ಮೈಸೂರಿನ ಸಾಧಕಿ ಶ್ರೀಮತಿ ಮುತ್ತಮ್ಮಾ ರೆಡ್ಡಿ ಇವರು ದಿನಾಂಕ ೧೪ ಅಕ್ಟೋಬರ್ ರಂದು ಜನ್ಮಮೃತ್ಯುವಿನ ಚಕ್ರದಿಂದ ಬಿಡುಗಡೆ ಹೊಂದಿದರು. ಅವರ ಸಾಧನೆ ಹಾಗೂ ಗುಣವೈಶಿಷ್ಟ್ಯಗಳನ್ನು ಇಲ್ಲಿ ಕೊಡುತ್ತಿದ್ದೇವೆ
೧. ಸ್ವಾವಲಂಬಿ : ಅವರ ವಯಸ್ಸು ೭೭ ವರ್ಷಗಳಾಗಿದ್ದರೂ ಅವರು ಇತರರ ಮೇಲೆ ಅವಲಂಬಿಸಿ ಇರುವುದಿಲ್ಲ.
೨. ಗುರುಪ್ರಾಪ್ತಿ ಮತ್ತು ಮಾಡಿದ ಸಾಧನೆ : ಕಳೆದ ೨೦ ವರ್ಷಗಳಿಂದ ಶ್ರೀಮತಿ ಮುತ್ತಮ್ಮ ರೆಡ್ಡಿ (ಅಕ್ಕ) ಇವರಿಗೆ ಗಾಣಗಾಪುಗ್ದ ಬಂದಿರುವ ಓರ್ವ ಗುರುಗಳು ಮಂತ್ರದೀಕ್ಷೆಯನ್ನು ನೀಡಿದರು. ಅಂದಿನಿಂದಲೇ ಅವರು ದತ್ತಾತ್ರೇಯರ ನಾಮ ನಿರಂತರವಾಗಿ ಜಪಿಸುತ್ತಿದ್ದಾರೆ. ಅಕ್ಕನವರ ಗುರುಗಳು ಆಗಾಗ ನಂಜನಗೂಡಿಗೆ (ಮೈಸೂರು ಜಿಲ್ಲೆ) ಬರುತ್ತಿದ್ದರು. ಆಗ ಅಕ್ಕನವರು ಅವರ ಸೇವೆಯನ್ನು ಮಾಡುತ್ತಿದ್ದರು.
ಗುರುಗಳು ದೇಹತ್ಯಾಗದ ಸಮಯದಲ್ಲಿ ಅಕ್ಕನವರಿಗೆ, ”ನೀನು ನನ್ನ ಸ್ಮರಿಸಿದ ಕೂಡಲೇ ನಾನು ನಿನಗೆ ಕಪ್ಪೆಯ ರೂಪದಲ್ಲಿ ದರ್ಶನವನ್ನು ನೀಡುವೆನು,” ಎಂದು ಆಶೀರ್ವಾದ ಮಾಡಿದ್ದರು. ಅಕ್ಕನವರಿಗೆ ಈಗಲೂ ಅವರ ಗುರುಗಳು ದರ್ಶನ ನೀಡುತ್ತಾರೆ.
೩. ಸೇವೆಯ ತಳಮಳ : ಅ. ಅವರ ಊರಿನಲ್ಲಿ ಸನಾತನ ಸಂಸ್ಥೆಯ ಪ್ರವಚನ ಮತ್ತು ಸತ್ಸಂಗಗಳನ್ನು ಆಯೋಜಿಸಬೇಕಾದರೆ ಅಕ್ಕನವರಿಗೆ ‘ಗುರುಗಳ ಕಾರ್ಯಕ್ಕಾಗಿ ತನ್ನ ಮನೆಯನ್ನು ಉಪ ಯೋಗಿಸಬೇಕು’, ಎಂದು ಅಕ್ಕನವರಿಗೆ ಅನಿಸುತ್ತದೆ.
ಆ. ಗ್ರಂಥಪ್ರದರ್ಶನದ ಸೇವೆಗೆ ಹೋದಾಗ ಗ್ರಂಥಪ್ರದರ್ಶನದ ಜಾಗದಲ್ಲಿ ಕುಳಿತು ನಾಮಜಪಿಸುತ್ತಾರೆ. ಅಕ್ಕನವರು ಸಾಧಕರಿಗೆ, ”ಎಲ್ಲರನ್ನು ಕರೆದು ಸನಾತನದ ಗ್ರಂಥಗಳ ಮತ್ತು ಸಾತ್ತ್ವಿಕ ಉತ್ಪಾದನೆಗಳ ಬಗ್ಗೆ ತಿಳಿಸಲು ಹೇಳುತ್ತಾರೆ. ಅವರಿಗೆ ಕಳೆದ ೧೮ ವರ್ಷಗಳಿಂದ ದೃಷ್ಟಿ ಇಲ್ಲ, ಆದರೂ ಮನೆಯಲ್ಲಿ ಒಬ್ಬರೇ ಇದ್ದು ತಮ್ಮ ಕೆಲಸಗಳನ್ನು ಸ್ವತಃ ಮಾಡುತ್ತಾರೆ. ಸಾಧಕರು ಅವರ ಕೈ ಹಿಡಿದು ಸೇವೆಗೆ ಕರೆದೊಯ್ಯುತ್ತಾರೆ. ಸ್ಥೂಲ ದೃಷ್ಟಿ ಇಲ್ಲದಿದ್ದರೂ ಸೇವೆಯಲ್ಲಿ ಭಾಗಿಯಾಗಿ ಆನಂದ ಪಡೆಯುತ್ತಾರೆ
೪. ಸಾಧನೆಯ ತಳಮಳ : ಪರಊರಿನಲ್ಲಿರುವ ಅವರ ಮಕ್ಕಳು ಅಕ್ಕನವರನ್ನು ತಮ್ಮ ಬಳಿ ಕರೆಯುತ್ತಾರೆ; ಆದರೆ ಅವರು, ”ಇಲ್ಲಿ ನನ್ನ ಜೊತೆಗೆ ಭಗವಂತನು ಇರುವಾಗ ನಾನು ಮಕ್ಕಳ ಬಳಿ ಏಕೆ ಹೋಗಲಿ ? ನಾನು ಅಲ್ಲಿ ಹೋದರೆ ಸಾಧನೆ ಆಗುವುದಿಲ್ಲ ನನಗೆ ಸಾಧನೆ ಮಾಡುವುದಿದೆ.’ ಎಂದು ಹೇಳುತ್ತಾರೆ.
– ಕು. ರೇವತಿ (ಆಧ್ಯಾತ್ಮಿಕ ಮಟ್ಟ ಶೇ. ೬೧, ವಯಸ್ಸು ೩೨), ಬೆಂಗಳೂರು.