ಚಿಕಾಗೋ – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧದ ಪ್ರತಿಭಟನೆಗಳು ಈಗ ಕೇವಲ ಭಾರತಕ್ಕೆ ಸೀಮಿತವಾಗಿರದೇ ಪ್ರಪಂಚದಾದ್ಯಂತ ಹರಡುತ್ತಿವೆ. ಅಮೇರಿಕದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಚಿಕಾಗೋದ ಕರೋಲ್ ಸ್ಟ್ರೀಮ್ ಇಲಿನಾಯ್ಸ್ನಲ್ಲಿರುವ ರಾಣಾ ರೇಗನ್ ಸೆಂಟರ್ ನಲ್ಲಿ ಸುಮಾರು 500 ಭಾರತೀಯ-ಅಮೆರಿಕನ್ ಹಿಂದೂಗಳು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದರು. ಇದೇ ಪ್ರತಿಭಟನಾಕಾರರು 2 ತಿಂಗಳ ಹಿಂದೆ ಹಿಂದೂಗಳ ಮೇಲಿನ ಹಿಂಸಾಚಾರವನ್ನು ಪ್ರತಿಭಟಿಸಿ ಶಾಂತಿಯುತ ಮೆರವಣಿಗೆ ನಡೆಸಿದ್ದರು.
1. ಚಿಕಾಗೋದ ಭಾರತೀಯ-ಅಮೇರಿಕನ ಗ್ರೂಪ್ ಅಧ್ಯಕ್ಷ ಹರಿಭಾಯಿ ಪಟೇಲ್ ಅವರು ಬಾಂಗ್ಲಾದೇಶದಲ್ಲಿ ಹಿಂದೂ ದೇವಸ್ಥಾನಗಳನ್ನು ಹೇಗೆ ನಾಶಪಡಿಸಲಾಗುತ್ತಿದೆ ಮತ್ತು ಹಿಂದೂಗಳನ್ನು ಯಾವ ರೀತಿ ಕೊಲ್ಲಲಾಗುತ್ತಿದೆ ಎಂಬುದರ ಕುರಿತು ಹೇಳಿಕೆ ನೀಡಿದ್ದಾರೆ.
2. ಚಿಕಾಗೋದ ಹಿಂದುತ್ವನಿಷ್ಠ ಡಾ. ರಾಮ ಚಕ್ರವರ್ತಿ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ‘ಬಾಂಗ್ಲಾದೇಶದಲ್ಲಿ ಸೇನಾಪಡೆ ಮತ್ತು ಪೊಲೀಸರು ಹಿಂದೂಗಳನ್ನು ಅಪಹರಿಸಿ ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ’, ಎಂದು ಅವರು ಹೇಳಿದರು.
3. ಡಾ. ರಶ್ಮಿ ಪಟೇಲ್ ಮಾತನಾಡಿ, ಅಮೇರಿಕದಲ್ಲಿರುವ ಹಿಂದೂಗಳು ರಾಷ್ಟ್ರಪತಿಗಳಿಗೆ ಸಂದೇಶ ಕಳುಹಿಸಿ, ‘ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವು ಹಿಂದೂಗಳ ಅತಿದೊಡ್ಡ ನರಮೇಧ ಎಂದು ಅವರಿಗೆ ಗಮನಕ್ಕೆ ತರಬೇಕು’, ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಅಮೇರಿಕದಲ್ಲಿರುವ ಹಿಂದೂಗಳು ತಮ್ಮ ಸಂಸದರನ್ನು ಸಂಪರ್ಕಿಸುವಂತೆ ಅವರು ಈ ಸಮಯದಲ್ಲಿ ಕರೆ ನೀಡಿದರು.