ಜಮ್ಮು-ಕಾಶ್ಮೀರದ ೧೪ ಜಿಲ್ಲೆಗಳಲ್ಲಿ ಪಾಕ್‌ ಪ್ರೇಮಿ ಜಮಾತ್‌-ಎ-ಇಸ್ಲಾಮೀಯ ೪೫ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿ

ಶ್ರೀನಗರ (ಜಮ್ಮು-ಕಾಶ್ಮೀರ) – ರಾಷ್ಟ್ರೀಯ ತನಿಖಾ ದಳ, ಜಮ್ಮೂ-ಕಾಶ್ಮೀರದ ಪೊಲೀಸ್‌ ಹಾಗೂ ಕೇಂದ್ರೀಯ ಮೀಸಲು ಪಡೆಯ ಪೊಲೀಸ ದಳವು ಸೇರಿ ರಾಜ್ಯದ ೧೪ ಜಿಲ್ಲೆಗಳಲ್ಲಿ ಪಾಕ್‌ಪ್ರೇಮಿ ಜಮಾತ್‌-ಎ-ಇಸ್ಲಾಮಿ ಸಂಘಟನೆಗೆ ಸಂಬಂಧಪಟ್ಟ ೪೫ ಸ್ಥಳಗಳ ಮೇಲೆ ದಾಳಿ ನಡೆಸಿದೆ. ದೋಡಾ, ಕಿಶ್ತವಾಡ, ರಾಮಬನ್‌, ಅನಂತನಾಗ್‌, ಬಡಗಾಮ್‌, ರಾಜೌರೀ, ಶೋಪಿಯಾ ಇತ್ಯಾದಿ ಸ್ಥಳಗಳಲ್ಲಿ ಈ ರೀತಿಯ ದಾಳಿ ನಡೆಸಲಾಯಿತು.

ಜಮಾತ್‌-ಎ- ಇಸ್ಲಾಮಿ ಸಂಘಟನೆಯಿಂದ ಪಾಕ್‌ಅನ್ನು ಸಮರ್ಥಿಸಲಾಗುತ್ತದೆ, ಅದೇ ರೀತಿ ಪ್ರತ್ಯೇಕತಾವಾದದ ಕಿಡಿಯನ್ನು ಹಚ್ಚಲಾಗುತ್ತದೆ. ಆದ್ದರಿಂದ ೨೦೧೯ರಲ್ಲಿ ಕೇಂದ್ರ ಸರಕಾರವಯ ಅದರ ಮೇಲೆ ನಿರ್ಬಂಧ ಹೇರಿತ್ತು. ನಿರ್ಬಂಧ ಹೇರಿದ್ದರೂ ಕೂಡ ಈ ಸಂಘಟನೆಯು ಜಮ್ಮು-ಕಾಶ್ಮೀರದಲ್ಲಿ ಸಕ್ರಿಯವಾಗಿದೆ. (ನಿರ್ಬಂಧ ಹೇರಿದ್ದರೂ ಕೂಡ ಈ ಸಂಘಟನೆ ಹೇಗೆ ಸಕ್ರಿಯವಾಗಿದೆ? ಇದು ಸುರಕ್ಷಾ ದಳಗಳ ವೈಫಲ್ಯವಲ್ಲವೇ ! – ಸಂಪಾದಕರು)