‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮಸೂದೆ’ – ಹಿಂದೂಗಳ ಗೋರಿಗಳನ್ನು ಕಟ್ಟುವ ನೀತಿ !
ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಭಾರತೀಯ ಹಿಂದೂದ್ವೇಷಿ ರಾಜಕಾರಣಿಗಳಿಗೆ ಗಮನಕ್ಕೆ ಬಂದ ಅಂಶವೆಂದರೆ, ಭಾರತದಲ್ಲಿ ಹಿಂದೂ, ಬೌದ್ಧ, ಜೈನ್ ಮತ್ತು ಸಿಕ್ಖ್ ಇವರಲ್ಲಿ ಒಗ್ಗಟ್ಟು ಇರುವ ವರೆಗೆ ಈ ದೇಶದಲ್ಲಿ ನಮಗೆ ಬೇಕಾದಂತೆ ಕಾನೂನುಗಳನ್ನು ರೂಪಿಸಿ ಈ ದೇಶವನ್ನು ಕ್ರೈಸ್ತ ಅಥವಾ ಇಸ್ಲಾಮೀಕರಣ ಮಾಡಲು ಸಾಧ್ಯವಿಲ್ಲ. ಯಾವುದೇ ದೇಶದ ಮೇಲೆ ದೀರ್ಘಕಾಲ ಆಳ್ವಿಕೆ ನಡೆಸಲಿಕ್ಕಿದ್ದರೆ ಅಲ್ಲಿನ ಜನರಲ್ಲಿ ಧರ್ಮ, ಪಂಥ, ಸಂಪ್ರದಾಯ, ಜಾತಿಪಾತಿ, ಭಾಷೆ, ಪ್ರಾಂತ ಇವುಗಳಲ್ಲಿ ಒಡಕುಂಟು ಮಾಡುವ ಅವಶ್ಯಕತೆಯಿರುತ್ತದೆ. ದೇಶದ ನಾಗರಿಕರಲ್ಲಿ ವಿವಿಧ ಕಾರಣಗಳಿಗಾಗಿ ಸಣ್ಣ ಸಣ್ಣ ಗುಂಪುಗಳನ್ನು ನಿರ್ಮಿಸಿ ಅವರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಅವರಲ್ಲಿ ಪರಸ್ಪರ ಜಗಳ ಆರಂಭವಾದರೆ, ಅಧಿಕಾರವನ್ನು ಉಳಿಸಿಕೊಳ್ಳುವುದು ಸುಲಭವಾಗುತ್ತದೆ. ಇದು ಬ್ರಿಟಿಷರಿಗೆ ಚೆನ್ನಾಗಿ ತಿಳಿದಿತ್ತು ! |
೧. ಬ್ರಿಟಿಷರು ಭಾರತದ ಮೇಲೆ ವೈಚಾರಿಕ ಆಕ್ರಮಣದ ಮೂಲಕ ಹಮ್ಮಿಕೊಂಡಿರುವ ‘ಒಡೆದಾಳುವ’ (ಅ)ನೀತಿ !
ಬ್ರಿಟಿಷರು ‘ಒಡೆಯಿರಿ, ಜಾತಿಗಳಲ್ಲಿ ಜಗಳ ಹಚ್ಚಿ ಹಾಗೂ ಆಳಿರಿ’ ಇದೇ ತಂತ್ರವನ್ನು ಅವಲಂಬಿಸಿ ಭಾರತವನ್ನು ೧೫೦ ವರ್ಷಗಳ ವರೆಗೆ ಆಳಿದರು. ಭಾರತೀಯರನ್ನು ಮಾನಸಿಕವಾಗಿ ಗುಲಾಮರನ್ನಾಗಿಸಿದರು. ಭಾರತದ ಸಾಧನಸಂಪತ್ತನ್ನು ಬೇಕಾದಷ್ಟು ದೋಚಿದರು ಹಾಗೂ ಭಾರತವನ್ನು ಬಡತನದ ಕಂದಕಕ್ಕೆ ತಳ್ಳಿದರು. ಬ್ರಿಟಿಷ ರಾಜಕಾರಣಿಗಳು ಕೆಲವೇ ಬ್ರಿಟಿಷ ವಿಚಾರವಂತರನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡು ಅವರಿಗೆ ಕೈತುಂಬ ವೇತನ ನೀಡಿ ಅವರಿಂದ ‘ಆರ್ಯರ ಭಾರತದ ಮೇಲಿನ ಆಕ್ರಮಣ’ದ ಬಗ್ಗೆ ನಿಃಸಂದೇಹವಾಗಿ ಸುಳ್ಳು ಸಿದ್ಧಾಂತ ವನ್ನು ಹುಟ್ಟು ಹಾಕಿದರು. ಉತ್ತರ ಭಾರತೀಯ ಹಾಗೂ ದಕ್ಷಿಣ ಭಾರತೀಯರಲ್ಲಿ ಒಡಕುಂಟು ಮಾಡಿದರು. ‘ಆರ್ಯರು ದಕ್ಷಿಣದ ದ್ರಾವಿಡರು ಮತ್ತು ಅಲ್ಲಿನ ಮೂಲ ನಿವಾಸಿಗಳ ಮೇಲೆ ಆಕ್ರಮಣ ಮಾಡಿ ಅವರ ಸಂಸ್ಕೃತಿಯನ್ನು ನಾಶಗೊಳಿಸಿದರು’, ಎಂಬ ಸುಳ್ಳು ಇತಿಹಾಸವನ್ನು ಪ್ರಚಾರ ಮಾಡಿದರು.
