ಮುಂಬರುವ ೩ ವರ್ಷಗಳಲ್ಲಿ ಭಾರತದ ರಸ್ತೆಗಳು ಅಮೆರಿಕದ ರಸ್ತೆಗಳಂತೆ ಆಗಲಿವೆ ! – ಕೇಂದ್ರ ಸಚಿವ ನಿತಿನ ಗಡಕರಿ

ಕರ್ಣಾವತಿ (ಗುಜರಾತ) – ಮುಂಬರುವ ೩ ವರ್ಷಗಳಲ್ಲಿ ಭಾರತದಲ್ಲಿ ಅಮೆರಿಕದ ರಸ್ತೆಗಳ ಗುಣಮಟ್ಟವಿರುವ ರಸ್ತೆಗಳು ಕಾಣಲು ಸಿಗಲಿವೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ ಗಡಕರಿ ಅವರು ಹೇಳಿದರು. ಅವರು ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಬನಾಸಕಾಂಠಾ ಜಿಲ್ಲೆಯ ದಿಸಾ ನಗರದಲ್ಲಿ ೩.೭೫ ಕಿ.ಮೀ. ಉದ್ದದ ನಾಲ್ಕು ಪಥದ ಮೇಲ್ಸೇತುವೆಯನ್ನು ಆನ್‌ಲೈನ್ ಮುಖಾಂತರ ಗಡಕರಿಯವರು ಉದ್ಘಾಟಿಸಿದರು. ದೇಶದಾದ್ಯಂತ ರಸ್ತೆ ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ. ಪ್ರಸ್ತುತ, ಭಾರತದಲ್ಲಿ ಪ್ರತಿದಿನ ೩೮ ಕಿ.ಮೀ. ರಸ್ತೆ ನಿರ್ಮಾಣವಾಗುತ್ತಿದೆ. ಈ ಮೊದಲು ರಸ್ತೆ ನಿರ್ಮಾಣದ ವೇಗ ಪ್ರತಿದಿನ ೨ ಕಿ.ಮೀ ಇತ್ತು.