೧. ಪ.ಪೂ.ಕಾಣೆ ಮಹಾರಾಜ (ನಾರಾಯಣಗಾವ)
೧೯೯೨ ರಲ್ಲಿ ಒಮ್ಮೆ ನಾನು ಪ.ಪೂ. ಕಾಣೆ ಮಹಾರಾಜರಿಗೆ ಕೇಳಿದೆ, ”ಮೂರನೆಯ ಮಹಾಯುದ್ಧವಾಗಲಿದೆಯೇ ?”, ಆಗ ಅವರು ನುಡಿದಿರುವ ಭಾಷ್ಯವನ್ನು ಇಲ್ಲಿ ನೀಡುತ್ತಿದ್ದೇನೆ.
ಅ. ‘ಮೂರನೆಯಲ್ಲ, ಕೊನೆಯ ಮಹಾಯುದ್ಧವಾಗಲಿದೆ.
ಆ. ಮುಂಬಯಿ ಕ್ರಿಕೆಟ್ ಮೈದಾನವಾಗುವುದು. (ಅಂದರೆ ಕ್ರಿಕೆಟ್ ಮೈದಾನದಂತೆ ಭೂಮಿ ಸಮತಟ್ಟಾಗುವುದು, ಕಟ್ಟಡ, ವಾಹನಗಳು ಮುಂತಾದವುಗಳೇನೂ ಇರುವುದಿಲ್ಲ, ಅಂದರೆ ಸಂಪೂರ್ಣ ಮುಂಬಯಿ ನಾಶವಾಗುವುದು.)
ಇ. ಆಪತ್ಕಾಲದಲ್ಲಿ ವಿದ್ಯುತ್ ಇರುವುದಿಲ್ಲ.
ಈ. ದೇಶಕ್ಕೆ ಎಷ್ಟು ಹಾನಿಯಾಗುವುದೆಂದರೆ ‘ರಾಷ್ಟ್ರ ನಿರ್ಮಾಣಕ್ಕಾಗಿ ಒಂದು ಪೀಳಿಗೆಗೆ ತಮ್ಮ ಇಡೀ ಆಯುಷ್ಯ ನೀಡಬೇಕಾಗುವುದು.’
೨. ಪರಾತ್ಮರ ಗುರು ಡಾ. ಜಯಂತ ಆಠವಲೆ
ಕೆಲವು ವರ್ಷಗಳ ಹಿಂದೆ ಪ.ಪೂ. ಡಾ. ಆಠವಲೆಯವರು ಮಾತನಾಡುವಾಗ, ”ಟೈಟಾನಿಕ್’ ಹಡಗು ಅನಿರೀಕ್ಷಿತವಾಗಿ ಮುಳುಗಿದಂತೆಯೇ ಆಪತ್ಕಾಲವು ಅನಿರೀಕ್ಷಿತವಾಗಿ ಬರುವುದು”, ಎಂದಿದ್ದರು.
– ಡಾ. ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೧೦.೨೦೨೩)