೨. ಭಾರತೀಯ ಸಂಸ್ಕೃತಿ ತುಂಬಾ ಹಳೆಯದಾಗಿದ್ದು ಆಂಗ್ಲರ ಸಭ್ಯತೆಯನ್ನು ಅಂಗೀಕರಿಸುವ ವಿಷಯವನ್ನು ಜನರ ಮನಸ್ಸಿನಲ್ಲಿ ಬಿಂಬಿಸುವುದು
ಇಲ್ಲಿನ ಜಾತಿಭೇದರಹಿತ ಹಾಗೂ ಪ್ರತಿಭಾವಂತ ಗುರುಕುಲ ಶಿಕ್ಷಣಪದ್ಧತಿಯನ್ನು ನಾಶಗೊಳಿಸಿದರು ಹಾಗೂ ಭಾರತೀಯರನ್ನು ಮಾನಸಿಕ ದೃಷ್ಟಿಯಲ್ಲಿ ಗುಲಾಮರನ್ನಾಗಿ ಮಾಡುವ ಮೆಕಾಲೆ ಶಿಕ್ಷಣಪದ್ಧತಿಯನ್ನು ಹೇರಿದರು. ಇಲ್ಲಿನ ಸಂಪದ್ಭರಿತ ಹಾಗೂ ಸಮೃದ್ಧ ಭಾಷೆಗಳನ್ನು ಮರಣಾಸನ್ನವನ್ನಾಗಿಸಿ ಆಂಗ್ಲಭಾಷೆಯನ್ನು ವೈಭವೀಕರಿಸಿದರು. ‘ಇಲ್ಲಿನ ಮೂಲ ಹಿಂದೂ ಸಂಸ್ಕೃತಿ ಹಾಗೂ ಸಭ್ಯತೆಯೆಂದರೆ ಅನಾಗರಿಕತೆ, ಹಿಂದುಳಿದ ಹಾಗೂ ಹಳೆಯ ಸಂಪ್ರದಾಯವಾಗಿದ್ದು ಆಂಗ್ಲರ ಸಭ್ಯತೆ ಹಾಗೂ ಭಾಷೆ ಆಧುನಿಕ, ಪ್ರಗತಿಪರವಾಗಿದೆ, ಅದನ್ನು ಸ್ವೀಕರಿಸುವುದರಲ್ಲಿಯೆ ಭಾರತೀಯರ ಹಿತವಿದೆ’, ಎಂಬುದನ್ನು ಜನರ ಮನಸ್ಸಿನಲ್ಲಿ ಬಿಂಬಿಸಿದರು. ಸಂಸ್ಥಾನಿಕರಲ್ಲಿ, ಜಾತಿಜಾತಿಗಳಲ್ಲಿ ಬಿರುಕುಂಟು ಮಾಡಿ ಅವರಲ್ಲಿ ಪರಸ್ಪರ ಜಗಳವಾಡಿಸಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು. ಕ್ರೈಸ್ತ ಮತ್ತು ಮುಸಲ್ಮಾನರ ಮತಾಂಧತೆಗೆ, ಮೂಲಭೂತವಾದಕ್ಕೆ ಪ್ರೋತ್ಸಾಹ ನೀಡಿದರು. ಕೊನೆಗೆ ದೇಶದ ವಿಭಜನೆ ಮಾಡಿ ಆಂಗ್ಲರು ಈ ದೇಶದಿಂದ ಕಾಲ್ಕಿತ್ತರು.
