Encroached Mosque Demolished: ಫತೇಪುರ (ಉತ್ತರ ಪ್ರದೇಶ) ಆಡಳಿತದಿಂದ 185 ವರ್ಷಗಳ ಹಳೆಯ ಮಸೀದಿಯ ಅತಿಕ್ರಮಣ ನೆಲಸಮ !

ಫತೇಹಪುರ (ಉತ್ತರಪ್ರದೇಶ) – ಇಲ್ಲಿನ 185 ವರ್ಷಗಳಷ್ಟು ಹಳೆಯದಾದ ನೂರಿ ಮಸೀದಿಯ ಅತಿಕ್ರಮಣವನ್ನು ಡಿಸೆಂಬರ್ 10 ರಂದು ಕೆಡವಲಾಯಿತು. ಹೆದ್ದಾರಿ ಅಗಲೀಕರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಈ ವೇಳೆ ಘಟನಾಸ್ಥಳದಲ್ಲಿ ಪೊಲೀಸ್ ಉಪಾಧೀಕ್ಷಕರು ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಕ್ಷಿಪ್ರ ಕಾರ್ಯ ಪಡೆಯನ್ನೂ ನಿಯೋಜಿಸಲಾಗಿತ್ತು.

1. ಈ ಮಸೀದಿಯು 185 ವರ್ಷಗಳಷ್ಟು ಹಳೆಯದಾದರೂ 3 ವರ್ಷಗಳ ಹಿಂದೆ ಮಸೀದಿ ಕಟ್ಟಡದಲ್ಲಿ ಕೆಲವು ನಿರ್ಮಾಣಗಳನ್ನು ಮಾಡಲಾಗಿದೆ. ಅದು ಅನಧಿಕೃತವಾಗಿತ್ತು. ಇದರಿಂದಾಗಿ ರಾಜ್ಯದ ಬಂದಾ-ಬಹರಾಯಿ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದೆ ಎಂದು ಆಡಳಿತ ತಿಳಿಸಿದೆ.

2. ಮಸೀದಿ ಸಮಿತಿಯು ಲೋಕೋಪಯೋಗಿ ಇಲಾಖೆಯಿಂದ ಈ ವರ್ಷದ ಆಗಸ್ಟ್ 17 ರಂದು 1 ತಿಂಗಳೊಳಗೆ ಅತಿಕ್ರಮಣವನ್ನು ಸ್ವತಃ ಕೆಡವಲು ನೋಟಿಸ್ ನೀಡಿತ್ತು. ಆದರೆ ಅದು ಅತಿಕ್ರಮಣವನ್ನು ಕೆಡವಲಿಲ್ಲ.

3. ಬದಲಾಗಿ ಮಸೀದಿ ಸಮಿತಿ ಉಚ್ಚನ್ಯಾಯಾಲಯದ ಮೊರೆ ಹೋಗಿತ್ತು. ಈ ಕುರಿತು ವಿಚಾರಣೆ ನಡೆಯಲಿದೆ; ಆದರೆ ಅದಕ್ಕೂ ಮುನ್ನ ಆಡಳಿತ ತಾನೇ ಕ್ರಮ ಕೈಗೊಂಡು ಒತ್ತುವರಿ ತೆರವು ಮಾಡಿದೆ.

ಸಂಪಾದಕೀಯ ನಿಲುವು

ಅತಿಕ್ರಮಣದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರಕಾರದಿಂದ ಇನ್ನಿತರ ರಾಜ್ಯಗಳ ಆಡಳಿತಗಾರರು ಏನಾದರೂ ಕಲಿಯುವರೇ ?