ಬಲವಾದ ಸಾಕ್ಷಿ ಇಲ್ಲದಿದ್ದರೆ ಸಂಬಂಧಪಟ್ಟ ಸ್ಥಳ ನಮಾಜ್‌ಗಾಗಿ ‘ಧಾರ್ಮಿಕ ಸ್ಥಳ’ವೆಂದು ಮಾನ್ಯತೆ ನೀಡಲಾಗುವುದಿಲ್ಲ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಹಳೆ ಗೋಡೆ ಅಥವಾ ಕಂಬಗಳು ಈ ಸ್ಥಳಗಳಲ್ಲಿ ಮೊದಲಿನಿಂದಲೂ ಧಾರ್ಮಿಕ ಕೃತಿಗಳು ನಡೆಯುತ್ತಿರುವ ಸಾಕ್ಷಿ ಇಲ್ಲದಿದ್ದರೆ ಮತ್ತು ಅದರ ಉಪಯೋಗ ಪ್ರಸ್ತುತ ಆಗದೆ ಇದ್ದರೆ, ಆಗ ಈ ಸ್ಥಳ ನಮಾಜ್‌ಗಾಗಿ ‘ಧಾರ್ಮಿಕ ಸ್ಥಳ’ವೆಂದು ಮಾನ್ಯತೆ ನೀಡಲಾಗುವುದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ‘ರಾಜಸ್ಥಾನ ವಕ್ಫ್ ಬೋರ್ಡ್’ನ ಅರ್ಜಿಯ ಕುರಿತು ತೀರ್ಪು ನೀಡುತ್ತಾ ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಈ ಮೊದಲು ರಾಜಸ್ಥಾನ ಉಚ್ಚ ನ್ಯಾಯಾಲಯವು ಇದೇ ರೀತಿಯ ತೀರ್ಪು ನೀಡಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಗಿತ್ತು. ನ್ಯಾಯಾಲಯವು, ಈ ಸಂದರ್ಭದ ಅರ್ಜಿದಾರರು ಬಲವಾದ ಸಾಕ್ಷಿ ಪ್ರಸ್ತುತಪಡಿಸಲಾಗಿಲ್ಲ.

ರಾಜ್ಯದ ಭೀಲವಾಡಾದಲ್ಲಿಯ ಭೂಮಿ ‘ಜಿಂದಾಲ್ ಸಾ ಲಿಮಿಟೆಡ’ ಈ ಕಂಪನಿಗೆ ಗಣಿಗಾರಿಕೆಗೆ ನೀಡಲಾಗಿದೆ. ಇದರ ವಿರುದ್ಧ ‘ವಕ್ಫ್ ಬೋರ್ಡ್’ ಅರ್ಜಿ ದಾಖಲಿಸಿತ್ತು. ಇದರಲ್ಲಿ, ಯಾವ ಭೂಮಿ ಈ ಕಂಪನಿಗೆ ನೀಡಲಾಗಿತ್ತು ಅಲ್ಲಿ ಒಂದು ಹಳೆಯ ಗೋಡೆ ಮತ್ತು ಕಂಬ ಇತ್ತು ಅದಕ್ಕೆ ‘ತಿರಂಗಾ ಕಿ ಕಲಂದರ್ ಮಸ್ಜಿದ್’ ಎನ್ನುತ್ತಿದ್ದರು. ಅಲ್ಲಿ ಮೊದಲಿಂದಲೂ ನಮಾಜ್ ಮಾಡಲಾಗುತ್ತಿತ್ತು. ಆದ್ದರಿಂದ ಈ ಸ್ಥಳ ಸುರಕ್ಷಿತವಾಗಿಸಬೇಕು. ಎಂದು ಹೇಳಿತ್ತು.