ಡಿಸೆಂಬರ್ ೧೪ ರಂದು ಇರುವ ದತ್ತ ಜಯಂತಿ ನಿಮಿತ್ತ …
‘ಹಿಂದಿನ ಕಾಲದಲ್ಲಿ ಪೃಥ್ವಿಯಲ್ಲಿ ಸ್ಥೂಲ ಮತ್ತು ಸೂಕ್ಷ್ಮ ರೂಪದಲ್ಲಿ ಆಸುರಿಶಕ್ತಿಗಳು ಬೃಹತ್ ಪ್ರಮಾಣದಲ್ಲಿ ಹೆಚ್ಚಿತ್ತು. ಅವರಿಗೆ ‘ದೈತ್ಯ’ ಎಂದು ಹೇಳುತ್ತಿದ್ದರು. ದೇವಗಣರು ಆ ಆಸುರಿ ಶಕ್ತಿಗಳನ್ನು ನಾಶ ಮಾಡುವುದಕ್ಕಾಗಿ ಮಾಡಿರುವ ಪ್ರಯತ್ನಗಳು ವಿಫಲವಾಗುತ್ತಿದ್ದವು. ಆಗ ಬ್ರಹ್ಮದೇವರ ಆದೇಶದಂತೆ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೂಪದಲ್ಲಿ ದತ್ತ ದೇವರು ಅವತಾರ ತಾಳಬೇಕಾಯಿತು. ಅನಂತರ ದೈತ್ಯರ ನಾಶವಾದರು. ಆ ದಿನವೇ ‘ದತ್ತ ಜಯಂತಿ’ ಎಂದು ಆಚರಿಸುತ್ತಾರೆ.
ಹದಿನಾರು ಅವತಾರಗಳು !
೧. ಪ್ರಮುಖ ಅವತಾರಗಳು
ಅ. ಶ್ರೀಪಾದ ಶ್ರೀವಲ್ಲಭ, ಆ. ಶ್ರೀನರಸಿಂಹ ಸರಸ್ವತಿ
ಇ. ಶ್ರೀ ಮಾಣಿಕ ಪ್ರಭು, ಈ. ಶ್ರೀ ಸ್ವಾಮಿ ಸಮರ್ಥ
ಉ. ಶ್ರೀ ಸಾಯಿಬಾಬಾ, ಊ. ಶ್ರೀ ಭಾಲಚಂದ್ರ ಮಹಾರಾಜ
೨. ಶ್ರೀಪಾದ ಶ್ರೀವಲ್ಲಭ ಇದು ದತ್ತಗುರುಗಳ ಮೊದಲನೇ ಅವತಾರ. ಅವರು ೧೫ ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ದತ್ತೋಪಾಸನೆ ಆರಂಭಿಸಿದರು. ಶ್ರೀ ನರಸಿಂಹ ಸರಸ್ವತಿ ಇವರು ದತ್ತ ಗುರುಗಳ ಎರಡನೆಯ ಅವತಾರ. ಶ್ರೀ ಗುರುಚರಿತ್ರೆಯಲ್ಲಿ ಶ್ರೀಪಾದ ಶ್ರೀ ವಲ್ಲಭ ಮತ್ತು ಶ್ರೀ ನರಸಿಂಹ ಸರಸ್ವತಿ ಇವರ ವಿಸ್ತೃತ ಮಾಹಿತಿ ಇದೆ.
೩. ದತ್ತ ಗುರುಗಳು ಒಟ್ಟು ಮುಖ್ಯ ೧೬ ಅವತಾರ ತಾಳಿದ್ದರು. ಪ.ಪ. ವಾಸುದೇವಾನಂದ ಸರಸ್ವತಿ ಕೃತ’ ಶ್ರೀ ದತ್ತಾತ್ರೇಯ ಶೋಡಷೋವತಾರಃ ‘ಇದರಲ್ಲಿ ಈ ಅವತಾರಗಳ ಕಥೆಗಳು ಇವೆ.
೪. ದತ್ತಾತ್ರೇಯರ ೧೬ ಅಂಶ ಅಂಶಾತ್ಮಕ ಅವತಾರಗಳು ಕೂಡ ಆಗಿವೆ. ಇದರಲ್ಲಿ ಶ್ರೀ ವಾಸುದೇವಾನಂದ ಸರಸ್ವತಿ (ಪ.ಪ. ಟೆಂಬ್ಯೇಸ್ವಾಮಿ) ಇವರೂ ಒಬ್ಬರು.
೫. ಅಕ್ಕಲಕೋಟದ ಸ್ವಾಮಿ ಸಮರ್ಥ : ಜನರ ಸಂಕಷ್ಟಗಳನ್ನು ದೂರಗೊಳಿಸಲು ಶ್ರೀ ನರಸಿಂಹ ಸರಸ್ವತಿ ಇವರು ತಮ್ಮ ಶಿಷ್ಯರಿಗೆ ಹೇಳಿ ಕರ್ದಲಿವನಕ್ಕೆ ಹೋದರು. ಅಲ್ಲೇ ತಪಸ್ಸು ಮಾಡುತ್ತಿರುವಾಗ ಅವರ ಮೇಲೆ ಇರುವೆಗಳು ಹುತ್ತನ್ನು ಕಟ್ಟಿದವು ಮತ್ತು ಅವರ ಪೂರ್ಣ ದೇಹ ಮುಚ್ಚಿ ಹೋಯಿತು. ಎಷ್ಟೋ ವರ್ಷಗಳ ನಂತರ ಓರ್ವ ಮರ ಕಡಿಯವನು ಆ ವನದಲ್ಲಿ ಕಟ್ಟಿಗೆಗಳನ್ನು ಕಡಿಯುತ್ತಿರುವಾಗ ಅವನ ಕೊಡಲಿ ಜಾರಿ ಆ ಹುತ್ತದÀ ಮೇಲೆ ಬಿದ್ದಿತು. ಕೊಡಲಿಯ ಅಲಗಿಗೆ ರಕ್ತ ಅಂಟಿರುವುದು ನೋಡಿ ಅವನು ಹೆದರಿದನು ಮತ್ತು ಅವನು ಹುತ್ತನ್ನು ಬಗೆದನು. ಅದರಿಂದ ನರಸಿಂಹ ಸರಸ್ವತಿ ಇವರು ಅಕ್ಕಲಕೋಟಸ್ವಾಮಿ ಎಂದು ಹೊರ ಬಂದರು. ಸ್ವಾಮಿಯು ಅಕ್ಕಲಕೋಟದಲ್ಲಿ ಈಗಿನ ಮಠದಲ್ಲಿರುವ ಔದುಂಬರ ವೃಕ್ಷದ ಕೆಳಗೆ ವಾಸಿಸುತ್ತಿದ್ದರು.
ದತ್ತಗುರುಗಳ ಅಲರ್ಕ, ಪ್ರಲ್ಹಾದ, ಯದು, ಸಹಸ್ರಾರ್ಜುನ, ಪರಶುರಾಮ ಮುಂತಾದ ಶಿಷ್ಯರು ಪ್ರಸಿದ್ಧರಾಗಿದ್ದಾರೆ.