೩. ಸ್ವಾತಂತ್ರ್ಯೋತ್ತರದ ಅಧಿಕಾರರೂಢ ಹಿಂದೂದ್ವೇಷಿ ನಾಯಕರು ಆಂಗ್ಲರ ‘ಒಡೆದಾಳುವ’ ನೀತಿಯಿಂದ ಸ್ವತಃ ರಾಜ್ಯವಾಳಿ ಈ ನಿಲುವನ್ನು ಅವಲಂಬಿಸಿದರು
ಸ್ವಾತಂತ್ರ್ಯದ ನಂತರ ಅಧಿಕಾರಕ್ಕೇರಿದ ಹಿಂದೂದ್ವೇಷಿ ನಾಯಕರು ‘ಭಾರತದ ಸಂಪೂರ್ಣ ಆಡಳಿತ ದೀರ್ಘಕಾಲ ತಮ್ಮ ವಶದಲ್ಲಿರಬೇಕು, ಅಧಿಕಾರದ ಮೂಲಕ ಹಿಂದೂಗಳನ್ನು ನಾಶ ಮಾಡಲು ಸಾಧ್ಯವಾಗಬೇಕೆಂದು’ ಆಂಗ್ಲರ ‘ಒಡೆದಾಳುವ’ ನೀತಿಯನ್ನು ಅವಲಂಬಿಸಿದರು. ಅವರು ವಿವಿಧ ಹೊಸ ಕಾನೂನುಗಳನ್ನು ರೂಪಿಸಿ ಹಿಂದಿನ ಕಾನೂನಿನಲ್ಲಿ ಬದಲಾವಣೆ ಮಾಡಿ ಹಿಂದೂ, ಬೌದ್ಧ, ಜೈನ್ ಮತ್ತು ಸಿಕ್ಖ್‌ರನ್ನು ಪರಸ್ಪರರಿಂದ ಬೇರ್ಪಡಿಸಿದರು. ಜಾತಿಜಾತಿಗಳಲ್ಲಿ ಜಗಳ ಹಚ್ಚಿದರು. ಮುಸಲ್ಮಾನರು ಮತ್ತು ಕ್ರೈಸ್ತರಿಗೆ ಹಿಂದೂಗಳಿಗಿಂತ ಹೆಚ್ಚು ಅಧಿಕಾರ, ರಕ್ಷಣೆ ಮತ್ತು ಸೌಲಭ್ಯಗಳನ್ನು ನೀಡಿ ಅವರಿಗೆ ಈ ದೇಶದಲ್ಲಿ ಹೇಗೆ ಬೇಕೋ ಹಾಗೆ ಪರಿವರ್ತನೆ ಮಾಡಿಕೊಳ್ಳಲು ಮುಕ್ತಾವಕಾಶವನ್ನು ಮಾಡಿಕೊಟ್ಟರು.
೪. ಬೌದ್ಧ, ಜೈನ್ ಮತ್ತು ಸಿಕ್ಖ್ ಇವು ಹಿಂದೂ ಧರ್ಮದ ಪಂಥಗಳೇ ಆಗಿವೆ !
೧೯೯೨ ಕ್ಕಿಂತ ಮೊದಲು ಹಿಂದೂ, ಬೌದ್ಧ, ಜೈನ್ ಮತ್ತು ಸಿಕ್ಖ್‌ರಿಗೆ ಒಬ್ಬನೆ ಶತ್ರು ಇದ್ದನು. ಈ ನಾಲ್ಕೂ ಧರ್ಮಪಂಥದವರನ್ನು ‘ಹಿಂದೂ’ ಎಂದೇ ಗುರುತಿಸಲಾಗುತ್ತಿತ್ತು. ಈ ನಾಲ್ಕೂ ಧರ್ಮ ಮತ್ತು ಪಂಥಗಳ ನಿರ್ಮಿತಿ ಹಿಂದೂಸ್ಥಾನದಲ್ಲಿಯೆ ಆಗಿತ್ತು. ಈ ಹಿಂದೆ ಹಿಂದೂ ಎಂದು ಜನಿಸಿದ ಭಗವಾನ ಗೌತಮ ಬುದ್ಧ, ಭಗವಾನ ಮಹಾವೀರ ಮತ್ತು ಗುರುನಾನಕ ಇವರು ಅನುಕ್ರಮವಾಗಿ ಬೌದ್ಧ, ಜೈನ ಮತ್ತು ಸಿಕ್ಖ್ ಪಂಥಗಳನ್ನು ಸ್ಥಾಪಿಸಿದರು; ಆದ್ದರಿಂದ ಸಂವಿಧಾನ ನಿರ್ಮಾಪಕ ಡಾ. ಅಂಬೇಡ್ಕರ್ ಇವರು ಕೂಡ ಹಿಂದೂಗಳಿಗಾಗಿ ನಿರ್ಮಿಸಿದ ಕಾನೂನಿನಲ್ಲಿ ಬೌದ್ಧ, ಜೈನ ಮತ್ತು ಸಿಕ್ಖ್ ಇವರನ್ನೂ ಸೇರ್ಪಡೆ ಮಾಡಿದರು. ಹಿಂದೂ, ಬೌದ್ಧ ಮತ್ತು ಜೈನ ಇವರಲ್ಲಿ ಅನೇಕ ಸಾಮ್ಯತೆಗಳಿವೆ. ಬೋಧನೆಯಲ್ಲಿಯೂ ಹೆಚ್ಚಿನ ವ್ಯತ್ಯಾಸವಿಲ್ಲ. ಈ ಮೂವರ ಧಾರ್ಮಿಕ ಕಥೆಗಳು ಮತ್ತು ಕಥೆಗಳಲ್ಲಿನ ಪಾತ್ರಗಳಲ್ಲಿಯೂ ಬಹಳಷ್ಟು ಸಮಾನತೆಯಿದೆ. ಸಿಕ್ಖ್ ಇದು ಹಿಂದೂ ಧರ್ಮದ ಭಾಗವೆ ಆಗಿದೆ. ಹಿಂದೂ ಮತ್ತು ಹಿಂದೂ ಧರ್ಮ ವನ್ನು ರಕ್ಷಿಸುವ ಉದ್ದೇಶದಿಂದಲೆ ಈ ಕ್ಷಾತ್ರವೃತ್ತಿಯ ಪಂಥ ನಿರ್ಮಾಣವಾಗಿದೆ. ಹಿಂದಿನ ಕಾಲದಲ್ಲಿ ಹಿಂದೂ ಕುಟುಂಬದಲ್ಲಿನ ಮೊದಲ ಮಗನನ್ನು ಸಿಕ್ಖ್ ಪಂಥಕ್ಕೆ ದಾನ ಮಾಡಲಾಗುತ್ತಿತ್ತು. ಹಿಂದೂ ಮತ್ತು ಸಿಕ್ಖ್ ಇವರ ನಡುವೆ ರೋಟಿ-ಬೇಟಿ ವ್ಯವಹಾರ ಹಿಂದಿನಿಂದಲೂ ಇತ್ತು, ಇಂದು ಕೂಡ ಇದೆ; ಆದರೆ ನಂತರ ‘ಒಡೆದಾಳುವ’ ನೀತಿಗನುಸಾರ ಹಿಂದೂದ್ವೇಷಿ ನೇತಾರರು ಸಿಕ್ಖ್ ಪಂಥವನ್ನು ಹಿಂದೂಗಳಿಂದ ಬೇರೆ ಹಾಗೂ ಸ್ವತಂತ್ರ ಧರ್ಮವೆಂದು ಮನ್ನಣೆ ನೀಡಿದರು.
೫. ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮಸೂದೆ’ಯ ಮೂಲಕ ಬೌದ್ಧ, ಜೈನ ಮತ್ತು ಸಿಕ್ಖ್ ಇವರನ್ನು ಹಿಂದೂಗಳಿಂದ ಬೇರ್ಪಡಿಸಲಾಯಿತು
ಇಷ್ಟು ಮಾಡಿದರೂ ಹಿಂದೂದ್ವೇಷಿ ನೇತಾರರಿಗೆ ಸಮಾಧಾನ ವಾಗಲಿಲ್ಲ. ಅವರು ೧೯೯೧ ರಲ್ಲಿ ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮಸೂದೆ’ (ಮೈನಾರಿಟಿ ಕಮಿಶನ್ ಆಕ್ಟ್) ಈ ಕಾನೂನನ್ನು ಮಾಡಿ ಬೌದ್ಧ, ಜೈನ ಮತ್ತು ಸಿಕ್ಖ್ ಇವರನ್ನು ಹಿಂದೂಗಳಿಂದ ಸಂಪೂರ್ಣ ಬೇರೆ ಮಾಡಿದರು. ಮುಸಲ್ಮಾನ, ಕ್ರೈಸ್ತ ಮತ್ತು ಪಾರ್ಸಿ ಇವರ ಜೊತೆಗೆ ಬೌದ್ಧ, ಜೈನ ಮತ್ತು ಸಿಕ್ಖ್ ಇವರಿಗೂ ಧಾರ್ಮಿಕ ಹಾಗೂ ಭಾಷಾವಾರು ಅಲ್ಪಸಂಖ್ಯಾತರ ಸ್ಥಾನವನ್ನು ನೀಡಿದರು. ಈ ಕಾನೂನಿನ ಮೂಲಕ ಈ ಮೇಲಿನ ತಥಾಕಥಿತ ಅಲ್ಪಸಂಖ್ಯಾತರಿಗೆ ಈ ಮುಂದಿನಂತೆ ಅಧಿಕಾರ ನೀಡಲಾಯಿತು.
