ತಮ್ಮ ಮೇಲಿನ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟ ಕಾರಣದಿಂದ ಯಾರನ್ನೂ ನೌಕರಿಯಿಂದ ತೆಗೆಯಲು ಸಾಧ್ಯವಿಲ್ಲ !- ಸರ್ವೋಚ್ಚ ನ್ಯಾಯಾಲಯ

ತಮ್ಮ ಮೇಲಿನ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟ ಕಾರಣದಿಂದ ಯಾರನ್ನೂ ಹಿಂದೆಮುಂದೆ ಯೋಚಿಸದೇ ನೌಕರಿಯಿಂದ ತೆಗೆದು ಹಾಕುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಖಂಡಪೀಠವು ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಪಡಿಸಿದೆ.

ಮುಸಲ್ಮಾನ ಪುರುಷರಿಗೆ ಬಹುಪತ್ನಿತ್ವದ ಅನುಮತಿ ನೀಡಬಾರದು !- ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಮುಸಲ್ಮಾನ ಪುರುಷರಿಗೆ ಅವರ ಮೊದಲ ಪತ್ನಿಯ ಅನುಮತಿಯಿಲ್ಲದೇ ಎರಡನೇ ಅಥವಾ ಬಹುವಿವಾಹ ಮಾಡಿಕೊಳ್ಳಲು ಅನುಮತಿಯನ್ನು ನೀಡಬಾರದು ಎಂದು ಕೋರಿ, ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಚ್ಚ ನ್ಯಾಯಾಲಯದಲ್ಲಿ ರೇಶ್ಮಾ ಹೆಸರಿನ 28 ವರ್ಷದ ಮುಸಲ್ಮಾನ ಮಹಿಳೆಯು ದಾಖಲಿಸಿದ್ದಾಳೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೇಡಿಕೆ ಕಡಿಮೆಯಾಗಿರುವುದರಿಂದ ಭಾರತದಲ್ಲಿ ತೈಲ ಅಗ್ಗ !

ಅಂತಾರಾಷ್ಟ್ರೀಯ ಮಾರುಕಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆ ಕುಸಿತವಾಗಿರುವುದರ ಪರಿಣಾಮವಾಗಿ ದೇಶದಲ್ಲಿ ಖಾದ್ಯ ತೈಲದ ಬೆಲೆಯಲ್ಲಿ ಸ್ವಲ್ಪ ಇಳಿತವಾಗಿದೆ. ಸಾಸಿವೆ, ಸೊಯಾಬೀನ, ಎಳ್ಳು ಹಾಗೂ ಪಾಮ ಎಣ್ಣೆಯ ಬೆಲೆಯು ಅಗ್ಗವಾಗಿದೆ.

ಬಲವಾದ ಸಾಕ್ಷಿ ಇಲ್ಲದಿದ್ದರೆ ಸಂಬಂಧಪಟ್ಟ ಸ್ಥಳ ನಮಾಜ್‌ಗಾಗಿ ‘ಧಾರ್ಮಿಕ ಸ್ಥಳ’ವೆಂದು ಮಾನ್ಯತೆ ನೀಡಲಾಗುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯ

ಹಳೆ ಗೋಡೆ ಅಥವಾ ಕಂಬಗಳು ಈ ಸ್ಥಳಗಳಲ್ಲಿ ಮೊದಲಿನಿಂದಲೂ ಧಾರ್ಮಿಕ ಕೃತಿಗಳು ನಡೆಯುತ್ತಿರುವ ಸಾಕ್ಷಿ ಇಲ್ಲದಿದ್ದರೆ ಮತ್ತು ಅದರ ಉಪಯೋಗ ಪ್ರಸ್ತುತ ಆಗದೆ ಇದ್ದರೆ, ಆಗ ಈ ಸ್ಥಳ ನಮಾಜ್‌ಗಾಗಿ ‘ಧಾರ್ಮಿಕ ಸ್ಥಳ’ವೆಂದು ಮಾನ್ಯತೆ ನೀಡಲಾಗುವುದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ‘ರಾಜಸ್ಥಾನ ವಕ್ಫ್ ಬೋರ್ಡ್’ನ ಅರ್ಜಿಯ ಕುರಿತು ತೀರ್ಪು ನೀಡುತ್ತಾ ಈ ಅರ್ಜಿಯನ್ನು ತಿರಸ್ಕರಿಸಿತು.

೨೦೨೧ರಲ್ಲಿ ಜಗತ್ತಿನಾದ್ಯಂತ ೨ ಲಕ್ಷ ೫೩ ಸಾವಿರ ಚದರ ಕಿಲೋಮೀಟರ್ ನಷ್ಟು ಕಾಡು ನಾಶ !

