ಬಾಂಗ್ಲಾದೇಶದಲ್ಲಿನ ಬಾಂಗ್ಲಾದೇಶ ನ್ಯಾಷನಲ್ ಲಿಸ್ಟ್ ಪಾರ್ಟಿಯ ನಾಯಕ ಗಯೇಶ್ವರ ಚಂದ್ರ ರಾಯ ಇವರ ಭಾರತದ್ವೇಷಿ ಹೇಳಿಕೆ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ಒಂದು ಸ್ವತಂತ್ರ ದೇಶವಾಗಿದೆ ಮತ್ತು ದೇಶದಲ್ಲಿನ ಜನರು ಎಷ್ಟು ಬುದ್ಧಿವಂತರಾಗಿದ್ದಾರೆ ಎಂದರೆ, ಅವರಿಗೆ ಯಾರು ಏನು ಕೆಲಸ ಮಾಡುವುದರಲ್ಲಿ ಸಕ್ಷಮವಾಗಿದ್ದಾರೆ ಎಂಬುದು ತಿಳಿದಿದೆ. ಅದಕ್ಕಾಗಿ ಅವರಿಗೆ ಹೊರಗಿನಿಂದ ಸಲಹೆ ಪಡೆಯುವ ಅಗತ್ಯವಿಲ್ಲ. (ಅವರು ಇಷ್ಟು ಸಕ್ಷಮವಾಗಿದ್ದರೆ, ೧೯೭೧ ರಲ್ಲಿ ಅವರಿಗೆ ಭಾರತ ಮತ್ತು ಭಾರತೀಯ ಸೈನ್ಯದ ಆವಶ್ಯಕತೆ ಏಕೆ ಅನಿಸಿತು ? ಅವರು ತಮ್ಮ ಬುದ್ಧಿ ಉಪಯೋಗಿಸಿ ಪಾಕಿಸ್ತಾನಿ ಸೈನ್ಯದ ಜೊತೆ ಹೋರಾಡಿ ಬಾಂಗ್ಲಾದೇಶ ಏಕೆ ಸ್ವತಂತ್ರಗೊಳಿಸಲಿಲ್ಲ ? – ಸಂಪಾದಕರು) ಅವಶ್ಯಕತೆ ಅನಿಸಿದರೆ ನಾವು ವಿದೇಶದಿಂದ ಸಲಹೆಗಾರರನ್ನು ಪಡೆಯಬಹುದು. ಯಾವುದೇ ಸ್ವತಂತ್ರ ದೇಶದ ಜನರಿಗೆ ಅವರ ಆಂತರಿಕ ವಿಷಯಗಳಲ್ಲಿ ಇತರೆ ಯಾವುದೇ ದೇಶದ ಹಸ್ತಕ್ಷೇಪ ಹಿಡಿಸುವುದಿಲ್ಲ, ಎಂದು ಬಾಂಗ್ಲಾದೇಶದಲ್ಲಿನ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (ಬಿ.ಎನ್.ಪಿ.ಯ) ನಾಯಕ ಗಯೇಶ್ವರ್ ಚಂದ್ರ ರಾಯ ಇವರು ಭಾರತದ ಮೇಲೆ ವಾಗ್ದಾಳಿ ನಡೆಸಿದರು. ಅವರು ಬಿ.ಎನ್.ಪಿ.ಯ ಸಂಸ್ಥಾಪಕ ಝಿಯಾಉರ್ ರಹಮಾನ್ ಇವರ ಕಬ್ರದ ಬಳಿ ಶ್ರದ್ಧಾಂಜಲಿ ಅರ್ಪಿಸಲು ಹೋಗಿದ್ದರು. ಅಲ್ಲಿ ಅವರಿಗೆ ಪತ್ರಕರ್ತರಿಂದ ಬಾಂಗ್ಲಾದೇಶದ ಭಾರತದ ಜೊತೆಗೆ ಇರುವ ಸಂಬಂಧದ ಕುರಿತು ಪ್ರಶ್ನಿಸಲಾಯಿತು. ಅದರ ಬಗ್ಗೆ ಉತ್ತರ ನೀಡುವಾಗ ಅವರು ಭಾರತವು ದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದರು.
ಗಯೇಶ್ವರ ಚಂದ್ರ ಮಾತು ಮುಂದುವರೆಸುತ್ತಾ,
೧. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಪ್ರಭಾವ ನಾವು ನೋಡಿದ್ದೇವೆ. ಉದಾಹರಣೆಗಾಗಿ ಭಾರತ ಸರಕಾರದಿಂದ ಹಸಿರು ನಿಶಾನೆ ದೊರೆಯದೆ ಬಾಂಗ್ಲಾದೇಶದಲ್ಲಿನ ಬ್ಯಾಂಕಿನ ಆಡಳಿತಾತ್ಮಕ ಸಂಚಾಲಕರ ನೇಮಕ ನಡೆಯುತ್ತಿರಲಿಲ್ಲ. ದೇಶದ ಮುಖ್ಯ ನ್ಯಾಯಾಧೀಶರು ಯಾರು ಇರುವರು, ಸಂಸದರು ಅಥವಾ ಸಚಿವರು ಯಾರು ಇರುವರು, ಇಂತಹ ಎಲ್ಲಾ ನಿರ್ಣಯಗಳಲ್ಲಿ ಭಾರತದ ಪ್ರಭಾವ ಇರುತ್ತಿತ್ತು.
೨. ಭಾರತ ಇದು ನಮ್ಮ ನೆರೆಯ ದೇಶವಾಗಿದೆ ಮತ್ತು ನಮ್ಮ ಸ್ನೇಹ ಹಿತ ಸಂಬಂಧ ಮತ್ತು ಗೌರವ ಇದರ ಆಧಾರಿತವಾಗಿದ್ದರೆ ಅದು ಎರಡು ದೇಶಕ್ಕಾಗಿ ಲಾಭದಾಯಕವಾಗಿರುತ್ತದೆ ಮತ್ತು ಭವಿಷ್ಯದಲ್ಲಿ ಕೂಡ ಸಕಾರಾತ್ಮಕವಾಗಿರುತ್ತದೆ.
೩. ದ್ವಿಪಕ್ಷೀಯ ಸಂಬಂಧ ವೈಯಕ್ತಿಕ ಅಥವಾ ಪಕ್ಷ ಆಧಾರಿತವಾಗಿರದೆ ದೇಶದಿಂದ ದೇಶಕ್ಕೆ ಇರಬೇಕು. ಭಾರತಕ್ಕೆ ಏನಾದರೂ ಇದರ ಅರಿವು ಆದರೆ ಅದು ಬಾಂಗ್ಲಾದೇಶದ ಜೊತೆಗೆ ಸಂಬಂಧ ದೃಢಗೊಳಿಸುವುದಕ್ಕಾಗಿ ಖಂಡಿತವಾಗಿ ಯೋಗ್ಯ ದೃಷ್ಟಿಕೋನ ಸ್ವೀಕರಿಸುವುದು.
“India should stop interfering in our affairs!” – An anti-India statement by Gayeshwar Chandra Roy, leader of the Bangladesh Nationalist Party
Instead of advising India on what it should or should not do, Gayeshwar Chandra Roy should first address the ongoing ethnic cleansing of… pic.twitter.com/jPb67SDBtk
— Sanatan Prabhat (@SanatanPrabhat) December 11, 2024
ಸಂಪಾದಕೀಯ ನಿಲುವು
|