Bangladesh Hindus Attacked : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯ ೮೮ ಘಟನೆಗಳು ಘಟಿಸಿವೆ !

ಕೊನೆಗೂ ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ಸ್ವೀಕೃತಿ

ಢಾಕಾ (ಬಾಂಗ್ಲಾದೇಶ) – ಶೇಖ್ ಹಸೀನಾ ಇವರು ಪದಚ್ಯುತಗೊಂಡ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ವಿಶೇಷವಾಗಿ ಹಿಂದುಗಳ ಮೇಲೆ ೮೮ ದಾಳಿಗಳು ನಡೆದಿರುವ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರಕಾರವು ಒಪ್ಪಿಕೊಂಡಿದೆ. ಭಾರತದ ವಿದೇಶಾಂಗ ಸಚಿವ ವಿಕ್ರಮ ಮಿಸ್ರಿ ಇವರು ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಇವರ ಜೊತೆಗೆ ಸಭೆ ನಡೆಸಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದಾಳಿಯ ಅಂಶಗಳನ್ನು ಉಪಸ್ಥಿತಗೊಳಿಸಿದರು. ಹಾಗೂ ಅವರ ಸುರಕ್ಷೆಯ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಅದರ ನಂತರ ಬಾಂಗ್ಲಾದೇಶ ಸರಕಾರದಿಂದ ಮೇಲಿನ ಸ್ವೀಕೃತಿ ನೀಡಲಾಯಿತು.

ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಇವರ ಪ್ರಸಾರಮಾಧ್ಯಮ ಸಚಿವ ಶಫಿಕುಲ್ ಆಲಮ ಇವರು, ಆಗಸ್ಟ್ ೫ ರಿಂದ ಅಕ್ಟೋಬರ್ ೨೨ ವರೆಗೆ ಅಲ್ಪಸಂಖ್ಯಾತರಿಗೆ ಸಂಬಂಧಿತ ಘಟನೆಯಲ್ಲಿ ಒಟ್ಟು ೮೮ ಪ್ರಕರಣಗಳು ದಾಖಲಾಗಿವೆ, ಈ ಘಟನೆಯ ಸಂದರ್ಭದಲ್ಲಿ ೭೦ ಜನರನ್ನು ಬಂಧಿಸಲಾಗಿದೆ. ಈಶಾನ್ಯ ಸುನಾಮಗಂಜ, ಮಧ್ಯ ಗಾಝೀಪುರ್ ಮತ್ತು ಇತರ ಪ್ರದೇಶದಿಂದ ಕೂಡ ಹಿಂಸಾಚಾರದ ಹೊಸ ಘಟನೆಗಳು ಘಟಿಸಿವೆ, ಆದ್ದರಿಂದ ಪ್ರಕರಣಗಳು ಮತ್ತು ಬಂಧನದ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸಂತ್ರಸ್ತರಲ್ಲಿ ಕೆಲವು ಜನರು ಹಿಂದಿನ ಅಧಿಕಾರದಲ್ಲಿರುವ ಪಕ್ಷದ ಸದಸ್ಯರಾಗಿರುವ ಪ್ರಕರಣಗಳ ಕೂಡ ಇರಬಹುದು. ಅಕ್ಟೋಬರ್ ೨೨ ನಂತರ ಘಟಿಸಿರುವ ಘಟನೆಯ ವರದಿ ಆದಷ್ಟು ಬೇಗನೆ ಪ್ರಸಾರ ಮಾಡಲಾಗುವುದು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕೇವಲ ಸ್ವೀಕೃತಿ ನೀಡಿದರೆ ಸಾಲದು, ಇನ್ನು ಮುಂದೆ ಒಬ್ಬೇ ಒಬ್ಬ ಹಿಂಗೂಗಳ ಮೇಲೆ ದಾಳಿ ನಡೆಯುವುದಿಲ್ಲ, ಈ ರೀತಿ ರಕ್ಷಣೆ ನೀಡಿ ಸಂತ್ರಸ್ತ ಹಿಂದುಗಳಿಗೆ ಪರಿಹಾರ ಕೂಡ ನೀಡಬೇಕು ! ಅದಕ್ಕಾಗಿ ಭಾರತದಿಂದ ಒತ್ತಡ ತರುವುದು ಆವಶ್ಯಕವಾಗಿದೆ !
  • ಅಗಸ್ಟರಿಂದ ಅಕ್ಟೋಬರ್ ೨೦೨೪ ಈ ಸಮಯದಲ್ಲಿ ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ಸಾವಿರಾರು ದಾಳಿಗಳು ನಡೆದಿರುವಾಗ ಇಲ್ಲಿಯ ಸರಕಾರವು ಘೋಷಿಸಿರುವ ಹಿಂದೂಗಳ ಮೇಲಿನ ದಾಳಿಯ ಅಂಕಿಅಂಶಗಳು ಬಹಳ ಕಡಿಮೆ ಇದೆ. ‘ನಾವು ಹಿಂದುಗಳಿಗಾಗಿ ಏನಾದರೂ ಮಾಡುತ್ತಿದ್ದೇವೆ’, ಎಂದು ತೋರಿಸುವದಕ್ಕಾಗಿ ಬಾಂಗ್ಲಾದೇಶ ಈ ಅಂಕಿ ಸಂಖ್ಯೆ ಪ್ರಕಟಿಸಿದೆ !