ಕೇರಳದ ಗುರುವಾಯೂರು ದೇವಸ್ಥಾನದ ಆಡಳಿತ ಮಂಡಳಿಯು ‘ಉದಯಸ್ಥಾನ ಪೂಜೆ’ ಮಾಡದಿರಲು ನಿರ್ಧರಿಸಿದ ಪ್ರಕರಣ
ಗುರುವಾಯೂರು (ಕೇರಳ) – ವೃಶ್ಚಿಕಂ ಏಕಾದಶಿ ಅಂದರೆ ಡಿಸೆಂಬರ್ 11 ರಂದು ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯು ‘ಉದಯಸ್ಥಾನ ಪೂಜೆ’ ಮಾಡದಿರಲು ನಿರ್ಧರಿಸಿದೆ. ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅದರಂತೆ ಸುಪ್ರೀಂ ಕೋರ್ಟ್ ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ‘ಭಕ್ತರಿಗೆ ಅನಾನುಕೂಲ ಆಗುವುದು’ ಎಂಬ ಕಾರಣ ನೀಡಿ ಪೂಜೆ ನಿಲ್ಲಿಸಬಹುದೇ ? ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿದೆ. ನ್ಯಾಯಮೂರ್ತಿ ಮಹೇಶ್ವರಿ ಅವರು, “ಪೂಜೆಯು ದೇವರಿಗಾಗಿ ಇರುತ್ತದೆ. ಇದು ದೇವತೆಯ ಚೈತನ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಜನಸಾಮಾನ್ಯರ ಪ್ರಕಾರ ಮಾಡಲು ಸಾಧ್ಯವಿಲ್ಲ. ಈ ಕಾರಣವು ಎಷ್ಟು ನ್ಯಾಯವಾಗಿದೆ, ನಾವು ಈ ಸೂತ್ರವನ್ನು ಪರಿಶೀಲಿಸಬೇಕು.
1. ನ್ಯಾಯಮೂರ್ತಿ ಜೆ. ಕೆ. ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ರಾಜೇಶ್ ಬಿಂದಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರತಿವಾದಿಗಳಾದ ಗುರುವಾಯೂರು ದೇವಸ್ಥಾನದ ಆಡಳಿತ ಸಮಿತಿ, ತಂತ್ರಿ (ಮುಖ್ಯ ಅರ್ಚಕ) ಮತ್ತು ಕೇರಳ ಸರಕಾರಕ್ಕೆ 4 ವಾರಗಳಲ್ಲಿ ಉತ್ತರಿಸುವಂತೆ ಕೇಳಿದೆ.
2. ನಿಗದಿತ ದೈನಂದಿನ ಆಚರಣೆಗಳಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
3. ಅರ್ಜಿದಾರರ ಪರ ಹಿರಿಯ ವಕೀಲ ಸಿ. ಎಸ್. ವೈದ್ಯನಾಥನ್ ಮಂಡಿಸಿದರು.
4. ಜನಸಂದಣಿ ನಿರ್ವಹಣಾ ತೊಂದರೆಗಳು ಮತ್ತು ಹೆಚ್ಚಿನ ಭಕ್ತರಿಗೆ ದರ್ಶನಕ್ಕೆ ಸಮಯ ನೀಡುವ ಇಚ್ಛೆಯನ್ನು ಉಲ್ಲೇಖಿಸಿ, ದೇವಾಲಯದ ಆಡಳಿತವು ವೃಷಿಕಂ ಏಕಾದಶಿಯಂದು ಉದಯಸ್ಥಾನ ಪೂಜೆಯನ್ನು ತಪ್ಪಿಸಲು ನಿರ್ಧರಿಸಿತ್ತು.
5. ದೇವಾಲಯದ ಪಾರಂಪರಿಕ ಅರ್ಚಕ ಕುಟುಂಬದ ಸದಸ್ಯರಾಗಿರುವ ಅರ್ಜಿದಾರರು ಈ ನಿರ್ಧಾರವನ್ನು ಪ್ರಶ್ನಿಸಿ, ದೇವಾಲಯದ ಆಡಳಿತವು ಪ್ರಾಚೀನ ಪದ್ಧತಿಗಳು ಮತ್ತು ಆಚರಣೆಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿದರು.
6. ಶತಮಾನಗಳಿಂದಲೂ ಉದಯಸ್ಥಾನ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದು, ಇದನ್ನು ಆದಿ ಶಂಕರಾಚಾರ್ಯರು ಆರಂಭಿಸಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯದ ಮುಂದೆ ವಾದಿಸಿದರು. ಹಾಗೆ ಮಾಡದಿದ್ದರೆ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ ಮತ್ತು ಭಕ್ತರ ಶ್ರದ್ಧೆಗೆ ಧಕ್ಕೆಯಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ಸಂಪಾದಕೀಯ ನಿಲುವುದೇವಾಲಯಗಳ ಸರಕಾರೀಕರಣದಿಂದಾಗಿ ದೇವಾಲಯದ ಆಡಳಿತ ಮಂಡಳಿಯು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ದೇವಸ್ಥಾನಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕು ! |