ಅ. ತಮ್ಮ ಅಸ್ತಿತ್ವದ ರಕ್ಷಣೆಯನ್ನು ಮಾಡುವುದು (ಪ್ರೊಟೆಕ್ಶನ್ ಆಫ್ ಎಕ್ಝಿ ಸ್ಟನ್ಸ್ಸ)
ಆ. ಭೇದಭಾವ ಹಾಗೂ ಹಿಂಸೆಯಿಂದ ರಕ್ಷಣೆ (ಪ್ರೊಟೆಕ್ಶನ್ ಆಫ್ ಡಿಸ್ಕ್ರಿಮಿನೇಶನ್)
ಇ. ತಮ್ಮನ್ನು ಬೇರೆಯೆ ಎಂದು ಪರಿಗಣಿಸಿ ಅದರ ಪ್ರಚಾರ-ಪ್ರಸಾರ ಮಾಡಲು ಅವಕಾಶ (ಪ್ರೊಟೆಕ್ಶನ್ ಎಂಡ್ ಪ್ರಮೋಶನ್ ಆಫ್ ಐಡೆಂಟಿಟಿ)
ಈ. ದೇಶದ ರಾಜಕಾರಣದಲ್ಲಿ ಭಾಗವಹಿಸುವ ಅಧಿಕಾರ (ಪಾರ್ಟಿಸಿಪೇಶನ್ ಇನ್ ಪೊಲಿಟಿಕಲ್ ಲೈಫ್)
ಅಲ್ಪಸಂಖ್ಯಾತರಿಗೆ ಇಂತಹ ಅಧಿಕಾರ ಮತ್ತು ಸಂರಕ್ಷಣೆ ನೀಡುವಾಗ, ದೇಶದ ಬಹುಸಂಖ್ಯಾತ (ಅಂದರೆ ಹಿಂದೂ) ಜನರಿಂದ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಆಗಬಾರದೆಂದು ಈ ಕಾನೂನು ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮಸೂದೆ’ಯನ್ನು ಮಾಡಿ ಹಿಂದೂದ್ವೇಷಿಗಳು ಹಾಗೂ ಮುಸಲ್ಮಾನರ ಮತಗಳಿಗಾಗಿ ಜೊಲ್ಲು ಸುರಿಸುವ ನಿರ್ಗತಿಕ ರಾಜಕಾರಣಿಗಳು ಒಂದೇ ಕಲ್ಲಿನಿಂದ ಅನೇಕ ಪಕ್ಷಿಗಳನ್ನು ಕೊಂದರು. ಈ ಕಾನೂನಿನ ಮೂಲಕ ಅವರು ಬೌದ್ಧ, ಜೈನ, ಸಿಕ್ಖ್ ಇವರನ್ನು ಹಿಂದೂಗಳಿಂದ ಬೇರ್ಪಡಿಸಿದರು ಹಾಗೂ ಮುಸಲ್ಮಾನ, ಕ್ರೈಸ್ತ ಮತ್ತು ಪಾರ್ಸಿ ಇವರಿಗೆ ಬೇರೆಯೆ ಎಂದು ಗುರುತಿಸಿಕೊಳ್ಳುವ ಸ್ವಾತಂತ್ರ್ಯ ಮತ್ತು ಅಧಿಕಾರವನ್ನು ನೀಡಿ ಅವರಿಗೆ ರಾಷ್ಟ್ರೀಯ ಪ್ರವಾಹದಿಂದ ಶಾಶ್ವತವಾಗಿ ದೂರವಿಟ್ಟರು. ಈ ಕಾನೂನಿನ ಭಾಷೆಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಈ ದೇಶದ ಹಿಂದೂದ್ವೇಷಿ ಮುಖಂಡರಿಗೆ ಭಾರತದಲ್ಲಿನ ಜನರಲ್ಲಿ ಧರ್ಮ ಮತ್ತು ಜಾತಿಯಲ್ಲಿ ಬಿರುಕುಂಟು ಮಾಡಿ ಈ ದೇಶದ ಬಹುಸಂಖ್ಯಾತ ಹಿಂದೂಗಳನ್ನು ಸಂಪೂರ್ಣ ನಾಶ ಮಾಡಲಿಕ್ಕಿದೆ, ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ. ಈ ಮೇಲಿನ ಕಾನೂನಿನ ಮೂಲಕ ಭಾರತದಲ್ಲಿನ ತಥಾಕಥಿತ ಅಲ್ಪಸಂಖ್ಯಾತರಿಗೆ ತಮ್ಮ ಅಸ್ತಿತ್ವವನ್ನು ರಕ್ಷಣೆ ಮಾಡುವ ಅಧಿಕಾರ ವನ್ನು ನೀಡಲಾಯಿತು.