ಜಗತ್ತಿನಾದ್ಯಂತ ೨೦೨೧ ರಲ್ಲಿ ಪ್ರತಿ ನಿಮಿಷಕ್ಕೆ ೧೦ ಫುಟ್ಬಾಲ್ ಮೈದಾನದಷ್ಟು ಕಾಡು ನಾಶವಾಗಿದೆ. ಅದರ ಕ್ಷೇತ್ರಫಲ ೨ ಲಕ್ಷ ೫೩ ಸಾವಿರ ಚದರ ಕಿಲೋಮೀಟರ್ ನಷ್ಟು ಅಂದರೆ ಉತ್ತರಪ್ರದೇಶ ರಾಜ್ಯದಷ್ಟು. ಯೂನಿವರ್ಸಿಟಿ ಆಫ್ ಮೇರಿಲ್ಯಾಂಡಿನ ಕಾಡಿನ ವಿಷಯದಲ್ಲಿ ವರ್ಲ್ಡ್ ರಿಸೋರ್ಸ್ಸ ಇನ್ಸ್ಟಿಟ್ಯೂಟ್ ಗ್ಲೋಬಲ್ ಫೋರೆಸ್ಟ್ ವಾಚ್ ನಲ್ಲಿ ಈ ಮಾಹಿತಿ ನೀಡಲಾಗಿದೆ.

ಜಗತ್ತು ಭಾರತದ ವಿಚಾರ ಪ್ರಕ್ರಿಯೆ ತಿಳಿದುಕೊಳ್ಳುವುದಕ್ಕಾಗಿ ಮಹಾಭಾರತದ ಅಧ್ಯಯನ ಮಾಡಬೇಕು ! – ಡಾ. ಎಸ್. ಜಯಶಂಕರ್, ವಿದೇಶಾಂಗ ಸಚಿವರು

ಭಾರತಕ್ಕೆ ಅದರದೇ ಆದ ರಣನೀತಿ ಏನು ಇರಬೇಕು ಮತ್ತು ತನಗೆ ಯಾವ ಧ್ಯೇಯ ಇರಬೇಕು, ಇದನ್ನು ತಿಳಿದುಕೊಳ್ಳುವುದಕ್ಕಾಗಿ, ಹಾಗೂ ಜಗತ್ತು ಭಾರತದ ವಿಚಾರ ಪ್ರಕ್ರಿಯೆ ತಿಳಿದುಕೊಳ್ಳುವುದಕ್ಕಾಗಿ ಮಹಾಭಾರತದ ಅಧ್ಯಯನ ಮಾಡುವುದು ಆವಶ್ಯಕವಾಗಿದೆ, ಎಂದು ಕೇಂದ್ರದ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ಇವರು ಪ್ರತಿಪಾದಿಸಿದರು.

ಅಲ್ಪಾವಧಿಯ; ಆದರೆ ವೇಗದ ಯುದ್ಧಕ್ಕಾಗಿ ಸಿದ್ಧರಾಗಿರುವುದರ ಆವಶ್ಯಕತೆ ಇದೆ! – ಭಾರತೀಯ ವಾಯುಪಡೆಯ ಮುಖ್ಯಸ್ಥ ವಿ.ಆರ.ಚೌಧರಿ

ಸಧ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಾಯುಪಡೆಗೆ ಸಿಕ್ಕಿರುವ ಸೂಚನೆಯ ನಂತರ ಅಲ್ಪಾವಧಿಯ; ಆದರೆ ವೇಗದ ಯುದ್ಧಕ್ಕಾಗಿ ಸಿದ್ಧರಾಗಿರುವುದರ ಆವಶ್ಯಕತೆ ಇದೆ, ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ ಚೀಫ ಮಾರ್ಶಲ ವಿ.ಆರ. ಚೌಧರಿಯವರು ಒಂದು ಸಮ್ಮೆಳನದಲ್ಲಿ ಹೇಳಿದರು.

ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳು ಪಲಾಯನಗೈದರು.- ಕೇಂದ್ರ ಸರಕಾರ

ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಅನ್ಯ ಸ್ಥಳಗಳಲ್ಲಿ ಪಲಾಯನ ಮಾಡಲು ಅನಿವಾರ್ಯವಾಯಿತು.

ಸಮಾನ ನಾಗರಿಕ ಸಂಹಿತೆ ಸಂವಿಧಾನಕ್ಕೆ ವಿರುದ್ಧ(ವಂತೆ) ! – ಗದ್ದಲವೆಬ್ಬಿಸಿದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ !

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಮಾನ ನಾಗರಿಕ ಸಂಹಿತೆಯು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಹೇಳುತ್ತ ಅದನ್ನು ವಿರೋಧಿಸಿದೆ. ಉತ್ತರಾಖಂಡ ಸರಕಾರವು ಸಮಾನ ನಾಗರಿಕ ಸಂಹಿತೆಯ ಕರಡು ತಯಾರಿಸಲು ಸಮಿತಿಯನ್ನು ರಚಿಸಿದೆ.

ದೆಹಲಿಯ ೪೦ ಹಳ್ಳಿಗಳ ಇಸ್ಲಾಮಿ ಹೆಸರುಗಳನ್ನು ಬದಲಾಯಿಸುವ ಶಿಫಾರಸ್ಸು ಆಮ್ ಆದ್ಮಿ ಸರಕಾರಕ್ಕೆ ನೀಡುವೆವು – ಭಾಜಪ

ದೆಹಲಿಯ ೪೦ ಹಳ್ಳಿಗಳ ಹೆಸರು ಇಸ್ಲಾಮಿ ಆಗಿದೆ. ಅವನ್ನು ಬದಲಾಯಿಸಲು ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂಬ ಮಾಹಿತಿ ದೆಹಲಿಯ ಭಾಜಪದ ಪ್ರದೇಶಾಧ್ಯಕ್ಷ ಆದೇಶ ಗುಪ್ತಾ ಅವರು ನೀಡಿದರು. ಅವರು ಅಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.