ನ್ಯಾಯಾಂಗದ ನಿಂದನೆ ಮಾಡಿದವರನ್ನು ಜೈಲಿಗೆ ಹಾಕಿ !

೧. ಸರಕಾರವು ಇಂತಹ ಮತಾಂಧರನ್ನು ಶಾಶ್ವತವಾಗಿ ಹದ್ದುಬಸ್ತಿನಲ್ಲಿಡಬೇಕು !

ಅಕೋಲಾ (ಮಹಾರಾಷ್ಟ್ರ)ದಲ್ಲಿ ಕಾಂಗ್ರೆಸ್ಸಿನ ಸಾಜಿದಖಾನ್‌ ಪಠಾಣ್‌ ಚುನಾವಣೆ ಗೆದ್ದನೆಂದು ತಿಳಿದಾಕ್ಷಣ ಅಲ್ಲಿನ ಮುಸಲ್ಮಾನರು ರಾಮದಾಸಪೇಠ ಪೊಲೀಸ್‌ ಠಾಣೆಯ ಪೇದೆಯ ಮೇಲೆ ಕೈ ಮಾಡಿದರು.

೨. ಈಗ ಜಗತ್ತಿನಾದ್ಯಂತದ ಹಿಂದೂಗಳು ಒಟ್ಟಾಗಬೇಕು !

ಬಾಂಗ್ಲಾದೇಶದಲ್ಲಿ ದೇಶದ್ರೋಹದ ಆರೋಪದ ಮೇಲೆ ಇಸ್ಕಾನ್‌ ಸದಸ್ಯ ಚಿನ್ಮಯ್‌ ಕೃಷ್ಣ ದಾಸ್‌ ಪ್ರಭು ಅವರನ್ನು ಬಂಧಿಸಿದ ನಂತರ, ಪ್ರತಿಭಟಿಸಿದ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು. ಇದರಲ್ಲಿ ೫೦ ಕ್ಕೂ ಹೆಚ್ಚು ಹಿಂದೂಗಳು ಗಾಯಗೊಂಡಿದ್ದಾರೆ.

೩. ಭಾರತದಲ್ಲಿ ಭ್ರಷ್ಟಾಚಾರಿಗಳಿಗೆ ಇಂತಹ ಶಿಕ್ಷೆ ಯಾವಾಗ ?

ಭ್ರಷ್ಟಾಚಾರ ಮತ್ತು ಅಕ್ರಮ ಸಾಲ ನೀಡಿದ ಆರೋಪದಲ್ಲಿ ಚೀನಾದಲ್ಲಿ ‘ಬ್ಯಾಂಕ್‌ ಆಫ್‌ ಚಾಯನಾ’ದ ಮಾಜಿ ಅಧ್ಯಕ್ಷ ಲಿಯು ಲಿಯಾಂಗ್‌ ಅವರಿಗೆ ಮರಣದಂಡನೆಯ ಶಿಕ್ಷೆ ವಿಧಿಸಲಾಗಿದೆ.

೪. ನ್ಯಾಯಾಂಗದ ನಿಂದನೆ ಮಾಡಿದವರನ್ನು ಜೈಲಿಗೆ ಹಾಕಿ !

ಅಜ್ಮೇರ್‌ ಷರೀಫ್‌ ದರ್ಗಾ ಹಿಂದೆ ಶಿವ ದೇವಾಲಯವಾಗಿತ್ತು ಎಂಬ ಮನವಿಯನ್ನು ಅಜ್ಮೇರಿನ ಸ್ಥಳೀಯ ನ್ಯಾಯಾಲಯ ಸ್ವೀಕರಿಸಿದ ನಂತರ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ರಾಮಗೋಪಾಲ್‌ ಯಾದವ್‌ ಅವರು ‘ಸಣ್ಣ ನ್ಯಾಯಾಧೀಶರು ಈ ದೇಶಕ್ಕೆ ಬೆಂಕಿ ಹಚ್ಚಲು ಬಯಸುತ್ತಾರೆ’ ಎಂದು ಹೇಳಿದ್ದಾರೆ.

೫. ಈಗ ಕರೆ ಅಲ್ಲ ಬಾಂಗ್ಲಾದೇಶದ ವಿರುದ್ಧ ಕ್ರಮ ಕೈಗೊಳ್ಳಿ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮತ್ತು ಅಲ್ಪಸಂಖ್ಯಾತರ ದುಃಸ್ಥಿತಿ ಯನ್ನು ನಾವು ಸ್ಪಷ್ಟವಾಗಿ ಖಂಡಿಸಿದ್ದೇವೆ. ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ನಾವು ಬಾಂಗ್ಲಾದೇಶಕ್ಕೆ ಕರೆ ನೀಡುತ್ತೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ

೬. ಬಾಂಗ್ಲಾದೇಶದ ಕುಚೋದ್ಯ ತಿಳಿಯಿರಿ !

ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದಾರೆ, ಆದರೆ ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾರು ಅಸುರಕ್ಷಿತರಾಗಿದ್ದಾರೆ ಎಂದು ಬಾಂಗ್ಲಾದೇಶದ ಕಾನೂನು ಸಲಹೆಗಾರ ಆಸಿಫ್‌ ನಜ್ರುಲ್‌

ಆರೋಪಿಸಿದ್ದಾರೆ.