೬. ಮುಸಲ್ಮಾನರು ಮತ್ತು ಕ್ರೈಸ್ತರಿಗೆ ಆಶ್ರಯ ನೀಡಿರುವುದರ ಫಲ
ಇಲ್ಲಿ ಉದ್ಭವಿಸುವ ಪ್ರಶ್ನೆಯೇನೆಂದರೆ, ಈ ಕಾನೂನು ಬರುವ ಮೊದಲು ಮುಸಲ್ಮಾನರು, ಕ್ರೈಸ್ತರು, ಬೌದ್ಧರು, ಜೈನರು, ಸಿಕ್ಖ್‌ರು ಮತ್ತು ಪಾರ್ಸಿಗಳ ಅಸ್ತಿತ್ವ ಅಪಾಯದಲ್ಲಿತ್ತೇ ? ಹಿಂದೂಗಳು ಈ ಧರ್ಮದವರ ಅಸ್ತಿತ್ವವನ್ನು ನಾಶ ಮಾಡಲು ಅವರನ್ನು ಕೊಲೆ ಮಾಡುತ್ತಿದ್ದರೆ ? ತದ್ವಿರುದ್ಧ ಅತ್ಯಂತ ಸಹಿಷ್ಣುಗಳಾಗಿರುವ ಹಿಂದೂಗಳಿಗೆ ಮುಸಲ್ಮಾನರ ಅತ್ಯಾಚಾರಗಳಿಂದಾಗಿ ತಮ್ಮ ಮಾತೃಭೂಮಿಯನ್ನೇ ತ್ಯಜಿಸಬೇಕಾಯಿತು. ಹಿಂದೂಗಳು ಪಾರ್ಸಿ, ಯಹೂದಿಯರಿಗೆ ಔದಾರ್ಯದಿಂದ ಆಶ್ರಯ ನೀಡಿದರು. ಹಿಂದೂಗಳು ಶಕ, ಕುಶಾಣ ಮತ್ತು ಹೂಣ ಈ ಆಕ್ರಮಕರನ್ನೂ ತಮ್ಮ ಸಂಸ್ಕೃತಿಯಲ್ಲಿ ಸೇರಿಸಿಕೊಂಡರು. ಮುಸಲ್ಮಾನರು ಮತ್ತು ಕ್ರೈಸ್ತರಿಗೂ ಆಶ್ರಯ ನೀಡಿದರು; ಆದರೆ ಅವರಿಗೆ ಆಶ್ರಯ ನೀಡುವಂತಹ ಔದಾರ್ಯದ ಫಲವನ್ನು ಈಗ ಹಿಂದೂ ಸಮಾಜ ಅನುಭವಿಸುತ್ತಿದೆ. ಈಗ ಮುಸಲ್ಮಾನರ ಕಟ್ಟರತೆಯಿಂದಾಗಿ ಅವರ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಹಾಗೂ ಕ್ರೈಸ್ತರು ಮಾಡುತ್ತಿರುವ ಮತಾಂತರದಿಂದಾಗಿ ಈ ದೇಶದಲ್ಲಿನ ಹಿಂದೂಗಳ ಅಸ್ತಿತ್ವವೇ ಅಪಾಯಕ್ಕೊಳಗಾಗಿದೆ.
೭. ಹಿಂದೂಗಳಿಂದ ಬೌದ್ಧ, ಜೈನ, ಸಿಕ್ಖ್ ಮತ್ತು ಪಾರ್ಸಿಗಳಿಗೆ ಹಿಂಸೆ ಇದೊಂದು ದೊಡ್ಡ ಷಡ್ಯಂತ್ರ !
