ಟೋಕಿಯೊ (ಜಪಾನ್) – ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಕ್ರೀಡಾಪಟು ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತೀಯ ಕ್ರೀಡಾಪಟು, ೨೩ ವರ್ಷದ ನೀರಜ್ ಚೋಪ್ರಾ ಈ ಸಾಧನೆಯ ಸರದಾರ. ನೀರಜ್ ಚೋಪ್ರಾ ಇವರು ಭಾರತೀಯ ಸೇನೆಯಲ್ಲಿ ನಾಯಬ್ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೨೦೦೮ ಬೀಜಿಂಗ್ ಒಲಿಂಪಿಕ್ಸ್ ನಂತರ ಮೊದಲ ಬಾರಿಗೆ ಭಾರತವು ಒಂದು ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದಿದೆ. ಈ ಚಿನ್ನದ ಪದಕದೊಂದಿಗೆ, ಭಾರತವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವಿವಿಧ ಕ್ರೀಡೆಗಳಲ್ಲಿ ಒಟ್ಟು ಏಳು ಪದಕಗಳನ್ನು ಗೆದ್ದಿದೆ.
ವಿಡಿಯೋ ಸೌಜನ್ಯ : ಯು-ಟ್ಯೂಬ್ – ಸೋನಿ ಸ್ಪೋರ್ಟ್ಸ್ ಇಂಡಿಯಾ