ನಾವು ಚಿಕ್ಕವರಿದ್ದಾಗ ‘ಪಾಣಿಪತ್’ನ ಯುದ್ಧದಲ್ಲಿ ವಿಶ್ವಾಸ ಮುಳುಗಿತು’ ಎಂಬ ಮಾತನ್ನು ಸತತವಾಗಿ ಕೇಳುತ್ತಿದ್ದೆವು. ಆ ಸಮಯದಲ್ಲಿ ಅದರ ಅರ್ಥವು ತಿಳಿಯುತ್ತಿರಲಿಲ್ಲ; ಈಗ ನಾವು ದೊಡ್ಡವರಾದಂತೆ, ‘ವಿಶ್ವಾಸ’ ಎಂಬ ಶಬ್ದವು ಸಮಾಜಕ್ಕಾಗಿ ತುಂಬಾ ಮಹತ್ವದ ಅಂಗವಾಗಿದೆ ಎಂಬುದು ಗಮನಕ್ಕೆ ಬರತೊಡಗಿತು. ವ್ಯವಹಾರವಾಗಲಿ ಅಥವಾ ಅಧ್ಯಾತ್ಮಿಕವಾಗಲಿ ಸಂಪೂರ್ಣ ಜಗತ್ತು ವಿಶ್ವಾಸದಲ್ಲಿ ನಡೆಯುತ್ತದೆ. ಪ್ರಾಚೀನ ಕಾಲದಿಂದ ಭಾರತದಲ್ಲಿ ಎಲ್ಲ ವ್ಯವಹಾರಗಳು ವಿಶ್ವಾಸದಲ್ಲಿಯೇ ನಡೆಯುತ್ತಿದ್ದವು. ಹಿಂದಿನ ಕಾಲದಲ್ಲಿ ವಸ್ತುಗಳ ಕೊಡು-ಕೊಳ್ಳುವ (ವಿನಿಮಯ) ಪದ್ಧತಿ ಇತ್ತು. ಪ್ರತಿಯೊಬ್ಬರು ತಮ್ಮ ಬಳಿಯಲ್ಲಿರುವ ಉಪಯುಕ್ತ ವಸ್ತುಗಳನ್ನು ಇನ್ನೊಬ್ಬರಿಗೆ ಕೊಟ್ಟು ಅದರ ಬದಲಾಗಿ ಧಾನ್ಯ ಅಥವಾ ಇತರ ಉಪಯುಕ್ತ ವಸ್ತುಗಳನ್ನು ಪಡೆಯುತ್ತಿದ್ದರು. ‘ಕಾಸುಕಾಸಿನ ಲೆಕ್ಕ’ ಕಡಿಮೆಯಿತ್ತು. ಕಾಲ ಬದಲಾಗುತ್ತ ಹೋಯಿತು ಮತ್ತು ವಿಶ್ವಾಸವು ಬಿರುಕು ಬೀಳತೊಡಗಿತು. ಮನುಷ್ಯನು ಮನುಷ್ಯನ ನಡುವಿನ ವಿಶ್ವಾಸ ಕುಸಿಯಲು ಪ್ರಾರಂಭವಾಯಿತು. ಮನೆಮನೆಗಳಲ್ಲಿ ಭಿನ್ನಾಭಿಪ್ರಾಯ ಗಳು ಉದ್ಭವಿಸಿದವು.
ಭಾರತದಲ್ಲಿ ಮುಸಲ್ಮಾನ ಬಾದಶಾಹಗಳು ದಂಡೆತ್ತಿ ಬಂದರು ಮತ್ತು ಕಾಶ್ಮೀರದಿಂದ ದಕ್ಷಿಣದ ವರೆಗೆ ಅನೇಕ ಶೂರ ರಾಜರು ನೂರಾರು ವರ್ಷಗಳ ವರೆಗೆ ತೀವ್ರವಾಗಿ ಪ್ರತಿರೋಧವನ್ನು ಮಾಡಿದ್ದರು. ತಮ್ಮ ಪ್ರಾಣಬಲಿಗಳನ್ನು ಕೊಡುತ್ತಾ ಕಠಿಣ ಯುದ್ಧಗಳನ್ನು ಮಾಡಿದ್ದರು; ಆದಾಗ್ಯೂ, ೧೪೦೦ ವರ್ಷಗಳ ಕಾಲಯವನರು ಇಲ್ಲಿ ದಬ್ಬಾಳಿಕೆ ನಡೆಸುತ್ತಿದ್ದರು. ತಮ್ಮ ರಾಜರಿಗೆ ಅಪ್ರಾಮಾಣಿಕರಾಗಿದ್ದ ಕೆಲವು ವಿಶ್ವಾಸಘಾತಕ ಹಿಂದೂಗಳೇ ಇದಕ್ಕೆ ಕಾರಣರಾಗಿದ್ದರು, ಸಂಪೂರ್ಣ ಹಿಂದೂಗಳಿಗೆ ವಿಶ್ವಾಸದ್ರೋಹ ಬಗೆದರು ! ಈ ಕಾರಣದಿಂದ ಅನೇಕ ಶೂರ ಹಿಂದೂ ರಾಜರು ಮುಸಲ್ಮಾನ ಬಾದಶಾಹರಿಂದ ಕೊಲ್ಲಲ್ಪಟ್ಟರು ಮತ್ತು ಅವರ ಪ್ರದೇಶದ ಮೇಲೆ ಆಡಳಿತ ನಡೆಸಿ ಪ್ರಜೆಗಳನ್ನು ಹಿಂಸಿಸಿದರು.