ಈ ಕಾನೂನಿನ ಮೂಲಕ ಭೇದಭಾವ ಮತ್ತು ಹಿಂಸೆಯಿಂದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಾಯಿತು. ಇದರಿಂದ ಆ ಹಿಂದೂದ್ವೇಷಿ ಮುಖಂಡರಿಗೆ ಸೂಚಿಸಲಿಕ್ಕಿತ್ತೆಂದರೆ, ಭಾರತದಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳಿಂದ ಬೌದ್ಧ, ಜೈನ, ಸಿಕ್ಖ್, ಮುಸಲ್ಮಾನ, ಕ್ರೈಸ್ತ ಮತ್ತು ಪಾರ್ಸಿ ಈ ಅಲ್ಪಸಂಖ್ಯಾತರ ಮೇಲೆ ತುಂಬಾ ಹಿಂಸೆಯಾಗುತ್ತಿದೆ. ಅವರೊಂದಿಗೆ ಭೇದಭಾವ ಮಾಡಲಾಗುತ್ತದೆ. ಮೂಲತಃ ಹಿಂದೂಗಳು ಬೌದ್ಧ, ಜೈನ ಮತ್ತು ಸಿಕ್ಖ್ ಇವರನ್ನು ಯಾವತ್ತೂ ಪರಕೀಯರೆಂದು ಭಾವಿಸಲಿಲ್ಲ. ಎರಡು ಸಾವಿರ ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ನೋಡಿದರೆ, ಈ ದೇಶದಲ್ಲಿ ಅನೇಕ ಹಿಂದೂ, ಬೌದ್ಧ, ಜೈನ ಮತ್ತು ಸಿಕ್ಖ್ ರಾಜರು ಆಗಿಹೋದರು; ಆದರೆ ರಾಜನು ಯಾವುದೇ ಧರ್ಮದವನಿರಲಿ, ಅವನು ತನ್ನ ರಾಜ್ಯದಲ್ಲಿನ ಇನ್ನಿತರ ಧರ್ಮದ ಜನರಿಗೆ ಹಿಂಸೆ ನೀಡಿರುವ, ಅವರೊಂದಿಗೆ ಭೇದಭಾವ ಮಾಡಿರುವಂತಹ ಒಂದೇ ಒಂದು ಉದಾಹರಣೆ ಸಿಗಲಿಕ್ಕಿಲ್ಲ. ಪ್ರತಿಯೊಂದು ಧರ್ಮದವರಿಗೆ ಅವರವರ ಧರ್ಮದಂತೆ ಆಚರಣೆ ಮಾಡುವ, ತಮ್ಮ ಧರ್ಮದ ಪ್ರಚಾರ-ಪ್ರಸಾರ ಮಾಡುವ, ತಮ್ಮ ಧರ್ಮದ ಪ್ರಾರ್ಥನಾಸ್ಥಳಗಳನ್ನು ನಿರ್ಮಿಸುವ ಮುಕ್ತ ಸ್ವಾತಂತ್ರ್ಯವಿತ್ತು. ಈ ನಾಲ್ಕೂ ಧರ್ಮದವರ ಆಚರಣೆಯಲ್ಲಿ ಧಾರ್ಮಿಕ, ಆರ್ಥಿಕ, ಸಾಮಾಜಿಕ ಈ ವಿಷಯಗಳಲ್ಲಿ ಸಾಮರಸ್ಯ ಇತ್ತು. ನಾಲಂದಾ, ತಕ್ಷಶಿಲೆಯಂತಹ ಪ್ರಸಿದ್ಧ ವಿಶ್ವವಿದ್ಯಾಲಯಗಳ ಹೊರತು ಇನ್ನೂ ಅನೇಕ ವಿಶ್ವವಿದ್ಯಾಲಯಗಳಲ್ಲಿ ಹಿಂದೂ, ಬೌದ್ಧ ಹಾಗೂ ಜೈನ ಈ ಮೂರೂ ಧರ್ಮದ ಬೋಧನೆ ನೀಡುವ ಬ್ರಾಹ್ಮಣ ಭಿಕ್ಕು ಮತ್ತು ಮುನಿಗಳು ಆಚಾರ್ಯರಾಗಿದ್ದರು. ವಿಶ್ವವಿದ್ಯಾಲಯಗಳಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ವರ್ತಿಸಲಾಗುತ್ತಿತ್ತು. ಜಗತ್ಪ್ರಸಿದ್ಧ ಎಲ್ಲೋರಾ ಗುಹೆಯಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮದ ಗುಹೆಗಳ ಸಂಗಮ ಕಾಣಿಸುತ್ತದೆ. ಭಾರತದ ಅನೇಕ ದೇವಸ್ಥಾನಗಳಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಧರ್ಮದ ದೇವಿದೇವತೆಗಳ ಪ್ರತಿಮೆಗಳು ಒಟ್ಟಿಗೆ ಕಾಣಿಸುತ್ತಿವೆ. ಸಿಕ್ಖ್ ಧರ್ಮದ ವಿಷಯದಲ್ಲಿ ಏನು ಹೇಳಬೇಕು ? ಸಿಕ್ಖ್‌ರು ಹಿಂದೂಗಳೆ ಆಗಿರುವುದರಿಂದ ಅವರನ್ನು ಹಿಂಸಿಸುವ ಪ್ರಶ್ನೆ ಎಲ್ಲಿದೆ ?
