ನವದೆಹಲಿ – ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಜಾಮಾ ಮಸೀದಿ ಹಿಂದೆ ಹರಿಹರ ದೇವಸ್ಥಾನವಾಗಿತ್ತು ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ಹೋರಾಡುತ್ತಿರುವ ನ್ಯಾಯವಾದಿ ವಿಷ್ಣು ಶಂಕರ ಜೈನ ಅವರಿಗೆ ಜೀವ ಬೆದರಿಕೆ ಬಂದಿದೆ. ತನ್ನನ್ನು ‘ನಿಧಿ ಝಾ’ ಎಂದು ಬರೆದುಕೊಳ್ಳುವ @nidhijhabuhar ‘x’ ಖಾತೆಯಲ್ಲಿ ನ್ಯಾಯವಾದಿ ಜೈನ ಅವರ ಛಾಯಾಚಿತ್ರವನ್ನು ಪೋಸ್ಟ್ ಮಾಡಿ ‘ಮುಸ್ಲಿಮರೇ, ಆತನ ಮುಖವನ್ನು ಸರಿಯಾಗಿ ಗುರುತಿಸಿ’ ಎಂದು ಕರೆ ನೀಡಿದ್ದಾರೆ. ತದನಂತರ ನ್ಯಾಯವಾದಿ ಜೈನ್ ಸಂಭಲ್ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಖಾತೆಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Death Threat Issued to Devout Hindu Advocate @Vishnu_Jain1
An X post featured a photo of Advocate Jain with the message, “Muslims, recognize his face…”
A case has been filed with the Cyber Police
“No one trying to disturb the peace will be spared!” – Police Superintendent… pic.twitter.com/UEJKdM460E
— Sanatan Prabhat (@SanatanPrabhat) December 11, 2024
ವಾತಾವರಣವನ್ನು ಹಾಳುಗೆಡುವಲು ಪ್ರಯತ್ನಿಸುವ ಯಾರನ್ನೂ ಬಿಡುವುದಿಲ್ಲ ! – ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ ಬಿಷ್ಣೋಯಿ
ಸಂಭಲ್ ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ್ ಬಿಷ್ಣೋಯಿ ಮಾತನಾಡಿ, ಸೈಬರ್ ಪೊಲೀಸ್ ಠಾಣೆಯಲ್ಲಿ ‘ಎಕ್ಸ್’ ಖಾತೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಸೈಬರ್ ಕ್ರೈಂ ಸ್ಕ್ವಾಡ್ ತನಿಖೆ ನಡೆಸುತ್ತಿದೆ. ಸಧ್ಯಕ್ಕೆ ಈ ಖಾತೆಯನ್ನು ಯಾರು ಮತ್ತು ಎಲ್ಲಿಂದ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ವಾತಾವರಣವನ್ನು ಹಾಳು ಮಾಡುವ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|