ಪುಣೆಯಲ್ಲಿ ರೈಲ್ವೆಯ ಅಕ್ರಮ ಟಿಕೆಟ್ ಮಾರಾಟಕ್ಕಾಗಿ ಉಪಯೋಗಿಸಲಾಗುತ್ತಿರುವ ವ್ಯವಸ್ಥೆಯ ಮೂಲ ಪಾಕಿಸ್ತಾನದಲ್ಲಿ !

ಅಕ್ರಮ ಟಿಕೆಟುಗಳನ್ನು ಮಾರಾಟ ಮಾಡುವವರ ಮೇಲೆ ನಿಗಾ ವಹಿಸುತ್ತಿದ್ದೇವೆ – ರೈಲ್ವೆ ಭದ್ರತಾ ಪಡೆ

ಪುಣೆ – ರೈಲ್ವೆಯ ಕಾನೂನುಬಾಹಿರ ಟಿಕೆಟ್ ಮಾರಾಟಕ್ಕಗಿ ಉಪಯೋಗಿಸುವ ವ್ಯವಸ್ಥೆಯ ಮೂಲ ಪಾಕಿಸ್ತಾನದಲ್ಲಿ ಇರುವುದಾಗಿ ರೈಲ್ವೆ ಭದ್ರತಾ ಪಡೆ ತಿಳಿಸಿದೆ. ಈ ರೀತಿ ಕಾನೂನುಬಾಹಿರವಾಗಿ ಟಿಕೆಟ್‌ಗಳ ಮಾರಾಟ ಮಾಡುವವರ ಮೇಲೆ ನಿಗಾ ವಹಿಸಲಾಗಿದೆ ಎಂದೂ ಕೂಡಾ ಅವರು ತಿಳಿಸಿದ್ದಾರೆ. ಮುಂಬಯಿ, ಪುಣೆ, ಮತ್ತು ಬಿಹಾರ್ ನ ರೈಲ್ವೆ ಟಿಕೆಟ್ ಕಾಯ್ದರಿಸುವಿಕೆಯಲ್ಲಿ ಕಾನೂನುಬಾಹಿರವಾಗಿ ಒಂದೇ ಸಂಪರ್ಕ ಸಂಖ್ಯೆಯಲ್ಲಿ ಅನೇಕ ಜನರ ಟಿಕೆಟ್ ಕಾಯ್ದರಿಸಲಾಗುತ್ತಿರುವುದು ಈ ದಳದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ ನಂತರ ಈ ರೀತಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಟಿಕೆಟ್ ಕಾಯ್ದರಿಸುವಿಕೆ ಮಾಡುವವರಲ್ಲಿ ಹೆಚ್ಚಿನ ದಲ್ಲಾಳಿಗಳು ವಿದೇಶಿಯರು ಆಗಿದ್ದಾರೆ ಎಂದು ದಳದ ಪುಣೆ ವಿಭಾಗದ ಸುರಕ್ಷ ಆಯುಕ್ತ ಉದಯಸಿಂಹ ಪವಾರ್ ಇವರು ಪ್ರಸಾರ ಮಾಧ್ಯಮಗಳಿಗೆ ತಿಳಿಸಿದರು. ಈ ದಲ್ಲಾಳಿಗಳು ಮುಂಬಯಿ, ಪುಣೆ ಮತ್ತು ಬಿಹಾರ್ ಈ ಸ್ಥಳಗಳ ರೈಲ್ವೆ ಟಿಕೆಟ್‌ಗಳನ್ನು ಬೃಹತ್ ಪ್ರಮಾಣದಲ್ಲಿ ಕಾಯ್ದರಿಸುತ್ತಾರೆ. ಈ ದಲ್ಲಾಳಿಗಳ ಕಾರ್ಯ ವೈಖರಿ ಮತ್ತು ಪ್ರಣಾಲಿಕೆಯನ್ನು ಆಗಾಗ್ಗೇ ಬದಲಿಸುತ್ತಾರೆ. ಆದ್ದರಿಂದ ನಾವು ಸಹ ನೂತನ ಪ್ರಣಾಲಿಕೆಯನ್ನು ಉಪಯೋಗಿಸಿ ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ ಎಂದು ಪವಾರ್ ಇವರು ಹೇಳಿದರು.