ಲಕ್ಷಗಟ್ಟಲೆ ಹಿಂದೂಗಳು ಗುರುದ್ವಾರದಲ್ಲಿ ‘ಗುರುಗ್ರಂಥಸಾಹೀಬ’ದ ಮುಂದೆ ನತಮಸ್ತಕರಾಗುತ್ತಾರೆ ಹಾಗೂ ಲಕ್ಷಗಟ್ಟಲೆ ಸಿಕ್ಖ್‌ರು ಹಿಂದೂ ದೇವಿದೇವತೆಗಳ ಮಂದಿರಗಳಲ್ಲಿ ನತಮಸ್ತಕರಾಗಲು ಶ್ರದ್ಧೆಯಿಂದ ಹೋಗುತ್ತಾರೆ. ಈ ದೇಶದಲ್ಲಿನ ಪಾರ್ಸಿ ಸಮಾಜ ಅತ್ಯಂತ ಶಾಂತ ಹಾಗೂ ಪ್ರಾಮಾಣಿಕವಾಗಿದೆ. ಈ ಸಮಾಜ ಉದ್ಯೋಗ ಮತ್ತು ವ್ಯವಸಾಯಗಳಿಂದ ಈ ದೇಶದಲ್ಲಿ ಸಮೃದ್ಧಿ ಹಾಗೂ ಜಗತ್ತಿನಲ್ಲಿ ಪ್ರತಿಷ್ಠೆಯನ್ನು ಪ್ರಾಪ್ತಿ ಮಾಡಿಕೊಟ್ಟಿದೆ. ಆದ್ದರಿಂದ ಹಿಂದೂ ಸಮಾಜ ಪಾರ್ಸಿ ಧರ್ಮದವರನ್ನು ಯಾವಾಗಲೂ ಗೌರವದಿಂದ ನೋಡಿದೆ. ಈ ದೇಶದಲ್ಲಿನ ಹಿಂದೂ, ಬೌದ್ಧ, ಜೈನ ಹಾಗೂ ಸಿಕ್ಖ್ ಧರ್ಮದವರಲ್ಲಿ ಪರಸ್ಪರ ಗಲಭೆಯಾಗಿಲ್ಲ; ಏಕೆಂದರೆ ಇವರೆಲ್ಲರ ಮಾತೃಭೂಮಿ ಒಂದೇ ಆಗಿದೆ. ಆದ್ದರಿಂದ ಹಿಂದೂ ಸಮಾಜ ಈ ಹಿಂದೆ ಯಾವತ್ತೂ ಬೌದ್ಧ, ಜೈನ ಹಾಗೂ ಸಿಕ್ಖ್ ಧರ್ಮದವರಿಗೆ ಹಿಂಸೆ ನೀಡಿಲ್ಲ. ಅವರೊಂದಿಗೆ ಯಾವತ್ತೂ ಭೇದಭಾವ ಮಾಡಿಲ್ಲ. ಇಂದು ಕೂಡ ಹಿಂದೂಗಳ ಈ ಆಚರಣೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಹಾಗೂ ಭವಿಷ್ಯದಲ್ಲಿಯೂ ಆಗಲಿಕ್ಕಿಲ್ಲ. ಆದ್ದರಿಂದ ‘ಮೈನಾರಿಟಿ ಆಕ್ಟ್’ನಲ್ಲಿ ಹಿಂದೂಗಳಿಂದ ಬೌದ್ಧ, ಜೈನ, ಸಿಕ್ಖ್ ಹಾಗೂ ಪಾರ್ಸಿ ಸಮಾಜಕ್ಕೆ ಹಿಂಸೆಯಾಗುತ್ತದೆ, ಅವರೊಂದಿಗೆ ಭೇದಭಾವ ಮಾಡಲಾಗುತ್ತದೆ, ಎನ್ನುವ ಊಹೆ ಅತ್ಯಂತ ಕುಚೋದ್ಯದ ವಿಷಯವಾಗಿದೆ. ಇದು ಹಿಂದೂಗಳನ್ನು ಅವಮಾನಿಸುವ ಹಾಗೂ ಹಿಂದೂಗಳಿಂದ ಬೌದ್ಧ, ಜೈನ ಹಾಗೂ ಸಿಕ್ಖ್‌ರನ್ನು ದೂರವಿಡುವ ಹಿಂದೂದ್ವೇಷಿ ಮುಖಂಡರು ಹಮ್ಮಿಕೊಂಡಿರುವ ಒಂದು ಷಡ್ಯಂತ್ರ ವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ. ಮುಸಲ್ಮಾನರು, ಕ್ರೈಸ್ತರು ಈ ತಥಾಕಥಿತ ಅಲ್ಪಸಂಖ್ಯಾತರ ವಿಷಯದಲ್ಲಿ ಏನು ಹೇಳ ಬೇಕು ? ಹಿಂದೂಗಳಿಂದ ಅವರಿಗೆ ಯಾವತ್ತೂ ಹಿಂಸೆಯಾಗಿಲ್ಲ. ತದ್ವಿರುದ್ಧ ಅವರಿಂದಾಗುವ ಹಿಂಸೆಯಿಂದ ಹಿಂದೂ ಸಮಾಜ ಈ ಹಿಂದೆಯೂ ಪೀಡೆಗೊಳಗಾಗಿತ್ತು ಇಂದಿಗೂ ಪೀಡೆಗೊಳಗಾಗಿದೆ !