ನವ ದೆಹಲಿ – ಸಧ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಾಯುಪಡೆಗೆ ಸಿಕ್ಕಿರುವ ಸೂಚನೆಯ ನಂತರ ಅಲ್ಪಾವಧಿಯ; ಆದರೆ ವೇಗದ ಯುದ್ಧಕ್ಕಾಗಿ ಸಿದ್ಧರಾಗಿರುವುದರ ಆವಶ್ಯಕತೆ ಇದೆ, ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ ಚೀಫ ಮಾರ್ಶಲ ವಿ.ಆರ. ಚೌಧರಿಯವರು ಒಂದು ಸಮ್ಮೆಳನದಲ್ಲಿ ಹೇಳಿದರು.
IAF chief stresses on need to prepare for ‘intense & small duration ops at short notice’ https://t.co/8esUYiaZWz
— Republic (@republic) April 28, 2022
‘ಹಾಗೆಯೇ ಅಧಿಕ ಕಾಲ ನಡೆಯುವ ಸಂಘರ್ಷಕ್ಕಾಗಿಯೂ ಸಿದ್ಧರಾಗಿರುವುದರ ಆವಶ್ಯಕತೆ ಇದೆ. ಲದಾಖಿನಲ್ಲಿ ಈ ರೀತಿಯ ಸಂಘರ್ಷವನ್ನು ಎದುರಿಸುತ್ತಿದ್ದೇವೆ ಎಂದು ಕೂಡಾ ಅವರು ಸ್ಪಷ್ಟಪಡಿಸಿದ್ದಾರೆ.