ಈಗ ಕಲಿಯುಗದಲ್ಲಿನ ಆಪತ್ಕಾಲ ಪ್ರಾರಂಭವಾಗಿದೆ. ಯಾರಿಗೂ ಯಾರ ಮೇಲೂ ವಿಶ್ವಾಸ ಉಳಿದಿಲ್ಲ; ಹಾಗಾಗಿ ವಿಜ್ಞಾನಿಗಳು ಮನುಷ್ಯರ ಕ್ರಿಯೆಗಳನ್ನು ಮುಂದೆ ತರಲು ಅನೇಕ ಪ್ರಯೋಗಗಳನ್ನು ಮಾಡಿದರು. ವಿಡಿಯೋ ಬಂದವು. ಈ ಎಲ್ಲದರಿಂದ ಸಿಸಿಟಿವಿಯೂ ಜನ್ಮತಾಳಿತು. ಪತಿ-ಪತ್ನಿ, ಪಾಲಕರು-ಮಕ್ಕಳು ಎಂದು ಯಾರಲ್ಲಿಯೂ ವಿಶ್ವಾಸವಿಲ್ಲದ ಕಾರಣ ಮನೆಗಳಲ್ಲಿಯೂ ‘ಸಿಸಿಟಿವಿ’ ಗಳನ್ನು ಅಳವಡಿಸಲಾಗುತ್ತಿದೆ, ಅಷ್ಟೇ ಅಲ್ಲ, ಕೆಲವೊಮ್ಮೆ ಅವರ ಮೇಲೆ ಗೂಢಚಾರಿಕೆಯನ್ನು ಸಹ ಮಾಡಲಾಗುತ್ತಿದೆ. ಈ ಪರಿಸ್ಥಿತಿ ಏಕೆ ಉದ್ಭವಿಸಿತು ? ಧರ್ಮ, ಅಧ್ಯಾತ್ಮದಲ್ಲಿ ವಿಶ್ವಾಸ ಕಡಿಮೆಯಾದ ಕಾರಣ, ಜನರು ಸ್ವಾರ್ಥಿಗಳಾದರು. ‘ಎಲ್ಲೆಲ್ಲೂ ದೇವರು ಇದ್ದಾನೆ’ ಎಂಬ ವಿಶ್ವಾಸದಲ್ಲಿ ಭಾರತ ಸಂಸ್ಕೃತಿ ಮತ್ತು ಪ್ರಕೃತಿಯು ಲಕ್ಷಾಂತರ ವರ್ಷಗಳಿಂದ ನಡೆಯುತ್ತಿತ್ತು. ವಿಜ್ಞಾನದಲ್ಲಿ ಅಯೋಗ್ಯ ಅತಿರೇಕದಿಂದ ಈಗ ಪ್ರತಿಯೊಬ್ಬರಿಗೂ ‘ದಾಖಲೆ’ ಬೇಕಾಗಿದೆ. ‘ದೇವರು ಎಲ್ಲಿದ್ದಾನೆ ತೋರಿಸಿ ?’ ಎಂದು ಕೇಳಲಾಗುತ್ತದೆ. ‘ದೇವರನ್ನು ಅನುಭವಿಸಬೇಕು’ ಎಂಬ ವಿಶ್ವಾಸ ಕಡಿಮೆ ಯಾಗುತ್ತಿದೆ. ದೇವರು ತಾನೇ ಬಂದು ‘ನಾನು ದೇವರು’ ಎಂದರೂ, ಅವನ ಮಾತಿನಲ್ಲಿ ಎಷ್ಟು ಜನ ವಿಶ್ವಾಸ ಇಡುತ್ತಾರೆ ? ಎಂದು ಹೇಳುವುದು ಕಠಿಣವಾಗಿದೆ. ಅದಕ್ಕಾಗಿಯೇ ಸೂಕ್ಷ್ಮಜ್ಞಾನೇಂದ್ರಿಯಗಳಿಂದ ಯಾರು ದೇವರನ್ನು ಅನುಭವಿಸುತ್ತಾರೆಯೋ, ಅಂತಹ ಆಧ್ಯಾತ್ಮಿಕ ವ್ಯಕ್ತಿಗಳ ಮೇಲೆ ವಿಶ್ವಾಸ ಇಡಬೇಕು. ಸಮಾಜದಲ್ಲಿ ಧರ್ಮದ ಸಂಸ್ಕಾರಗಳು ಇಲ್ಲದಿರುವುದರಿಂದ ಈ ಸ್ಥಿತಿ ಉದ್ಭವಿಸಿದೆ. ಮಾನವನಲ್ಲಿ ವಿಶ್ವಾಸವು ಹೆಚ್ಚಾಗಬೇಕಾದರೆ, ಅವನಿಗೆ ದೇವರ ಮೇಲಿನ ವಿಶ್ವಾಸ ಹೆಚ್ಚಾಗಬೇಕು. ಧರ್ಮವನ್ನು ಪಾಲಿಸುವ ಜನರು ಹೆಚ್ಚಾದರೆ, ಧರ್ಮರಾಜ್ಯ ಬರುವುದು ಮತ್ತು ಆಗ ಪ್ರಜೆಗಳು ಹಿಂದಿನ ಕಾಲದಂತೆ ಸುಖವಾಗಿ, ಪರಸ್ಪರರ ವಿಶ್ವಾಸಕ್ಕೆ ಪಾತ್ರರಾಗುವರು.
– ಸೌ. ಆನಂದಿ ರಾಮಚಂದ್ರ ಪಾಂಗುಳ, ಸನಾತನ ಆಶ್ರಮ, ದೇವದ, ಪನವೇಲ