೨೦೨೧ರಲ್ಲಿ ಜಗತ್ತಿನಾದ್ಯಂತ ೨ ಲಕ್ಷ ೫೩ ಸಾವಿರ ಚದರ ಕಿಲೋಮೀಟರ್ ನಷ್ಟು ಕಾಡು ನಾಶ !

ನವದೆಹಲಿ – ಜಗತ್ತಿನಾದ್ಯಂತ ೨೦೨೧ ರಲ್ಲಿ ಪ್ರತಿ ನಿಮಿಷಕ್ಕೆ ೧೦ ಫುಟ್ಬಾಲ್ ಮೈದಾನದಷ್ಟು ಕಾಡು ನಾಶವಾಗಿದೆ. ಅದರ ಕ್ಷೇತ್ರಫಲ ೨ ಲಕ್ಷ ೫೩ ಸಾವಿರ ಚದರ ಕಿಲೋಮೀಟರ್ ನಷ್ಟು ಅಂದರೆ ಉತ್ತರಪ್ರದೇಶ ರಾಜ್ಯದಷ್ಟು. ಯೂನಿವರ್ಸಿಟಿ ಆಫ್ ಮೇರಿಲ್ಯಾಂಡಿನ ಕಾಡಿನ ವಿಷಯದಲ್ಲಿ ವರ್ಲ್ಡ್ ರಿಸೋರ್ಸ್ಸ ಇನ್ಸ್ಟಿಟ್ಯೂಟ್ ಗ್ಲೋಬಲ್ ಫೋರೆಸ್ಟ್ ವಾಚ್ ನಲ್ಲಿ ಈ ಮಾಹಿತಿ ನೀಡಲಾಗಿದೆ.

೧. ಕಳೆದ ವರ್ಷ ೩೮ ಲಕ್ಷ ಹೆಕ್ಟರ್ ವಿಷುವದೀಯ ಕಾಡು ಜಗತ್ತಿನಾದ್ಯಂತ ನಾಶವಾಗಿರುವುದು ಕಂಡಿದ್ದೇವೆ. ಕಾಡು ನಾಶವಾಗುವುದರ ಪ್ರಮಾಣ ೨೦೨೦ ರ ತುಲನೆಯಲ್ಲಿ ಶೇಕಡ ೧೧ರಷ್ಟು ಕಡಿಮೆಯಾಗಿದೆ.

೨. ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಕಾಡು ಬ್ರೆಜಿಲ್ ನಲ್ಲಿ ಇರುವುದು. ಅಲ್ಲಿ ಕಾಡು ನಾಶವಾಗುವ ಪ್ರಮಾಣ ಎಲ್ಲಕ್ಕಿಂತ ಹೆಚ್ಚಾಗಿದೆ. ಒಟ್ಟು ೧೫ ಲಕ್ಷ ಹೆಕ್ಟರ್ ಕಾಡು ಇಲ್ಲಿ ನಾಶವಾಗಿದೆ. ಜಗತ್ತಿನಲ್ಲಿ ನಾಶವಾಗಿರುವ ಒಟ್ಟು ಕಾಡಿನಲ್ಲಿ ಬ್ರೆಜಿಲ್ ಪಾಲು ಶೇಕಡ ೪೦ ರಷ್ಟು ಇದೆ.

೩. ಎರಡನೇ ಸ್ಥಳದಲ್ಲಿ ರಿಪಬ್ಲಿಕ್ ಅಫ್ ಕಾಂಗೋ ದಲ್ಲಿ ಅಳಿವಿನಂಚಿನಲ್ಲಿರುವ ಕಾಡಿನ ತುಲನೆಯಲ್ಲಿ ಇದು ೩ ಪಟ್ಟು ಹೆಚ್ಚಾಗಿದೆ. ಬ್ರೆಜಿಲ್ ನಲ್ಲಿ ಕಾಡಿಗಿಚ್ಚಿನಿಂದ ಅಳಿವಿನಂಚಿನಲ್ಲಿರುವ ವೃಕ್ಷಗಳ ಸಂಖ್ಯೆಯು ಕೂಡಾ ಶೇಕಡ ೯ ರಷ್ಟು ಕಡಿಮೆಯಾಗಿದೆ. ಅಮೆಜಾನ್ ಕಾಡಿನಲ್ಲಿ ಈ ಕೊರತೆ ೨೦೦೬ ರ ನಂತರ ಎಲ್ಲಕ್ಕಿಂತ ಹೆಚ್ಚಾಗಿದೆ. ಇದೇ ರೀತಿಯ ಪರಿಸ್ಥಿತಿ ಜಗತ್ತಿನ ಉತ್ತರದಕಡೆಗೆ ಇರುವ ಕಾಡಿನಲ್ಲಿ ಕಂಡುಬರುತ್ತದೆ, ಆದರೆ ವಿಷುವದೀಯ ಕಾಡಿನ ವಿರುದ್ಧ ಉತ್ತರದ ಕಡೆಗಿರುವ ಕಾಡುಗಳು ಮತ್ತೆ ಹಸಿರಿನಿಂದ ಕಂಗೊಳಿಸುತ್ತಿದ್ದಾವೆ.

೪. ಅಮೆಜಾನ್ ಕಾಡಿನ ಅಸ್ತಿತ್ವಕ್ಕೆ ತೊಂದರೆ ನಿರ್ಮಾಣವಾಗಿದೆ. ವಾತಾವರಣದ ದೃಷ್ಟಿಯಿಂದ ಅಮೆಜಾನ್ ಹೆಚ್ಚಿನ ಗಂಭೀರ ಪರಿಸ್ಥಿತಿಗೆ ಬಂದು ನಿಂತಿದೆ, ಎಂಬ ಎಚ್ಚರಿಕೆ ಸಂಶೋಧಕರು ನೀಡಿದ್ದಾರೆ.

೫. ವಿಷುವದೀಯ ಕಾಡುಗಳು ನಾಶವಾಗಿರುವುದರಿಂದ ಕಾರ್ಬನ್ ಡೈಯಾಕ್ಸೈಡ್ ಉತ್ಸರ್ಜನೆಯಲ್ಲಿ ಶೇಕಡ ೭ ರಷ್ಟು ಹೆಚ್ಚಳವಾಗಿದೆ. ಹೆಚ್ಚಳದ ಈ ಪ್ರಮಾಣ ಭಾರತದ ಒಟ್ಟಾರೆ ಜನಸಂಖ್ಯೆ ಯ ಕಾರ್ಬನ್ ಡೈಯಾಕ್ಸೈಡ್ ಉತ್ಸರ್ಜನೆಯಷ್ಟೇ ಇದೆ. ಕಾಡು ಕ್ಷೇತ್ರದ ವಿಷಯವಾಗಿ ನಡೆಸಿರುವ ಹೊಸ ಅಭ್ಯಾಸದಿಂದ ಈ ವಿಷಯ ಬೆಳಕಿಗೆ ಬಂದಿದೆ.