದ ಶ್ರೀ ಗಣಪತಿ ದೇವಸ್ಥಾನವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೫೦ ಜನರ ಬಂಧನ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭೋಂಗ ನಗರದ ಶ್ರೀ ಗಣಪತಿ ದೇವಸ್ಥಾನವನ್ನು ಮತಾಂಧರು ಧ್ವಂಸಗೊಳಿಸಿದ್ದರು. ಪ್ರಕರಣದಲ್ಲಿ ಮುಖ್ಯ ಸೂತ್ರಧಾರ ಸೇರಿದಂತೆ ೫೦ ಜನರನ್ನು ಬಂಧಿಸಲಾಗಿದೆ. ಒಟ್ಟು ೧೫೦ ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಜಮ್ಮು-ಕಾಶ್ಮೀರದ ೧೪ ಜಿಲ್ಲೆಗಳಲ್ಲಿ ಪಾಕ್‌ ಪ್ರೇಮಿ ಜಮಾತ್‌-ಎ-ಇಸ್ಲಾಮೀಯ ೪೫ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿ

ರಾಷ್ಟ್ರೀಯ ತನಿಖಾ ದಳ, ಜಮ್ಮೂ-ಕಾಶ್ಮೀರದ ಪೊಲೀಸ್‌ ಹಾಗೂ ಕೇಂದ್ರೀಯ ಮೀಸಲು ಪಡೆಯ ಪೊಲೀಸ ದಳವು ಸೇರಿ ರಾಜ್ಯದ ೧೪ ಜಿಲ್ಲೆಗಳಲ್ಲಿ ಪಾಕ್‌ಪ್ರೇಮಿ ಜಮಾತ್‌-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಪಟ್ಟ ೪೫ ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಟೋಕಿಯೊ ಒಲಿಂಪಿಕ್ಸ್‌ : ಜಾವೆಲಿನ್ ಥ್ರೋದಲ್ಲಿ ನೀರಜ್ ಚೋಪ್ರಾಗೆ ಚಿನ್ನದ ಪದಕ

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತೀಯ ಕ್ರೀಡಾಪಟು, ೨೩ ವರ್ಷದ ನೀರಜ್ ಚೋಪ್ರಾ ಈ ಸಾಧನೆಯ ಸರದಾರ.

ತಾಲಿಬಾನವು ಗುರುದ್ವಾರದಲ್ಲಿನ ತೆಗೆದು ಹಾಕಿದ್ದ ಧ್ವಜವನ್ನು ಮತ್ತೆ ಹಾಕಿದರು !

ಅಫ್ಘನಿಸ್ತಾನದ ಪಕತಿಯಾ ಪ್ರದೇಶದ ಥಾಲ್ ಸಾಹಿಬ್ ಗುರುದ್ವಾರದಲ್ಲಿ ಹಾಕಲಾಗಿದ್ದ ಪವಿತ್ರ ಧ್ವಜವನ್ನು ತಾಲಿಬಾನಿಗಳು ತೆಗೆದಿದ್ದರು; ಆದರೆ ಅಂತರರಾಷ್ಟ್ರೀಯ ಒತ್ತಡದಿಂದಾಗಿ ತಾಲಿಬಾನವು ಅದನ್ನು ಮತ್ತೆ ಹಾಕಿದೆ. ಭಾರತವೂ ಕೂಡಾ ಧ್ವಜವನ್ನು ತೆಗೆದಿರುವ ಬಗ್ಗೆ ತೀರ್ವವಾಗಿ ಖಂಡಿಸಿತ್ತು.

ರಾಜ ಕುಂದ್ರಾ ಇವರ ಅಶ್ಲೀಲ (ಪಾರ್ನ್) ಚಿತ್ರ ನಿರ್ಮಿತಿಯ ಪ್ರಕರಣದಲ್ಲಿ ಗೋವಾದಲ್ಲಿನ ೩ ‘ಮೊಡೆಲ್ಸ್’ಗಳ (ರೂಪದರ್ಶಿಗಳ) ಸಹಭಾಗ

ರಾಜ ಕುಂದ್ರಾ ಇವರ ಅಶ್ಲೀಲ ಚಿತ್ರನಿರ್ಮಾಣದ ಪ್ರಕರಣದಲ್ಲಿ ಗೋವಾದ ೩ ಮೊಡೆಲ್ಸ್’ಗಳು(ರೂಪದರ್ಶಿಗಳು) ಸಹಭಾಗಿ ಆಗಿರುವ ಬಗ್ಗೆ ಮಾಹಿತಿಯು ಲಭ್ಯವಾಗಿದೆ. ಪೊಲೀಸರು ಅವರ ಹೆಸರುಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದರೂ, ಅವರಲ್ಲಿ ಮೊದಲನೆಯ ‘ಮೊಡೆಲ್’ ಫೋಂಡಾ, ಎರಡನೆಯವಳು ಮಡಗಾವ್ ಮತ್ತು ಮೂರನೆಯವಳು ಪರ್ವರಿ ಯವರಾಗಿದ್ದಾರೆಂದು ಪೋಲಿಸರು ಹೇಳಿದ್ದಾರೆ.

ಈ ಸಲದ ಶ್ರೀ ಕೃಷ್ಣಜನ್ಮಾಷ್ಟಮಿಯ ನಿಮಿತ್ತ್ತ ವಿಶ್ವ ಹಿಂದೂ ಪರಿಷತ್ತಿನಿಂದ ದೇಶಾದ್ಯಂತ ಕಾರ್ಯಕ್ರಮದ ಆಯೋಜನೆ

ಈ ವರ್ಷ ವಿಶ್ವ ಹಿಂದೂ ಪರಿಷತ್ತು ಶ್ರೀಕೃಷ್ಣಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮದ ಯೋಜನೆ ಮಾಡಲಿದೆ. ಈ ಬಗ್ಗೆ ಯೋಜನೆಯನ್ನು ಮಾಡಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು, ಶ್ರೀ ಕೃಷ್ಣಜನ್ಮಾಷ್ಟಮಿಯು ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನವಾಗಿದೆ.

ಜಯಪುರದಲ್ಲಿ ಕಿವಿಯಲ್ಲಿಟ್ಟ ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡು ಯುವಕನ ಸಾವು

ಇಲ್ಲಿಯ ರಾಕೇಶ ನಾಗರ ಎಂಬ ೨೮ ವರ್ಷದ ಯುವಕನು ಹಾಡನ್ನು ಕೇಳುತ್ತಿರುವಾಗ ಬ್ಲೂಟೂತ ಇಯರ್ ಫೋನಿನ ಎರಡೂ ಇಯರ್‌ಬಡ್ಸ್ ನಡುವೆ ಸ್ಫೋಟವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯು ಚೋಮು ಎಂಬ ಪ್ರದೇಶದ ಉದಯಪೂರಿಯಾ ಊರಿನಲ್ಲಿ ನಡೆದಿದೆ.